ಡ್ರಗ್ಸ್ ಮಾಫಿಯಾದಲ್ಲಿ ಪೊಲೀಸರು, ರಾಜಕಾರಣಿಗಳು ಶಾಮೀಲು| ಸಾವಿರಾರು ಕೋಟಿ ರು. ಲೆಕ್ಕದಲ್ಲಿ ಡ್ರಗ್ಸ್ ದಂಧೆ ನಡಿಯುತ್ತಿದೆ. ಪೊಲೀಸರು ತಮ್ಮ ಕಡೆಯಿಂದ ಡ್ರಗ್ಸ್ ಮಾಫಿಯಾ ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ಹೇಳಲಿ, ಅವರ ಕೈಯಿಂದ ಆಗದಿದ್ರೆ ನಾನು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ ಮುತಾಲಿಕ್|
ಹಾವೇರಿ(ಸೆ.03): ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದೊಂದಿಗೆ ಸೆಕ್ಸ್ ಜಾಲವೂ ಸಕ್ರಿಯವಾಗಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿನ ಡ್ರಗ್ಸ್ ಮಾಫಿಯಾದ ಬಗ್ಗೆ 2009ರಲ್ಲೇ ನಾನು ಧ್ವನಿ ಎತ್ತಿದ್ದೆ. ಆದರೆ ಆ ಸಮಯದಲ್ಲಿ ಎಲ್ಲರೂ ನನ್ನನ್ನೂ ಟಾರ್ಗೆಟ್ ಮಾಡಿದರು. ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಕ್ರಿಯವಾಗಿದೆ. ಇಂದ್ರಜಿತ್ ಲಂಕೇಶ್ ಡ್ರಗ್ ವಿಚಾರದಲ್ಲಿ ಹೀರೋ ಆಗಲು ಹೊರಟಿದ್ದಾರೆ. ಅವರ ಕುಟುಂಬದವರೇ ಡ್ರಗ್ಸ್‌ಗೆ ಅಡಿಕ್ಟ್ ಆಗಿದ್ದರೂ ಇವರೇಕೆ ಸುಧಾರಿಸುವ ಪ್ರಯತ್ನ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
undefined
ಗಾಂಜಾ ಔಷಧ, ಆರೋಗ್ಯಕ್ಕೆ ಒಳ್ಳೆಯದು: ನಟ ರಾಕೇಶ್ ಅಡಿಗ ಅಸಂಬದ್ಧ ಪ್ರಲಾಪ
ಅಲ್ಲದೇ ಕನ್ನಡ ಚಲನಚಿತ್ರ ನಟರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ಡ್ರಗ್ಸ್ ವಿಚಾರದಲ್ಲಿ ಚಿರಂಜೀವಿ ಸರ್ಜಾರ ಹೆಸರು ತೆಗೆದುಕೊಂಡಿರುವುದು ಸರಿಯಲ್ಲ. ಸರ್ಜಾ ಕುಟುಂಬ ಉತ್ತಮ ಸಂಸ್ಕಾರ ಹೊಂದಿದೆ. ಡ್ರಗ್ಸ್ ಮಾಫಿಯಾದಲ್ಲಿ ಮುಖ್ಯವಾಗಿ ಪೊಲೀಸರು ಹಾಗೂ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಪೊಲೀಸರಿಗೆ ಡ್ರಗ್ಸ್ ಜಾಲದ ಬಗ್ಗೆ ಎಲ್ಲ ಮಾಹಿತಿ ಗೊತ್ತಿರುತ್ತದೆ. ಆದರೂ ಅವರು ಯಾವುದೇ ಕ್ರಮ ಕೈಗೊಳ್ಳಲ್ಲ ಎಂದರು.
ಸಾವಿರಾರು ಕೋಟಿ ರು. ಲೆಕ್ಕದಲ್ಲಿ ಡ್ರಗ್ಸ್ ದಂಧೆ ನಡಿಯುತ್ತಿದೆ. ಪೊಲೀಸರು ತಮ್ಮ ಕಡೆಯಿಂದ ಡ್ರಗ್ಸ್ ಮಾಫಿಯಾ ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ಹೇಳಲಿ, ಅವರ ಕೈಯಿಂದ ಆಗದಿದ್ರೆ ನಾನು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದರು.