ಗೃಹ ಸಚಿವರ ವಾಹನ ತಪಾಸಣೆ ಮಾಡದ ಪೇದೆಗಳ ಅಮಾನತು

By Kannadaprabha News  |  First Published Nov 28, 2019, 8:20 AM IST

ಗೃಹ ಸಚಿವರ ಕಾರನ್ನು ತಪಾಸಣೆ ಮಾಡದೇ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸ್‌ ಪೇದೆಗಳನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಇಲಾಖಾ ವಿಚಾರಣೆಗೆ ಒಳಪಡಿಸುವಂತೆ ಜಿಲ್ಲಾ ಚುಣಾವಣಾಧಿಕಾರಿಗಳು ಸೂಚನೆ ನೀಡಿದ್ದಾರೆ.


ಮಂಡ್ಯ(ನ.28): ಗೃಹ ಸಚಿವರ ಕಾರನ್ನು ತಪಾಸಣೆ ಮಾಡದೇ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸ್‌ ಪೇದೆಗಳನ್ನು ಅಮಾನತು ಮಾಡಲಾಗಿದೆ. ಮದ್ದೂರು ಸಂಚಾರಿ ಠಾಣೆ ಪೇದೆ ಶ್ರೀನಿವಾಸ್‌ ಹಾಗೂ ಬೆಸಗರಹಳ್ಳಿ ಠಾಣೆಯ ಮಹಿಳಾ ಪೇದೆ ಗೌರಮ್ಮ ಎಂಬುವರನ್ನು ಅಮಾನತು ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಜಿಲ್ಲಾ ಎಸ್ಪಿಗೆ ಆದೇಶಿಸಿದ್ದಾರೆ.

ಮದ್ದೂರು ತಾಲೂಕಿನ ನಿಡಘಟ್ಟಸಮೀಪದ ಚೆಕ್‌ ಪೋಸ್ಟ್‌ನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಾರನ್ನು ತಪಾಸಣೆ ನಡೆಸದೆ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಇಲಾಖಾ ವಿಚಾರಣೆಗೆ ಒಳಪಡಿಸುವಂತೆ ಜಿಲ್ಲಾ ಚುಣಾವಣಾಧಿಕಾರಿಗಳು ಸೂಚನೆ ನೀಡಿದ್ದಾರೆ.

Latest Videos

undefined

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಗೃಹ ಸಚಿವರ ಕಾರು ಚಾಲಕನ ವಿರುದ್ಧ FIR

ನ.20ರಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಂಗಳೂರಿನಿಂದ ಮೈಸೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕರ್ತವ್ಯನಿರತ ಪೊಲೀಸ್‌ ಪೇದೆ ಕಾರನ್ನು ತಡೆಯಲು ಮುಂದಾದರೂ ಸಚಿವರ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ತೆರಳಿದ್ದ. ಈ ಪ್ರಕರಣ ಕುರಿತು ಈಗಾಗಲೇ ಮದ್ದೂರು ಪೊಲೀಸರು ಸಚಿವರ ಕಾರಿನ ಚಾಲಕನ ವಿರುದ್ಧ ಐಪಿಸಿ 188ರ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಎಫ್‌ಐಆರ್‌ ಸಲ್ಲಿಸಿದ್ದಾರೆ.

ಎಚ್‌ಡಿಕೆ ಕಣ್ಣೀರಿಗೆ ಜನ ಕೊಚ್ಚಿ ಹೋಗಲ್ಲ: ಡಿವಿಎಸ್‌ ಟಾಂಗ್..!

click me!