Ballari News: ಅರೆಬರೆ ರಸ್ತೆ ಅಗಲೀಕರಣ ರೊಚ್ಚಿಗೆದ್ದ ಗ್ರಾಮಸ್ಥರು

By Kannadaprabha News  |  First Published Nov 26, 2022, 11:40 AM IST

ಮಾಗಳ ಗ್ರಾಮದಿಂದ ಕೆ. ಅಯ್ಯನಹಳ್ಳಿ ರಸ್ತೆ ಒತ್ತುವರಿ ತೆರವು ಅರೆಬರೆಯಾಗಿದ್ದು, ನಿಯಮಗಳ ಪ್ರಕಾರ ಒತ್ತುವರಿ ತೆರವು ಮಾಡಿದ ಬಳಿಕ ಕಾಮಗಾರಿ ಆರಂಭಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕಾಮಗಾರಿ ತಡೆ ಹಿಡಿದಿರುವ ಘಟನೆ ಜರುಗಿದೆ.


ಹೂವಿನಹಡಗಲಿ (ನ.26) : ತಾಲೂಕಿನ ಮಾಗಳ ಗ್ರಾಮದಿಂದ ಕೆ. ಅಯ್ಯನಹಳ್ಳಿ ರಸ್ತೆ ಒತ್ತುವರಿ ತೆರವು ಅರೆಬರೆಯಾಗಿದ್ದು, ನಿಯಮಗಳ ಪ್ರಕಾರ ಒತ್ತುವರಿ ತೆರವು ಮಾಡಿದ ಬಳಿಕ ಕಾಮಗಾರಿ ಆರಂಭಿಸಿ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕಾಮಗಾರಿ ತಡೆ ಹಿಡಿದಿರುವ ಘಟನೆ ಜರುಗಿದೆ.

ಮಾಗಳ ಗ್ರಾಮ ವ್ಯಾಪ್ತಿಯಿಂದ ಕೆ. ಅಯ್ಯನಹಳ್ಳಿ ರಸ್ತೆ ಅಗಲೀಕರಣ ಮಾಡಿ, ಸಿಸಿ ರಸ್ತೆ ನಿರ್ಮಿಸಲು ಪಿಎಂಜಿಎಸ್‌ವೈ ಇಲಾಖೆಯಿಂದ .1.70 ಕೋಟಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಇಕ್ಕೆಲಗಳಲ್ಲಿ ಚರಂಡಿ ಮತ್ತು ಸಿಡಿ ನಿರ್ಮಾಣ ಸೇರಿದಂತೆ ಸಿಸಿ ರಸ್ತೆ ಕಾಮಗಾರಿ ಗುತ್ತಿಗೆದಾರರು ಮಾಡಬೇಕಿದೆ.ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಇಲಾಖೆಯ ನಿಯಮಗಳನ್ನು ಪಾಲನೆ ಮಾಡದ ಗುತ್ತಿಗೆದಾರರು, ತಮಗೆ ತಿಳಿದಂತೆ ಒತ್ತುವರಿ ತೆರವು ಮಾಡಿದ್ದಾರೆ. ಒತ್ತುವರಿ ಅಳತೆಯಲ್ಲಿ ಸಾಕಷ್ಟುವ್ಯತ್ಯಾಸಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಗ್ರಾಮಸ್ಥರು,ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

Tap to resize

Latest Videos

undefined

ಸಿಎಂ ಕ್ಷೇತ್ರದಲ್ಲಿಯೇ ಕಳಪೆ ಕಾಮಗಾರಿ: ಗುತ್ತಿಗೆದಾರನ ಮೇಲೆ ಸೋಮಣ್ಣ ಗರಂ

ಕೆ.ಅಯ್ಯನಹಳ್ಳಿ ಪ್ಲಾಟ್‌ ಬಳಿ ಸಿಡಿಯೊಂದನ್ನು ನಿರ್ಮಿಸಿರುವ ಹಿನ್ನೆಲೆಯಲ್ಲಿ ಮಳೆ ನೀರು ಗ್ರಾಮದ ತಗ್ಗು ಪ್ರದೇಶ ಸೇರಿದಂತೆ ಮನೆಯೊಳಗೆ ನುಗ್ಗುತ್ತಿದೆ.ಆದರಿಂದ ಆ ಸಿಡಿ ಕಾಮಗಾರಿ ಕೂಡಲೇ ಮುಚ್ಚಬೇಕು.ಮಳೆ ಹಾಗೂ ಮಳೆ ಬಳಕೆಯ ನೀರನ್ನು ಚರಂಡಿ ಮೂಲಕವೇ ಹರಿಸಬೇಕು.ರಸ್ತೆಯ ಎಲ್ಲ ಕಡೆಗೂ ಒಂದೇ ಅಳತೆ ಪ್ರಮಾಣದಂತೆ ಒತ್ತುವರಿ ತೆರವು ಮಾಡದಿದ್ದರೇ ಕಾಮಗಾರಿ ಆರಂಭಿಸಲು ಬಿಡುವುದಿಲ್ಲವೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರು ಕಾಮಗಾರಿಗೆ ತಡೆದಿದ್ದರಿಂದ ಪಿಎಂಜಿಎಸ್‌ವೈ ಇಲಾಖೆ ಎಇಇ ವೆಂಕಟೇಶ್ವರ ರಾವ್‌,ಸ್ಥಳಕ್ಕೆ ಬಂದು ಗ್ರಾಮಸ್ಥರ ಬೇಡಿಕೆ ಆಲಿಸಿದ್ದಾರೆ.ರಸ್ತೆ ಕಾಮಗಾರಿಯಲ್ಲಿ ಆಗಿರುವ ವ್ಯತ್ಯಾಸ ಸರಿಪಡಿಸಿದ ಬಳಿಕ ಕಾಮಗಾರಿ ಆರಂಭಿಸುತ್ತೇವೆಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಈ ರಸ್ತೆ ಕಾಮಗಾರಿಯಲ್ಲಿ ನಿರ್ಮಿಸಿರುವ ಸಿಡಿಯಿಂದ ಮಳೆ ನೀರು,ಗ್ರಾಮದ ಗುಡಿಯವರ ಓಣಿಯ ಪಟ್ಟಾನಿವೇಶನದ ತಗ್ಗು ಗುಂಡಿ ಹಾಗೂ ಮನೆಯೊಳಗೆ ನುಗ್ಗುತ್ತದೆ. ಈಗಾಗಲೇ 3-4 ಮನೆಗಳಿಗೆ ನೀರು ನುಗ್ಗಿ ಬಿದ್ದಿವೆ. ಆದರಿಂದ ನೀರಿನ ಮಾರ್ಗ ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದ್ದೇವೆ ಎಂದು ಗ್ರಾಮಸ್ಥ ಗುಡಿ ಭೂಪಾಲಪ್ಪ ಹೇಳಿದರು.Koppala: ಪ್ರಾಮಾಣಿಕನೆಂದು ಹೇಳಿಕೊಳ್ಳುವ ಸಚಿವರ ಕ್ಷೇತ್ರದಲ್ಲಿ ಅತ್ಯಂತ ಕಳಪೆ ರಸ್ತೆ ಕಾಮಗಾರಿ

click me!