
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ(ಸೆ.20): ರಾಜ್ಯ ಸರಕಾರ ವಾರಾಬಂಧಿ, ಅಮಸರ್ಪಕ ವಿದ್ಯುತ್ ಪೊರೈಕೆ ಸೇರಿದಂತೆ ಹಲವು ರೈತ ವಿರೋಧಿ ನೀತಿ ಹಾಗೂ ಬಿಜೆಪಿ ಮುಖಂಡರ ಮೇಲೆ ಹಾಕಿರುವ ಸುಳ್ಳು ಕೇಸ್ ಗಳನ್ನು ಖಂಡಿಸಿ ಹುಣಸಗಿ ಪಟ್ಟಣದಲ್ಲಿ ಮಾಜಿ ಸಚಿವ ರಾಜುಗೌಡ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಇಂದು(ಬುಧವಾರ) ಬೃಹತ್ ಪ್ರತಿಭಟನೆ ನಡೆಸಿದರು.
ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶಿಲ್ದಾರ್ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಹಸೀಲ್ದಾರ್ ಕಚೇರಿ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾದ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಯಾದಗಿರಿ: ರಭಸವಾಗಿ ಟ್ರಕ್ ಗುದ್ದಿ 25 ಕುರಿಗಳ ದಾರುಣ ಸಾವು
ವಾರಾಬಂದಿ ಅವೈಜ್ಞಾನಿಕ ಪದ್ಧತಿ: ಮಾಜಿ ಸಚಿವ ರಾಜುಗೌಡ
ರಾಜ್ಯ ಸರ್ಕಾರದ ವಿರುದ್ಧದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿದ ಮಾಜಿ ಸಚಿವ ರಾಜುಗೌಡ ಮಾತನಾಡಿ, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ಜೀವನಾಡಿ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯವಾಗಿದೆ. ಎರಡು ಜಲಾಶಯಗಳಲ್ಲಿ ಸಾಕಷ್ಟು ನೀರು ಇದೆ. ಆದ್ರೂ ಸರ್ಕಾರ ಅವೈಜ್ಞಾನಿಕ ವಾರಬಂದಿ ಜಾರಿ ಮಾಡಿದ್ದಾರೆ. ಇದೊಂದು ವೈಜ್ಞಾನಿಕ ಪದ್ಧತಿಯಾಗಿದೆ. ಇದು ರೈತರಿಗೆ ಸಾಕಷ್ಟು ಸಮಸ್ಯೆಯನ್ನು ಉಂಟು ಮಾಡಿದೆ. ಈ ಅವೈಜ್ಞಾನಿಕ ವಾರಬಂದಿ ರದ್ದು ಮಾಡಬೇಕು. ಈ ಭಾಗದ ಸಚಿವರು ಹಾಗೂ ಶಾಸಕರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಐಸಿಸಿ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಇದರ ಬಗ್ಗೆ ಧ್ವನಿಯೆತ್ತದೆ ಇರುವುದು ದುರ್ದೈವ ಎಂದರು. ಜೊತೆಗೆ ನಮ್ಮ ಸುರಪುರ ಮತಕ್ಷೇತ್ರದಲ್ಲಿ ಸಮರ್ಪಕ ವಿದ್ಯುತ್ ಪೊರೈಕೆ ಮಾಡಲಾಗ್ತಿದೆ. ವಿದ್ಯುತ್ ಕೊರತೆಯಿಂದ ರೈತರ ಜಮೀನಿಗೆ ನೀರು ಹರಿಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಐಪಿಸೆಟ್, ಪಂಪ್ ಸೇಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ ರೈತರ ಬೆಳೆ ಬೆಳೆಯಲು ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರ ಮೇಲೆ ಸುಳ್ಳು ಕೇಸ್: ರಾಜೂಗೌಡ
ಸುರಪುರ ಮತಕ್ಷೇತ್ರದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಮಾಜಿ ಸಚಿವ ರಾಜೂಗೌಡ ನಡುವಿನ ನೇರ ಯುದ್ಧ. ರಾಜುಗೌಡ ಹಾಗೂ ರಾಜಾ ವೆಂಕಟಪ್ಪ ನಾಯಕ ಕಾಳಗ ಮತ್ತೆ ಜೋರಾಗಿದೆ. ಸುರಪುರ ಮತಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಇದರಿಂದಾಗಿ ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ರಾಜಕೀಯ ದ್ವೇಷಕ್ಕೆ ಸುಳ್ಳು ಕೇಸ್ ಹಾಕಿದ್ದಾರೆ. ಸುಳ್ಳು ಕೇಸ್ ದಾಖಲಿಸಿದ ಪಿಎಸ್ಐ ಚಂದ್ರಶೇಖರ ನಾರಾಯಣಪುರ ಅವರನ್ನು ಶೀಘ್ರವೇ ಅಮಾನತು ಮಾಡಬೇಕು. ಹುಣಸಗಿ ಪಿಎಸ್ಐ ಚಂದ್ರಶೇಖರ ನಾರಾಯಣಪುರ ಅವರು ಕಾಂಗ್ರೆಸ್ ಪಕ್ಷದ ಕೈಬೆಯಾಗಿದ್ದಾರೆ. ಇದು ಸರಿಯಲ್ಲ. ನೀವು ಎಲ್ಲರನ್ನು ರಕ್ಷಣೆ ಮಾಡಬೇಕು. ಆದ್ರೆ ಕೆಲವರನ್ನು ಮೆಚ್ಚಿಸಲು ಈ ರೀತಿಯ ಸುಳ್ಳು ಸರಿಯಲ್ಲ ಎಂದರು.
