ಧಾರವಾಡ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಪೊಲೀಸ್ ಕಾನ್ಸ್‌ಟೇಬಲ್ ಸಾವು

Published : Sep 20, 2023, 10:12 PM IST
ಧಾರವಾಡ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಪೊಲೀಸ್ ಕಾನ್ಸ್‌ಟೇಬಲ್ ಸಾವು

ಸಾರಾಂಶ

ಛಬ್ಬಿ ಗಣೇಶೋತ್ಸವ ಬಂದೋ ಬಸ್ತ್‌ಗೆ ಪೊಲೀಸ್‌ ಸಿಬ್ಬಂದಿ ತೆರಳಿದ್ದರು. ಡ್ಯೂಟಿ ಮುಗಿಸಿ ಮರಳಿ ಬರುವಾಗ ನಡೆದ ಘಟನೆ. 

ಧಾರವಾಡ(ಸೆ.20): ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸ್‌ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ‌ 4 ರಲ್ಲಿ  ಇಂದು(ಬುಧವಾರ) ನಡೆದಿದೆ. ಹುಚ್ಚೇಶ ಹಿರೇಗೌಡರ (37), ಮೃತ ಕ್ಯಾನ್ಸ್‌ಟೇಬಲ್‌ರಾಗಿದ್ದಾರೆ. 

ಬೈಕ್‌ ಹಿಂಬದಿ ಕುಳಿತಿದ್ದ ಮಹಿಳಾ ಕಾನ್ಸ್‌ಟೇಬಲ್‌ಗೆ ಗಂಭೀರವಾದ ಗಾಯಗಳಾಗಿವೆ. ಲಕ್ಷ್ಮೀ ಎಂಬುವರೇ ಗಾಯಗೊಂಡ ಮಹಿಳಾ ಕಾನ್ಸ್‌ಟೇಬಲ್‌ರಾಗಿದ್ದಾರೆ. 

ಕಲಬುರಗಿ: ರೈಲು ಡಿಕ್ಕಿ ಹೊಡೆದು ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾವು

ಛಬ್ಬಿ ಗಣೇಶೋತ್ಸವ ಬಂದೋ ಬಸ್ತ್‌ಗೆ ಪೊಲೀಸ್‌ ಸಿಬ್ಬಂದಿ ತೆರಳಿದ್ದರು. ಡ್ಯೂಟಿ ಮುಗಿಸಿ ಮರಳಿ ಬರುವಾಗ ಘಟನೆ ನಡೆದಿದೆ.  ಗಾಯಾಳು ಲಕ್ಷ್ಮೀ ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು