ಪ್ರಯಾಣಿಕರ ಗಮನಕ್ಕೆ: ವಿಶೇಷ ರೈಲುಗಳ ಸೇವೆ ವಿಸ್ತರಣೆ

By Girish Goudar  |  First Published Sep 20, 2023, 8:12 PM IST

ಎಕ್ಸ್‌ಪ್ರೆಸ್‌ ರೈಲುಗಳನ್ನು ಈಗಿರುವ ಸಮಯ, ನಿಲುಗಡೆ ಮತ್ತು ಸಂಯೋಜನೆಯೊಂದಿಗೆ ಸೂಚಿಸಿದ ವಿಸ್ತರಿಸಲು ನೈರುತ್ಯ ರೈಲ್ವೆ. 


ಹುಬ್ಬಳ್ಳಿ(ಸೆ.20): ರೈಲುಗಳ ಸಂಖ್ಯೆ 07339/40 ಎಸ್.ಎಸ್.ಎಸ್ ಹುಬ್ಬಳ್ಳಿ ಮತ್ತು ಕೆ.ಎಸ್.ಆರ್ ಬೆಂಗಳೂರು ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್‌, ರೈಲುಗಳ ಸಂಖ್ಯೆ 06547/48 ಕೆ.ಎಸ್.ಆರ್ ಬೆಂಗಳೂರು ಮತ್ತು ವೇಲಂಕಣಿ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್‌ ಮತ್ತು ರೈಲುಗಳ ಸಂಖ್ಯೆ 06545/46 ಯಶವಂತಪುರ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಈಗಿರುವ ಸಮಯ, ನಿಲುಗಡೆ ಮತ್ತು ಸಂಯೋಜನೆಯೊಂದಿಗೆ ವಿಸ್ತರಿಸಲು ನೈರುತ್ಯ ರೈಲ್ವೆಯೂ ಸೂಚಿಸಿದೆ. ಅವುಗಳ ವಿವರ ಈ ಕೆಳಗಿನಂತಿದೆ.  

1. ರೈಲು ಸಂಖ್ಯೆ 07339 ಎಸ್.ಎಸ್.ಎಸ್ ಹುಬ್ಬಳ್ಳಿ ಮತ್ತು ಕೆ.ಎಸ್.ಆರ್ ಬೆಂಗಳೂರು ಡೈಲಿ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 30 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗುತ್ತಿದೆ.   

Tap to resize

Latest Videos

ಗಣೇಶ ಹಬ್ಬದ ಪ್ರಯುಕ್ತ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಸೇವೆ, ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

2. ರೈಲು ಸಂಖ್ಯೆ 07340 ಕೆ.ಎಸ್.ಆರ್ ಬೆಂಗಳೂರು ಮತ್ತು ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಅಕ್ಟೋಬರ್ 1 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ನವೆಂಬರ್ 1 ರವರೆಗೆ ವಿಸ್ತರಿಸಲಾಗುತ್ತಿದೆ.  

3. ರೈಲು ಸಂಖ್ಯೆ 06547 ಕೆ.ಎಸ್.ಆರ್ ಬೆಂಗಳೂರು ಮತ್ತು ವೇಲಂಕಣಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 30 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಅಕ್ಟೋಬರ್ 28 ರವರೆಗೆ ವಿಸ್ತರಿಸಲಾಗುತ್ತಿದೆ. (4 ಟ್ರೀಪ್ಸ್‌ 07.10.23, 14.10.23, 21.10.23 ಮತ್ತು 28.10.23 ರಂದು ಸಂಚರಿಸಲಿದೆ).  

4. ರೈಲು ಸಂಖ್ಯೆ 06548 ವೇಲಂಕಣಿ ಮತ್ತು ಕೆ.ಎಸ್.ಆರ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 30 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಅಕ್ಟೋಬರ್ 28 ರವರೆಗೆ ವಿಸ್ತರಿಸಲಾಗುತ್ತಿದೆ. (4 ಟ್ರೀಪ್ಸ್‌ 07.10.23, 14.10.23, 21.10.23 ಮತ್ತು 28.10.23 ರಂದು ಸಂಚರಿಸಲಿದೆ). 

ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಗೋವಾವರೆಗೆ ವಿಶೇಷ ರೈಲು ಆರಂಭಿಸಿದ ನೈಋುತ್ಯ ರೈಲ್ವೆ

5. ರೈಲು ಸಂಖ್ಯೆ 06545 ಯಶವಂತಪುರ ಮತ್ತು ವಿಜಯಪುರ ಡೈಲಿ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 29 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಡಿಸೆಂಬರ್‌ 31 ರವರೆಗೆ ವಿಸ್ತರಿಸಲಾಗುತ್ತಿದೆ. 

6. ರೈಲು ಸಂಖ್ಯೆ 06546 ವಿಜಯಪುರ ಮತ್ತು ಯಶವಂತಪುರ ಡೈಲಿ ವಿಶೇಷ ಎಕ್ಸ್‌ಪ್ರೇಸ್‌ ರೈಲನ್ನು ಸೆಪ್ಟೆಂಬರ್ 30 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜನವರಿ 1, 2024 ರವರೆಗೆ ವಿಸ್ತರಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ. 

click me!