ರೇಷ್ಮೆ ಉತ್ಪನ್ನಗಳ ಪ್ರಮಾಣವನ್ನು ದ್ವಿಗುಣಗೊಳಿಸುವಂತೆ ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರು (ಜು.27): ರೇಷ್ಮೆ ಉತ್ಪನ್ನಗಳ ಪ್ರಮಾಣವನ್ನು ದ್ವಿಗುಣಗೊಳಿಸುವಂತೆ ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಮಾನಂದವಾಡಿ ರಸ್ತೆಯ ಮೈಸೂರು ರೇಷ್ಮೆ ಕಾರ್ಖಾನೆಗೆ ಮೊದಲ ಬಾರಿಗೆ ಭೇಟಿ ನೀಡಿದ ಅವರು ರೇಷ್ಮೆ ಸೀರೆ ತಯಾರಿಕೆ ವಿಧಾನವನ್ನು ವೀಕ್ಷಿಸಿದ ಬಳಿಕ ಮಾತನಾಡಿದರು. ರೇಷ್ಮೆ ಉದ್ಯಮಗಳ ನಿಗಮದಲ್ಲಿನ ರೇಷ್ಮೆ ಸೀರೆ ತಯಾರಿಕೆ ವಿಧಾನವಾದ ಡೈಯಿಂಗ್, ಸ್ಪಿನ್ನಿಂಗ್, ವಾರ್ಪಿಂಗ್, ನೇಯ್ಗೆಯ ನಾಲ್ಕು ಹಂತಗಳ ತಯಾರಿಕೆ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ರೇಷ್ಮೆ ಸೀರೆ, ಶಲ್ಯ, ಪಂಚೆಗೆ ಹೆಚ್ಚಿನ ಬೇಡಿಕೆ ಇರುವುದರಿಂದರಿಂದ ವಾರ್ಷಿಕವಾಗಿ ತಯಾರಿಸುವ ಉತ್ಪನ್ನಗಳ ಪ್ರಮಾಣ ದ್ವಿಗುಣಗೊಳಿಸಲು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಉತ್ಪಾದನೆ ಸಂಬಂಧ ಪೂರ್ಣ ಮಾಹಿತಿ ಪಡೆದು ಹಂತ ಹಂತವಾಗಿ ಉತ್ಪನ್ನಗಳ ತಯಾರಿಕೆ ಹೆಚ್ಚಿಸಲು ನಿರ್ದೇಶ ನೀಡಿರುವುದಾಗಿ ಅವರು ಹೇಳಿದರು. ನಿಗಮದ ಉತ್ಪನ್ನಗಳು ಮೊದಲ ಸ್ಥಾನದಲ್ಲಿವೆ. ಸೀರೆಗಳು 24 ಗಂಟೆಯಲ್ಲಿ ಮಾರಾಟವಾಗುತ್ತವೆ. ಜನರಿಂದ ಬೇಡಿಕೆ ಹೆಚ್ಚಿರುವುದರಿಂದ ಉತ್ಪನ್ನಗಳ ತಯಾರಿಕೆ ಹೆಚ್ಚಿಸುವಂತೆ ಸೂಚಿಸಲಾಗಿದೆ. ಮೈಸೂರಿನಲ್ಲಿ ಈಗಾಗಲೇ 6 ಮಳಿಗೆಗಳು ಇರುವುದರಿಂದ ನೂತನ ಮಳಿಗೆ ತೆರೆಯುವ ಪ್ರಸ್ತಾಪವಿಲ್ಲ.
ಕರ್ನಾಟಕವನ್ನು ಪ್ರವಾಸೋದ್ಯಮ ಸ್ನೇಹಿ ರಾಜ್ಯವಾಗಿಸಲು ಬದ್ಧ: ಸಚಿವ ಎಚ್.ಕೆ.ಪಾಟೀಲ್
ಕೆಎಸ್‌ಐಸಿ ಹೆಸರಿನಲ್ಲಿ ಸೀರೆ ಮಾರಾಟ ಮಾಡುತ್ತಿದ್ದವರಿಗೆ ನೊಟೀಸ್ ನೀಡಿ, ಪೊಲೀಸರಿಗೆ ದೂರು ನೀಡಲಾಗಿದೆ ಎಂದರು. ಮೃಗಾಲಯದ ಎದುರಿನಲ್ಲಿ ನೂತನ ಮಳಿಗೆ ಪ್ರಾರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಶೇ. 90 ಕೆಲಸಗಳು ಪೂರ್ಣಗೊಂಡಿವೆ. 10 ದಿನಗಳಲ್ಲಿ ಮಳಿಗೆ ಆರಂಭವಾಗಲಿದೆ ಎಂದು ಅವರು ವಿವರಿಸಿದರು. ಕಡಿಮೆ ಬೆಲೆಗೆ ರೇಷ್ಮೆ ಸೀರೆ ಮಾರಾಟ ಕುರಿತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಬೇಕು. ವರ ಮಹಾಲಕ್ಷ್ಮೇ ಹಬ್ಬಕ್ಕೆ ಕಡಿಮೆ ಬೆಲೆಯಲ್ಲಿ ರೇಷ್ಮೆ ಸೀರೆ ಮಾರಾಟ ಸಂಬಂಧ ತೀರ್ಮಾನಿಸಿಲ್ಲ. ಈ ಬಗ್ಗೆ ಅಧಿಕಾರಿಗಳೊಡನೆ ಚರ್ಚಿಸುವುದಾಗಿ ಅವರು ಹೇಳಿದರು.