ಮನಸ್ಸು ಸರಿಯಾಗಿಲ್ಲವೆಂದು 10 ತಿಂಗಳ ಮಗುವನ್ನು ಬಿಟ್ಟು ನೇಣಿಗೆ ಶರಣಾದ ತಾಯಿ
ಪಿಎಸ್ಐ ಚಂದ್ರಶೇಖರ ನಾರಾಯಣಪುರ ಅಮಾನತ್ತು ಮಾಡಬೇಕು: ರಾಜುಗೌಡ
ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಜುಗೌಡ ಭಾಷಣದುದ್ದಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಿಎಸ್ಐ ಚಂದ್ರಶೇಖರ ನಾರಾಯಣಪುರ ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ ಅಳಿಯನಾಗಿದ್ದು, ಮಾವ ಹೇಳಿದಂತೆ ಕೇಳ್ತಿದ್ದಾನೆ. ಬಿಜೆಪಿ ಮುಖಂಡರ ವಿರುದ್ಧ ದ್ವೇಷದ ರಾಜಕಾರಣ ಮಾಡಲಾಗ್ತಿದೆ. ನೀನು ಅಳಿಯನಾಗಿದ್ರೆ ಮಾವನ ಸೇವೆ ಮಾಡು. ಪೋಲಿಸ್ ಅಧಿಕಾರಿಯಾಗಿ ರಕ್ಷಣೆ ಮಾಡು. ನಮ್ಮ ಪ್ರತಿಭಟನೆ ಪೋಲಿಸ್ ಇಲಾಖೆ ವಿರುದ್ಧ ಅಲ್ಲ. ಸುಳ್ಳು ಕೇಸ್ ದಾಖಲಿಸಿದ ಪಿಎಸ್ಐ ಚಂದ್ರಶೇಖರ ನಾರಾಯಪುರ ವಿರುದ್ಧವಾಗಿದೆ. ಕೂಡಲೇ ಪೋಲಿಸ್ ಇಲಾಖೆಯ ಮೇಲಾಧಿಕಾರಿಗಳು ಪಿಎಸ್ಐ ಚಂದ್ರಶೇಖರ ನಾರಾಯಣಪುರ ಅವರನ್ನು ಸಸ್ಪೆಂಡ್ ಮಾಡಬೇಕು. ಇಲ್ಲದಿದ್ರೆ ಮುಂದೆ ಉಗ್ರ ಹೋರಾಟ ಮಾಡಲಾಗ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ರಾಜಾ ಹಣಮಪ್ಪ ನಾಯಕ ತಾತಾ, ಸುರೇಶ್ ಸಜ್ಜನ್, ಎಚ್.ಸಿ.ಪಾಟೀಲ್, ವಿರೇಶ ಚಿಂಚೋಳಿ, ಬಸವರಾಜ ಸ್ಥಾವರಮಠ, ಪರಮಣ್ಣ ಪೂಜಾರಿ, ಗದ್ದೆಪ್ಪ ಪೂಜಾರಿ ಮೌನೇಶ ಹಿರೇಮನಿ, ಕೃಷ್ಣಾ ಮುದನೂರು, ರಂಗಣ್ಣಗೌಡ ದೇವಿಕೇರಿ ಭಾಗವಹಿಸಿದ್ದರು.