ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಪೊಲೀಸರೇ ಮನೆಗೆ ಬರ್ತಾರೆ

Kannadaprabha News   | Asianet News
Published : Mar 05, 2020, 07:44 AM IST
ಸಂಚಾರಿ ನಿಯಮ ಉಲ್ಲಂಘಿಸಿದ್ರೆ ಪೊಲೀಸರೇ ಮನೆಗೆ ಬರ್ತಾರೆ

ಸಾರಾಂಶ

ಸಂಚಾರಿ ನಿಯಮಗಳನ್ನು ಎಷ್ಟುಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೂ, ನಿಯಮಗಳನ್ನು ಉಲ್ಲಂಘಿಸುವವರಿಗೇನೂ ಕಡಿಮೆ ಇಲ್ಲ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಬಂಟ್ವಾಳದ ನೂತನ ಟ್ರಾಫಿಕ್‌ ಎಸ್‌ಐ ರಾಜೇಶ್‌ ಕೆ.ವಿ ಅವರು ಡಿಜಿಟಲ್‌ ತಂತ್ರಜ್ಞಾನದ ಬಳಕೆಗೆ ಮುಂದಾಗಿದ್ದಾರೆ.  

ಮಂಗಳೂರು(ಮಾ.05): ಸಂಚಾರಿ ನಿಯಮಗಳನ್ನು ಎಷ್ಟುಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೂ, ನಿಯಮಗಳನ್ನು ಉಲ್ಲಂಘಿಸುವವರಿಗೇನೂ ಕಡಿಮೆ ಇಲ್ಲ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಬಂಟ್ವಾಳದ ನೂತನ ಟ್ರಾಫಿಕ್‌ ಎಸ್‌ಐ ರಾಜೇಶ್‌ ಕೆ.ವಿ ಅವರು ಡಿಜಿಟಲ್‌ ತಂತ್ರಜ್ಞಾನದ ಬಳಕೆಗೆ ಮುಂದಾಗಿದ್ದಾರೆ.

ಏನಿದು ಡಿಜಿಟಲ್‌ ತಂತ್ರಜ್ಞಾನ?:

ಟ್ರಾಫಿಕ್‌ಪೊಲೀಸರು ರಸ್ತೆ ಬದಿಯಲ್ಲಿ ಕಾದು ಕುಳಿತು ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವುದರಿಂದ, ಕೆಲವೊಮ್ಮೆ ಕೆಲ ವಾಹನ ಸವಾರರು ಪೊಲೀಸರ ಕಣ್ಣು ತಪ್ಪಿಸಿಹೋಗುವ ಸಾಧ್ಯತೆ ಇದೆ. ಅಲ್ಲದೆ ಬಲವಂತವಾಗಿ ನಿಲ್ಲಿಸಿದರೆ ಘರ್ಷಣೆಗೂ ಕಾರಣವಾಗಬಹುದು.

ಶಾಲೆ ಮುಗಿಯುವ ಹೊತ್ತಿಗೆ ಯುನಿಫಾರ್ಮ್ ಅನುದಾನ ಬಂತು..!

ಈ ಹಿನ್ನೆಲೆಯಲ್ಲಿ ರಸ್ತೆಯ ವಿವಿಧೆಡೆಗಳಲ್ಲಿ ಅಳವಡಿಸಲಾದ ಸಿ.ಸಿ. ಕ್ಯಾಮರಾದ ಫäಟೇಜ್‌ ಬಳಕೆ ಮಾಡಿ ಆ ಮೂಲಕ ನೋಟಿಸ್‌ ಜಾರಿ ಮಾಡಿ ದಂಡ ವಸೂಲಿಗೆ ಮುಂದಾಗಿದ್ದಾರೆ. ತ್ರಿಬಲ್‌ ರೈಡ್‌, ಹೆಲ್ಮೆಟ್‌ ಇಲ್ಲದೆ ಪ್ರಯಾಣ, ಅತಿಯಾದ ವೇಗ, ಒನ್‌ ವೇ ಪ್ರಯಾಣ ಮುಂತಾದ ಟ್ರಾಫಿಕ್‌ ಕಿರಿಕಿರಿ ಉಂಟುಮಾಡುವ ಸವಾರರನ್ನು ಸಿಸಿ ಕ್ಯಾಮರಾದ ಮೂಲಕ ಪತ್ತೆ ಹಚ್ಚಿ ಅವರಿಗೆ ನೋಟಿಸ್‌ ಜಾರಿ ಮಾಡಿ ನ್ಯಾಯಾಲಯದಲ್ಲಿ ದಂಡ ಕಟ್ಟುವಂತೆ ಮಾಡುವುದು ಟ್ರಾಫಿಕ್‌ ಎಸ್‌ಐ ರಾಜೇಶ್‌ ಅವರ ಉದ್ದೇಶ.

