ಸಿಎಂಗೆ ಧಮ್ ಇಲ್ವಾ?, ಕುಮಾರಸ್ವಾಮಿಗೆ ಹಾಸನ ಮಹಿಳೆ ಆವಾಜ್..!

By Web DeskFirst Published Dec 2, 2018, 8:29 PM IST
Highlights

ಹಾಸನದ ಮಹಿಳೆಯೊಬ್ಬರು ಸಿಎಂ ಎಚ್. ಡಿ ಕುಮಾರಸ್ವಾಮಿ ಅವರಿಗೆ ಅವಾಜ್ ಹಾಕಿದ್ದಾರೆ. ಏಕೆ? ಇಲ್ಲಿದೆ ಡಿಟೇಲ್ಸ್..

ಹಾಸನ, [ಡಿ.2] ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗ್ತಿದೆ. ಆನೆಗಳ ಕಾಟದಿಂದ ಜನರು ಭಯಭೀತರಾಗಿ ಜೀವನ ಸಾಗಿಸುತ್ತಿದ್ದಾರೆ. 

ರಾಜೇಂದ್ರಪುರ ಗ್ರಾಮವೊಂದರಲ್ಲೇ 20ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ರೈತರು ಬೆಳೆದ ಬೆಳೆಗಳನ್ನ ನಾಶ ಮಾಡಿವೆ. ಇದ್ರಿಂದ ರೈತರು ಬೆಳ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತ ಬಾಳುಪಟೆಯಲ್ಲಿ ಇದೇ ಆನೆ ಹಾವಳಿ ತಡೆಯೋಕೆ ಕಳೆದ ನಾಲ್ಕು ದಿನದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನಾ ನಿರತ ಮಹಿಳೆ ಚಿಕ್ಕನಾಯಕನಹಳ್ಳಿ ಜ್ಯೋತಿ ಎನ್ನುವರು ಸಿಎಂಗೆ ಅವಾಜ್ ಹಾಕಿದ್ದು, ಸಿಎಂ ಕುಮಾರಸ್ವಾಮಿಗೆ ಆನೆ ಹಾವಳಿ ತಡೆಯೋಕೆ ಧಮ್ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಇತ್ತ  ಆನೇಕಲ್ನಲ್ಲಿಯೂ ಕಾಡಾನೆ ಹಿಂಡು ಬೀಡು ಬಿಟ್ಟಿದ್ದು, ರೈತರು ಬೆಳೆದ ಬೆಳೆ ನಾಶವಾಗಿದೆ. ಅಲ್ದೇ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!