ನಾಲ್ಕು ದಶಕ ಶಿವಮೊಗ್ಗದ ಜನರಿಗೆ ಮನರಂಜನೆ ನೀಡಿದ್ದ ಲಕ್ಷಿ ್ಮೕ ಟಾಕೀಸ್ ಇತಿಹಾಸದ ಪುಟ ಸೇರಿದೆ. ಚಿತ್ರಮಂದಿರವನ್ನು ತೆರವು ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ಈ ಮೂಲಕ ನಗರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಮತ್ತೊಂದು ಥಿಯೇಟರ್ ಇನ್ನು ನೆನಪಾಗಿ ಉಳಿಯಲಿದೆ.
ಶಿವಮೊಗ್ಗ (ಮಾ.19) : ನಾಲ್ಕು ದಶಕ ಶಿವಮೊಗ್ಗದ ಜನರಿಗೆ ಮನರಂಜನೆ ನೀಡಿದ್ದ ಲಕ್ಷಿ ್ಮೕ ಟಾಕೀಸ್ ಇತಿಹಾಸದ ಪುಟ ಸೇರಿದೆ. ಚಿತ್ರಮಂದಿರವನ್ನು ತೆರವು ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ಈ ಮೂಲಕ ನಗರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಮತ್ತೊಂದು ಥಿಯೇಟರ್ ಇನ್ನು ನೆನಪಾಗಿ ಉಳಿಯಲಿದೆ.
1984ರಲ್ಲಿ ಶಿವಮೊಗ್ಗದ ಹೊಸಮನೆ ಬಡಾವಣೆ ಸಮೀಪ ಆರಂಭವಾದ ಶ್ರೀ ಲಕ್ಷಿ ್ಮೕ ಟಾಕೀಸ್(Sri lakshmi talkies)ನಲ್ಲಿ ಮೊದಲ ಚಿತ್ರ ಪ್ರದರ್ಶನ ಕಂಡಿದ್ದು, ವರನಟ ಡಾ. ರಾಜಕುಮಾರ್(Dr rajakumar) ಅವರ ಅಭಿನಯದ ‘ಶ್ರೀನಿವಾಸ ಕಲ್ಯಾಣ’(Srinivas kalyana) ಸಿನಿಮಾ. ಈ ಚಿತ್ರಮಂದಿರದ ಪಕ್ಕದಲ್ಲಿರುವ ಸರ್ಕಲ್ ವಾಸ್ತವದಲ್ಲಿ ಶಾಂತವೇರಿ ಗೋಪಾಲಗೌಡ ಸರ್ಕಲ…. ಆದರೆ, ಜನರು ಚಿತ್ರಮಂದಿರದ ಹೆಸರಿನೊಂದಿಗೆ ಸರ್ಕಲ್ ಮತ್ತು ಸುತ್ತಮುತ್ತಲ ರಸ್ತೆಯನ್ನು ಗುರುತಿಸುತ್ತಾರೆ. ಹಾಗಾಗಿ ಲಕ್ಷಿ ್ಮೕ ಟಾಕೀಸ್ ಶಿವಮೊಗ್ಗದ ಪ್ರಮುಖ ಲ್ಯಾಂಡ್ ಮಾರ್ಕ್ ಆಗಿದ್ದು, ಈ ವೃತ್ತ ಈಗಲೂ ಲಕ್ಷಿ ್ಮೕ ಟಾಕೀಸ್ ಸರ್ಕಲ್ ಎಂದೇ ಜನಪ್ರಿಯ. ಅಷ್ಟರ ಮಟ್ಟಿಗೆ ಹೆಸರು ಮಾಡಿದ ಟಾಕೀಸ್ ಈಗ ಶಾಶ್ವತವಾಗಿ ಬಾಗಿಲು ಹಾಕಿದೆ. ಸುಮಾರು 4 ದಶಕಗಳ ಹಳೆಯ ಈ ಚಿತ್ರಮಂದಿರಕ್ಕೆ ಕೊರೋನಾ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟನೀಡಿತ್ತು. ಈ ಕಾರಣ ಚಿತ್ರಮಂದಿರವನ್ನೂ ಸಂಪೂರ್ಣವಾಗಿ ಬಂದ್ ಮಾಡಬೇಕೆಂದು ಮಾಲೀಕರು ನಿರ್ಧಾರಿಸಿದ್ದಾರೆ.