10 ದಿನದಲ್ಲಿ 40 ನೋಟಿಸ್‌:

ಬಂಟ್ವಾಳ ಸಂಚಾರಿ ಪೊಲೀಸ್‌ ಠಾಣಾಧಿಕಾರಿಯಾಗಿ ಅಧಿಕಾರ ಪಡೆದ ಹತ್ತು ದಿನಗಳಲ್ಲಿ ಸಿಸಿ ಕ್ಯಾಮರಾ ನೋಡಿ ಸುಮಾರು 40 ನೋಟಿಸ್‌ ಜಾರಿ ಮಾಡಿದ್ದಾರೆ. ಟ್ರಾಫಿಕ್‌ ಸಿಬ್ಬಂದಿಯ ಮೂಲಕವೇ ಸಂಚಾರ ನಿಯಮ ಪಾಲಿಸದ ಸವಾರರ ಮನೆಗೆ ಹೋಗಿ ಅವರ ಕೈಗೆ ನೇರವಾಗಿ ನೋಟಿಸ್‌ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಸಿ.ಸಿ ಕ್ಯಾಮರಾ ಬಳಸಿ ಪ್ರಕರಣ ದಾಖಲಿಸುವುದರಿಂದ ಸ್ಥಳದಲ್ಲಿ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಸಿಬ್ಬಂದಿಯೊಂದಿಗೆ ನಡೆಯುವ ಕಿರಿಕಿರಿ ಕೂಡಾ ತಪ್ಪುತ್ತದೆ ಎಂದು ಅವರ ಯೋಚನೆಯಾಗಿದೆ. ಮುಂದಿನ ದಿನಗಳಲ್ಲಿ ಸಿ.ಸಿ.ಕ್ಯಾಮರಾ ಫäಟೇಜ್‌ಗಳನ್ನು ಅನುಸರಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ.

ಪ್ರತ್ಯೇಕ ಘಟನೆ: ನೀರಿನಲ್ಲಿ ಮುಳುಗಿ ಒಟ್ಟು ನಾಲ್ವರು ಸಾವು

ಟ್ರಾಫಿಕ್‌ ಸಿಬ್ಬಂದಿ ಕೈಗೆ ವಿಡಿಯೋ ಕ್ಯಾಮೆರಾ ನೀಡಿ ನಿಯಮ ಉಲ್ಲಂಘಿಸುವವರ ಬಗ್ಗೆ ನಿಗಾ ವಹಿಸುವ ಗುರಿ ಇವರದ್ದಾಗಿದೆ. ಸಂಚಾರಿ ವ್ಯವಸ್ಥೆಗಳನ್ನು ಸುಗಮಗೊಳಿಸಲು ಸಾರ್ವಜನಿಕರು ಟ್ರಾಫಿಕ್‌ ಸಿಬ್ಬಂದಿ ಜೊತೆ ಸಹಕರಿಸಲು ಹಾಗೂ ಸಂಚಾರಿ ನಿಯಮಗಳ ಪಾಲನೆ ಮಾಡವಂತೆ ಅವರು ಮನವಿ ಮಾಡಿದ್ದಾರೆ.

ಬಂಟ್ವಾಳ ತಾಲೂಕಿನ ಟ್ರಾಫಿಕ್‌ ಸಮಸ್ಯೆ ನಿವಾರಣೆ ಮತ್ತು ಸಂಚಾರ ನಿಯಮಗಳ ಪಾಲನೆ ಸರಿಯಾಗಿ ಆಗಬೇಕಾಗಿದೆ, ಆ ಮೂಲಕ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣ ಕಡಿಮೆಯಾಗಬೇಕು ಎಂದು ಬಂಟ್ವಾಳ ಎಸ್‌ಐ ಸಂಚಾರಿ ಪೊಲೀಸ್‌ ಠಾಣೆ ರಾಜೇಶ್‌ ಕೆ.ವಿ ತಿಳಿಸಿದ್ದಾರೆ.

PREV
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು