ಸಚಿವ ರೇವಣ್ಣ ಪುತ್ರ ಪ್ರಜ್ವಲ್‌ಗೆ ಕಾದಿದೆಯಾ ‘ಡೀಸಿ’ ಬಿಸಿ?

By Web DeskFirst Published Dec 12, 2018, 9:30 PM IST
Highlights

ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣರಿಂದ ಅಕ್ರಮ ಭೂ ಒತ್ತುವರಿ ಆರೋಪ; ನ್ಯಾಯಾಲಯದ ಮೊರೆ ಹೋಗಿದ್ದ ಕಾಂಗ್ರೆಸ್ ನಾಯಕ ಎ. ಮಂಜು; ವರದಿ ನೀಡುವಂತೆ ಹಾಸನ ಜಿಲ್ಲಾಧಿಕಾರಿಗೆ ಸೂಚನೆ
 

ಬೆಂಗಳೂರು: ಜೆಡಿಎಸ್ ಯುವನಾಯಕ ಪ್ರಜ್ವಲ್ ರೇವಣ್ಣ ವಿರುದ್ದದ  ಭೂ ಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಹಾಸನ ಜಿಲ್ಲಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.

ಸಚಿವ‌ ಹೆಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅಕ್ರಮ ಭೂ ಒತ್ತುವರಿ ಮಾಡಿದ್ದಾರೆಂದು ಕಾಂಗ್ರೆಸ್ ನಾಯಕ ಎ. ಮಂಜು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರು ಭೂ ಕಬಳಿಕೆ ತಡೆ ನ್ಯಾಯಾಲಯ , ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ವರದಿ ಸಲ್ಲಿಸುವಂತೆ ಸೂಚಸಿದೆ.

ಇದನ್ನೂ ಓದಿ: ಸಚಿವ ಎಚ್.ಡಿ ರೇವಣ್ಣ ಮಕ್ಕಳಿಗೆ ಶಾಕ್: ಅಕ್ರಮ ಒತ್ತುವರಿಗೆ ಬಿತ್ತು ಬ್ರೇಕ್

ಹಾಸನ ತಾಲೂಕಿನ ಸೋಮನಹಳ್ಳಿ ಕಾವಲಿನಲ್ಲಿ ಪ್ರಜ್ಷಲ್ ರೇವಣ್ಣ 69 ಎಕರೆ ಭೂ ಒತ್ತುವರಿ ಮಾಡಿದ್ದಾರೆಂದು ಮಂಜು ಆರೋಪ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಆಗಲೇ ನಮಗೆ‌ ಇದರ ಬಗ್ಗೆ ಸ್ಪಷ್ಟನೆ ‌ನೀಡಲಿಲ್ಲ. ಅದಕ್ಕಾಗಿ‌  ನ್ಯಾಯಾಲಯಕ್ಕೆ ಹೋಗಬೇಕಾಯ್ತು ಎಂದ ಮಾಜಿ ಸಚಿವ ಎ.ಮಂಜು ದೂರವಾಣಿ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಂದ ಹಿಂದೇಟು?

click me!