undefined
ನಾಳೆ ಮಾರ್ಟಿನ್ ಟೀಸರ್ ರಿಲೀಸ್: ಚಿತ್ರಮಂದಿರ ಹೌಸ್ ಫುಲ್
ಟಾಕೀಸ್ ಉದ್ಘಾಟನೆಗೆ ಆಗಮಿಸಿದ್ದ ದಿಗ್ಗಜರು:
ಡಾ. ವಿಷ್ಣುವರ್ಧನ್ ಮತ್ತು ಸೌಂದರ್ಯ ಅಭಿನಯದ ‘ಆಪ್ತಮಿತ್ರ’ ಸಿನಿಮಾ ಇಲ್ಲಿ ದಾಖಲೆ ಪ್ರದರ್ಶನ ಕಂಡಿತ್ತು. 300 ದಿನ ಸಿನಿಮಾ ಪ್ರದರ್ಶನವಾಗಿತ್ತು. ರಾಜ್ಯದ ಐದಾರು ಚಿತ್ರಮಂದಿರಗಳಲ್ಲಿ ಮಾತ್ರ ಈ ಸಿನಿಮಾ 300 ದಿನ ಪ್ರದರ್ಶನವಾಗಿತ್ತು. ಅದರಲ್ಲಿ ಲಕ್ಷಿ ್ಮೕ ಟಾಕೀಸ್ ಕೂಡ ಒಂದು. ಲಕ್ಷ್ಮೀ ಟಾಕೀಸ್‌ಗೆ ವಿವಿಧ ಸಂದರ್ಭದಲ್ಲಿ ಹಲವು ನಟ, ನಟಿಯರು ಭೇಟಿ ಕೊಟ್ಟಿದ್ದಿದೆ. ಚಿತ್ರಮಂದಿರದ ಉದ್ಘಾಟನಾ ಸಮಾರಂಭಕ್ಕೆ ನಟರಾದ ಡಾ.ಅಂಬರೀಷ್, ಡಾ.ವಿಷ್ಣುವರ್ಧನ್, ಪ್ರಭಾಕರ್ ಅವರು ಆಗಮಿಸಿದ್ದರು. ‘ಆಪ್ತಮಿತ್ರ’ ಸಕ್ಸಸ್ ಹಿನ್ನೆಲೆ ನಟ, ನಿರ್ಮಾಪಕ ದ್ವಾರಕೇಶ್, ಡಾ.ವಿಷ್ಣುವರ್ಧನ್, ನಟಿ ಪ್ರೇಮಾ ಬಂದಿದ್ದರು. ನಿನಗಾಗಿ ಸಿನಿಮಾ ನಿರಂತರ 200 ದಿನ ಪ್ರದರ್ಶನ ಕಂಡ ಹಿನ್ನೆಲೆ ನಿರ್ದೇಶಕ ಪ್ರೇಮ್ ಭೇಟಿ ನೀಡಿದ್ದರು. ನಟರಾದ ಸುದೀಪ್, ದರ್ಶನ್ ತೂಗುದೀಪ, ಆದಿತ್ಯ, ಡಾಲಿ ಧನಂಜಯ ಸೇರಿದಂತೆ ಹಲವು ನಟರು ಇಲ್ಲಿಗೆ ಬಂದಿದ್ದರು.
ವರನಟ ಡಾ.ರಾಜ್‌ಕುಮಾರ್ ಅಭಿನಯದ ‘ಶ್ರೀನಿವಾಸ ಕಲ್ಯಾಣ’ ಸಿನಿಮಾ ಈ ಟಾಕೀಸ್‌ನಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರವಾದರೆ, ನಟ ಸುದೀಪ್, ಅನೂಪ್ ಭಂಡಾರಿ, ನಟಿಯರಾದ ನೀತಾ ಅಶೋಕ್, ಜಾಕ್ವೆಲೀನ್ ಫರ್ನಾಂಡೀಸ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ ಲಕ್ಷಿ ್ಮೕ ಟಾಕೀಸಿನಲ್ಲಿ ಪ್ರದರ್ಶನಗೊಂಡ ಕೊನೆಯ ಸಿನಿಮಾ.
