ವಿಶ್ವದಲ್ಲೇ ಭಾರತ ಜನಸಂಖ್ಯೆಯಲ್ಲಿ ಮೊದಲನೆಯ ಸ್ಥಾನಕ್ಕೇರಿದೆ. ಇದು ಸಂತಸಪಡುವ ವಿಷಯವಲ್ಲವಾದರೂ ಜನಸಂಖ್ಯೆ ಹೆಚ್ಚಳದಿಂದ ಕೃಷಿ, ಉದ್ಯೋಗ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಸ್ವಾವಲಂಬಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಯಲ್ಲಾಪುರ (ಜು.27): ವಿಶ್ವದಲ್ಲೇ ಭಾರತ ಜನಸಂಖ್ಯೆಯಲ್ಲಿ ಮೊದಲನೆಯ ಸ್ಥಾನಕ್ಕೇರಿದೆ. ಇದು ಸಂತಸಪಡುವ ವಿಷಯವಲ್ಲವಾದರೂ ಜನಸಂಖ್ಯೆ ಹೆಚ್ಚಳದಿಂದ ಕೃಷಿ, ಉದ್ಯೋಗ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಸ್ವಾವಲಂಬಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಪಟ್ಟಣದ ಅಡಕೆ ಭವನದಲ್ಲಿ ಬುಧವಾರ ನಡೆದ ‘ವಿಶ್ವ ಜನಸಂಖ್ಯಾ ದಿನಾಚರಣೆ-ಅಭಿಯಾನ 2023’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಲವು ದೇಶಗಳ ಜನಸಂಖ್ಯೆ ಕಡಿಮೆ ಇದ್ದರೂ ಆರ್ಥಿಕವಾಗಿ ಮೇಲೆ ಬರಲಿಲ್ಲ. ಆದರೆ 142 ಕೋಟಿ ಜನಸಂಖ್ಯೆ ಹೊಂದಿದ ಭಾರತ ಆರ್ಥಿಕವಾಗಿಯೂ ಭಲಾಢ್ಯವಾಗುತ್ತಿದೆ. ವಿಶ್ವದ ಮಾರುಕಟ್ಟೆಯಲ್ಲಿ ಭಾರತ ಮಹತ್ವದ ಪಾತ್ರವಹಿಸುತ್ತಿದೆ. ಅಲ್ಲದೇ ಹಲವಾರು ದೇಶಗಳಲ್ಲಿ ಬುದ್ಧಿವಂತ ಯುವಕರು ಆ ದೇಶದ ಪ್ರಗತಿಗೆ ಕಾರಣರಾಗುತ್ತಿದ್ದಾರೆ. ಜನಸಂಖ್ಯೆ ಭಾರತಕ್ಕೆ ಹೊರೆ ಆಗಿಲ್ಲವಾದರೂ ಭವಿಷ್ಯತ್ತಿನ ದೃಷ್ಟಿಯಿಂದ ನಿಯಂತ್ರಣ ಅನಿವಾರ್ಯವಾಗಿದೆ. ಈ ದೃಷ್ಟಿಯಿಂದ ಯುವ ಜನಾಂಗಕ್ಕೆ ಸರಿಯಾದ ಶಿಕ್ಷಣ, ತಿಳಿವಳಿಕೆ ನೀಡುವ ಮೂಲಕ ಜನಸಂಖ್ಯೆಯ ನಿಯಂತ್ರಣ ಮಾಡಬಹುದು ಎಂದರು.
undefined
ರಕ್ತದಾನದ ಬಗ್ಗೆ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ: ಮಾಜಿ ಸಚಿವ ಸುಧಾಕರ್
ಬಿಇಒ ಎನ್.ಆರ್. ಹೆಗಡೆ ಮಾತನಾಡಿ, ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣವೊಂದೆ ಪರಿಹಾರ. ಭಾರತ ಜಗತ್ತಿನ ಶೇ. 42ರಷ್ಟುಅಕ್ಕಿ ರಪ್ತು ಮಾಡುತ್ತದೆ. ಅಂತಹ ಸಂಪದ್ಭರಿತ ರಾಷ್ಟ್ರವಾದರೂ ಶಿಕ್ಷಣ ಮತ್ತು ಉದ್ಯೋಗ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕಾಸ್ಪತ್ರೆ ತಜ್ಞ ವೈದ್ಯೆ ಡಾ. ಸೌಮ್ಯಾ ಕೆ.ವಿ, ಮಾತನಾಡಿ, ಒಂದು ದೇಶಕ್ಕೆ ಮಾನವ ಸಂಪತ್ತೆ ಪ್ರಧಾನವಾದದ್ದು. ಆದರೆ ಇಂದು ವಿಶ್ವದಲ್ಲಿ 500 ಕೋಟಿ ಜನಸಂಖ್ಯೆ ದಾಟಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಆಗ್ರಹಿಸಿದೆ. ಇಂದು ಕೃತಕ ಮಾನವ ನಿರ್ಮಿತ ವ್ಯಕ್ತಿಗಳನ್ನು ಉದ್ಯೋಗದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಇದರಿಂದಲೂ ಮುಂದಿನ ದಿನ ಜನಸಂಖ್ಯೆ ಹೆಚ್ಚಳಕ್ಕೆ ಮತ್ತು ಉದ್ಯೋಗಕ್ಕೆ ತೊಂದರೆ ಉಂಟಾಗಲಿದೆ. ನಮ್ಮ ಇಲಾಖೆ ಈ ನಿಟ್ಟಿನಲ್ಲಿ ಸದಾ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.
ಪಿಯು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಉಚಿತ ತರಬೇತಿ: ಶಾಸಕ ಪ್ರದೀಪ್ ಈಶ್ವರ್
ಶಿರಸಿಯ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರಕುಮಾರ ತೋನ್ಸೆ ಮಾತನಾಡಿ, ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿಯೊಂದೆ ಪರಿಹಾರ. ಯಲ್ಲಾಪುರದ ಹಳ್ಳಿಯೊಂದನ್ನು ದತ್ತು ಪಡೆದು ಅಲ್ಲಿನ ಜನರಿಗೆ ಅನಾರೋಗ್ಯದ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶ ಹೊಂದಿದ್ದೇವೆ ಎಂದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ರಮೇಶ, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ತಾಪಂ ಇಒ ಜಗದೀಶ ಕಮ್ಮಾರ, ಆಶಾ ಕಾರ್ಯಕರ್ತೆ ಶಿಲ್ಪಾ ಹೆಗಡೆ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಟಿ. ಭಟ್ಟ, ಮಹೇಶ ತಾಳಿಕೋಟೆ ಇದ್ದರು.