ರೈತರಿಗೆ ಅನಾನುಕೂಲ ಆಗದಂತೆ ಕೆಎಸ್‌ಐಸಿ ರೇಷ್ಮೆ ಗೂಡು ಖರೀದಿಸುತ್ತದೆ. ರೇಷ್ಮೆ ಯಾವ ಗುಣಮಟ್ಟದಲ್ಲಿದ್ದರೂ ವಾಪಸ್ ಕಳುಹಿಸುತ್ತಿಲ್ಲ. ಖರೀದಿಗೆ ನಮ್ಮ ಬಳಿ ಸಾಕಷ್ಟುಹಣ ಇದೆ. ಸಹಾಯಧನ ವಿತರಿಸುವ ಬಗ್ಗೆ ಚರ್ಚಿಸಿಲ್ಲ. ರೇಷ್ಮೆ ಬೆಳೆಗೆ ಉತ್ತೇಜನ ಕೊಡಲು ಆಲೋಚಿಸಿದ್ದೇವೆ. ಹುಣಸೂರು, ಪಿರಿಯಾಪಟ್ಟಣ ಭಾಗದಲ್ಲಿ ಹೆಚ್ಚಾಗಿ ತಂಬಾಕು ಬೆಳೆಯುತ್ತಾರೆ. ಪರ್ಯಾಯ ಬೆಳೆಯಾಗಿ ರೇಷ್ಮೆ ಬೆಳೆಯುವಂತೆ ಅರಿವು ಮೂಡಿಸುವುದರ ಜತೆಗೆ ಉತ್ತೇಜನ ಕೊಡಬೇಕಿದೆ ಎಂದು ಅವರು ಹೇಳಿದರು.
ರೇಷ್ಮೆಗೂಡಿನ ದರ 650 ಗಳಿಂದ 300-350ಕ್ಕೆ ಇಳಿದಿದೆ. ಈಗ ಸ್ವಲ್ಪ ಏರಿಕೆಯಾಗಿದೆ. ರೇಷ್ಮೆ ಗೂಡಿನ ದರ 430 ಇದೆ. ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಸಿಗುವ ನಿರೀಕ್ಷೆ ಕೂಡ ಇದೆ. ಹಾಗಾಗಿ ರೈತರು ಆತಂಕಪಡಬೇಕಿಲ್ಲ ಎಂದು ಅವರು ತಿಳಿಸಿದರು. ನಿಗಮದ ಎಂಡಿ ವಿ.ವಿ. ಜೋತ್ಸಾ ಮಾತನಾಡಿ, 2012-22ರಲ್ಲಿ 4.5 ಲಕ್ಷ ಮೀಟರ್ ಸೀರೆ ತಯಾರಿಸಿದ್ದೇವೆ. 2022-23ರಲ್ಲಿ 5.5 ಲಕ್ಷ ಮೀಟರ್‌ಗೆ ಏರಿಸಿದೆವು. ಇದರಿಂದ 200 ಕೋಟಿ ಆದಾಯದಿಂದ 240 ಕೋಟಿಗೆ ಏರಿಕೆ ಆಗಿದೆ ಎಂದು ಮಾಹಿತಿ ನೀಡಿದರು.
ಕಣ್ಣನ್ ಮಾಮ ಮೇರು ವ್ಯಕ್ತಿತ್ವದ ಮಹಾಚೈತನ್ಯ: ಗುರುರಾಜ ಕರಜಗಿ
ಕಾರ್ಖಾನೆ ಸ್ಥಿತಿಗತಿ ಪರಿಶೀಲನೆ: ರೇಷ್ಮೆ ನೇಯ್ಗೆ ಕಾರ್ಖಾನೆಯ ಸ್ಥಿತಿಗತಿ ಅರಿಯಲು ರೇಷ್ಮೆ ಸಚಿವ ಕೆ. ವೆಂಕಟೇಶ್ ಬುಧವಾರ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದರು. ಹಳೆಯ ನೇಯ್ಗೆ ಕಾರ್ಖಾನೆ ವಿಭಾಗ, ಹಾನೆಸ್ವ್ ಮಗ್ಗಗಳ ವಿಭಾಗ, ಪಿ.ಪಿ. ಶೆಡ್ ವಿಭಾಗ, ಹೊಸ ನೇಯ್ಗೆ, ಗೋದಾಮು, ರೇಷ್ಮೆ ಸೀರೆ ನೇಯ್ಗೆ, ಸೀರೆ ವಾಷಿಂಗ್, ಬಣ್ಣ ಹಾಕುವುದು, ಪಾಲಿಸ್ ಮಾಡುವುದು, ಸೀರೆ ಕಟಿಂಗ್, ಅಂತಿಮ ಹಂತದ ಪರಿಶೀಲನೆ ಘಟಕಗಳಿಗೆ ತೆರಳಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಕಾರ್ಖಾನೆಯ ವ್ಯವಸ್ಥಾಪಕರು ಎಲ್ಲಾ ಬ್ಲಾಕ್ ಮತ್ತು ಸೀರೆ ತಯಾರಾಗಿ ಗ್ರಾಹಕರ ಕೈಗೆ ರೇಷ್ಮೆ ಸೀರೆ ಸಿಗುವವರೆಗಿನ ಎಲ್ಲಾ ಮಾಹಿತಿ ನೀಡಿದರು. ಎಂಡಿ ವಿ.ವಿ. ಜೋತ್ಸಾ ಇದ್ದರು.