ಜನರು ಮೆಚ್ಚಿದ ಚಿತ್ರಮಂದಿರ
ಶಿವಮೊಗ್ಗದ ಮೊದಲ ಮತ್ತು ಏಕೈಕ ಏರ್ ಕೂಲ್ಡ್ ಆಡಿಟೋರಿಯಂ ಇದಾಗಿತ್ತು. ಗಾಂಧಿ ಕ್ಲಾಸ್, ಬಾಲ್ಕನಿಯಲ್ಲ ಸೇರಿ ಒಟ್ಟು 928 ಸೀಟ್ ಲಕ್ಷಿ ್ಮೕ ಟಾಕೀಸಿನಲ್ಲಿದ್ದವು. ಇಲ್ಲಿ ಸಿನಿಮಾ ನೋಡಲು ಅಕ್ಕಪಕ್ಕದ ಊರುಗಳಿಂದಲೂ ಜನರು ಬರುತ್ತಿದ್ದರು. ಎತ್ತಿನಗಾಡಿ ಕಟ್ಟಿಕೊಂಡು, ಟ್ರ್ಯಾಕ್ಟರ್‌ಗಳಲ್ಲಿ ಕುಟುಂಬ ಸಹಿತ ಪ್ರೇಕ್ಷಕರು ಆಗಮಿಸುತ್ತಿದ್ದರು. ಹಲವು ಭಾರಿ ಇಡೀ ರಾತ್ರಿ ಕಾದಿದ್ದು, ಬೆಳಗ್ಗೆ ಮೊದಲ ಪ್ರದರ್ಶನದಲ್ಲಿ ತಮ್ಮ ನೆಚ್ಚಿನ ನಟ, ನಟಿಯರ ಸಿನಿಮಾಗಳನ್ನು ಜನರು ವೀಕ್ಷಿಸುತ್ತಿದ್ದರು.
ಚಿತ್ರಮಂದಿರ ಆರಂಭಗೊಂಡಾಗ ಡಿ.ಲಕ್ಕಪ್ಪ ಅವರು ಲಕ್ಷ್ಮೇ ಚಿತ್ರಮಂದಿರದ ಮಾಲೀಕರಾಗಿದ್ದರು. ಈ ಟಾಕೀಸ್‌ಗೆ ಲಕ್ಷಿ ್ಮೕ ಟಾಕೀಸ್ ಎಂದು ಹೆಸರು ಬರಲು ಎರಡು ಕಾರಣಗಳಿವೆ. ನಮ್ಮ ಮನೆ ದೇವರು ಶ್ರೀ ಹಟ್ಟಿಲಕ್ಕಮ್ಮ. ನಮ್ಮ ಅಜ್ಜಿ ಹೆಸರು ಲಕ್ಷ ್ಮಮ್ಮ. ಇದೇ ಕಾರಣಕ್ಕೆ ಲಕ್ಷಿ ್ಮೕ ಟಾಕೀಸ್ ಅನ್ನುವ ಹೆಸರು ಬಂತು. ನಮ್ಮ ಮನೆಯಿಂದ ಹಿಡಿದು ಎಲ್ಲದಕ್ಕೂ ನಾವು ಲಕ್ಷ್ಮೇ ಹೆಸರನ್ನೆ ಇಟ್ಟಿದ್ದೇವೆ ಎಂದು ಲಕ್ಷಿ ್ಮೕ ಟಾಕೀಸ್ ಮಾಲೀಕ, ಡಿ.ಲಕ್ಕಪ್ಪ ಅವರ ಮೊಮ್ಮಗ ಅಶೋಕ್ ಹೇಳುತ್ತಾರೆ.
ಬೆಳಗಾವಿ: ಪಠಾಣ್ ಚಿತ್ರ ಪ್ರದರ್ಶಿಸದಂತೆ ಚಿತ್ರಮಂದಿರದ ಮೇಲೆ ಹಿಂದೂಪರ ಕಾರ್ಯಕರ್ತರ ದಾಳಿ
ಆಗಲಿದೆ ಮಿನಿ ಮಾಲ್
ಹೊಸ ಪೀಳಿಗೆಯ ಪ್ರೇಕ್ಷಕರು ಅಪ್‌ಡೇಟ್ ಕೇಳುತ್ತಾರೆ. ಇದೇ ಕಾರಣಕ್ಕೆ ಮಾಲ್‌ಗಳಲ್ಲಿರುವ ಮಲ್ಟಿಪ್ಲೆಕ್ಸ್‌ಗಳಿಗೆ ಹೋಗಿ ಬರುತ್ತಾರೆ. ನಮ್ಮಲ್ಲಿ ಒಂದೇ ಸಿನಿಮಾ ಪ್ರದರ್ಶನ ಮಾಡಬೇಕು. ಮಾಲ್‌ನಲ್ಲಿ ನಾಲ್ಕು ವಿಭಿನ್ನ ಸಿನಿಮಾಗಳನ್ನು ಒಮ್ಮೆಲೆ ಪ್ರದರ್ಶಿಸಬಹುದು. ಜನರಿಗೆ ಯಾವ ಸಿನಿಮಾ, ಯಾವ ಸಮಯ ಹೊಂದಿಕೆ ಆಗುತ್ತದೋ ಅದರಂತೆ ಚಿತ್ರ ನೋಡಲು ಹೋಗುತ್ತಾರೆ. ನಾವು ಕೂಡ ಅಪ್‌ಡೇಟ್ ಆಗುತ್ತಿದ್ದೇವೆ. ಹೀಗಾಗಿ ಲಕ್ಷಿ ್ಮೕ ಟಾಕೀಸ್ ಕಟ್ಟಡವನ್ನು ಕೆಡವಲಾಗುತ್ತಿದೆ. ಇದೇ ಜಾಗದಲ್ಲಿ ಮಿನಿ ಮಾಲ್ ನಿರ್ಮಿಸಲು ಉದ್ದೇಶಿಸಲಾಗಿದೆ. ಸಿಟಿ ಸೆಂಟರ್ ಮಾದರಿಯಲ್ಲೇ ಇಲ್ಲಿಯೂ ವಿವಿಧ ಮಳಿಗೆಗಳು ಬರಲಿವೆ. ಕೊನೆಯ ಫೆä್ಲೕರ್‌ನಲ್ಲಿ ಸಿನಿಮಾ ಪ್ರದರ್ಶನಕ್ಕೆ ಮಲ್ಟಿಪ್ಲೆಕ್ಸ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಲಕ್ಷಿ ್ಮೕ ಟಾಕೀಸ್ ಮಾಲೀಕ ಅಶೋಕ್ ತಿಳಿಸಿದರು.
ಕೋವಿಡ್ ತಂದೊಡ್ಡಿದ ಸಂಕಷ್ಟ
ಕೋವಿಡ್-19 ಹಾವಳಿ ಬಳಿಕ ಚಿತ್ರಮಂದಿರದವರಿಗೆ ತುಂಬಾ ಸಮಸ್ಯೆಯಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಸಂಬಳ, ನಿರ್ವಹಣೆ ವೆಚ್ಚ ನಿಭಾಯಿಸಲು ಕಷ್ಟವಾಯಿತು. ಲಕ್ಷಿ ್ಮೕ ಟಾಕೀಸ್ ರೀತಿಯ ಹಲವು ಸಿಂಗಲ್ ಸ್ಕ್ರೀನ್ ಅಥವಾ ಸೋಲೋ ಟಾಕೀಸ್‌ಗಳು ದೇಶಾದ್ಯಂತ ಬಂದ್ ಆಗಿವೆ. ಸರ್ಕಾರದಿಂದ ಒಂದು ವರ್ಷ ಕಂದಾಯದಲ್ಲಿ ಸ್ವಲ್ಪ ಪ್ರಮಾಣದ ವಿನಾಯಿತಿ ನೀಡಿಲಾಗಿತ್ತು. ಆದರೂ ನಿರ್ವಹಣೆ ಕಷ್ಟವಾಯಿತು. ಪ್ರತಿ ತಿಂಗಳು ನಿರ್ಹವಣೆಗೆ ಒಂದೂವರೆ ಲಕ್ಷ ರು. ಬೇಕಿತ್ತು. ಸಿಬ್ಬಂದಿ ಸಂಬಳ, ಕಂದಾಯ, ವಿದ್ಯುತ್ ಬಿಲ್ ಸೇರಿ ಹಲವು ಬಗೆಯ ಖರ್ಚುಗಳು ಇರುತ್ತವೆ. ಇವೆಲ್ಲವನ್ನು ನಿಭಾಯಿಸಲು ಕಷ್ಟವಾದ ಹಿನ್ನೆಲೆ ಅನ್ಯ ಯೋಚನೆ ಮಾಡಬೇಕಾಗಿದೆ. ಒಟಿಟಿ ಪ್ಲಾಟ್ ಫಾರಂಗಳು ಕೂಡ ಚಿತ್ರಮಂದಿರಗಳಿಗೆ ಸವಾಲಾಗಿವೆ ಎನ್ನುವುದು ಮಾಲೀಕ ಅಶೋಕ್ ಲೆಕ್ಕಾಚಾರದ ಮಾತು.