ಶಿವ​ಮೊಗ್ಗ ಏರ್‌ಪೋರ್ಟ್‌ಲ್ಲಿ ಮೊದಲು ಇಳಿಯೋದು ಮೋದಿ ವಿಮಾನ...!

By Kannadaprabha News  |  First Published Feb 17, 2023, 6:18 AM IST

ಫೆ. 27ಕ್ಕೆ  ಪ್ರಧಾನಿ ನರೇಂದ್ರ ಮೋದಿ​ಯಿಂದ ವಿಮಾನ ನಿಲ್ದಾಣ ಉದ್ಘಾ​ಟ​ನೆ, 1700 ಕೋಟಿ ಇತರೆ ಕಾಮಗಾರಿ ಲೋಕಾರ್ಪಣೆ. 


ಶಿವಮೊಗ್ಗ(ಫೆ.17):  ಸೋಗಾನೆಯಲ್ಲಿ ನೂತ​ನ​ವಾಗಿ ನಿರ್ಮಾ​ಣ​ವಾ​ಗಿ​ರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ವಿಮಾನದಲ್ಲಿ ಬಂದಿಳಿಯುವ ಮೂಲಕ ಫೆ.27ರಂದು ಉದ್ಘಾಟಿಸ​ಲಿ​ದ್ದಾರೆ. ಈ ವಿಮಾನ ನಿಲ್ದಾ​ಣ​ದಲ್ಲಿ ಅಧಿ​ಕೃ​ತ​ವಾಗಿ ಇಳಿ​ಯ​ಲಿ​ರುವ ಮೊದಲ ವಿಮಾನ ಪ್ರಧಾನಿ ಮೋದಿ ಅವ​ರದ್ದೇ ಆಗಿ​ರ​ಲಿ​ದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸದ ಬಿ.ವೈ.​ರಾ​ಘ​ವೇಂದ್ರ, ವಿಮಾನ ನಿಲ್ದಾಣ ಉದ್ಘಾ​ಟನೆ ವೇಳೆ ಒಟ್ಟು .1,789 ಕೋಟಿ ವೆಚ್ಚದ ವಿವಿ​ಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಮಾರ್ಗದ ಶಂಕುಸ್ಥಾಪನೆ ಸೇರಿ ಒಟ್ಟು .3,377 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ​ಯೂ ನೆರವೇರಲಿದೆ ಎಂದು ತಿಳಿ​ಸಿ​ದ​ರು. ಜತೆಗೆ, ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯ​ಕ್ರ​ಮ​ದಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಲು ಅವಕಾಶ ಇದ್ದು, 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಸೋಗಾನೆ ವಿಮಾನ ನಿಲ್ದಾಣ ಪ್ರದೇಶದಲ್ಲೇ ಸಮಾರಂಭ ನಡೆಯಲಿದೆ. ಅಲ್ಲೇ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯ​ಕ್ರ​ಮ​ಗ​ಳೂ ನಡೆಯಲಿದೆ ಎಂದು ಹೇಳಿ​ದ​ರು.

Tap to resize

Latest Videos

VISL ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದ ಕೇಂದ್ರ ಸರ್ಕಾರ!

ಕೋಟೆಗಂಗೂರಿನಲ್ಲಿ .76 ಕೋಟಿ ವೆಚ್ಚದಲ್ಲಿ ಕೋಚಿಂಗ್‌ ಡಿಪೋ ಸ್ಥಾಪನೆ ಆಗಲಿದೆ. ಅಲ್ಲೇ .21 ಕೋಟಿ ವೆಚ್ಚದಲ್ಲಿ ಟರ್ಮಿನಲ್‌ ಡಿಪೋ ಆರಂಭವಾಗಲಿದೆ. ಇವುಗಳಿಗೆ ಪ್ರಧಾನಿ ಅವ​ರೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. .1000 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನೆ ನಡೆಯಲಿದೆ. ಹೊಸನಗರ-ಮಾವಿನಕಟ್ಟೆ-ಆಡುಗೋಡಿ-.313.56 ಕೋಟಿ, ಬೈಂದೂರು-ನಾಗೋಡಿ ಅಗಲೀಕರಣ .395 ಕೋಟಿ, ಶಿಕಾರಿಪುರ ಬೈಪಾಸ್‌ ರಸ್ತೆ .56 ಕೋಟಿ, ತೀರ್ಥಹಳ್ಳಿ-ಮೇಗರವಳ್ಳಿ-ಆಗುಂಬೆ ರಸ್ತೆ​ಗೆ .96.20 ಕೋಟಿ, ಭಾರತೀಪುರ ರಸ್ತೆಗೆ .56 ಕೋಟಿ, ಹೊಳೆಹೊನ್ನೂರು ಭದ್ರಾ ಸೇತುವೆ .4.60 ಕೋಟಿ ವೆಚ್ಚವಾಗಲಿದೆ ಎಂದು ವಿವರಿಸಿದರು.

ಸ್ಮಾರ್ಟ್‌ಸಿಟಿ ಕಾಮಗಾರಿ ಲೋಕಾರ್ಪಣೆ

ವಿದ್ಯಾನಗರ ಮೇಲ್ಸೇ​ತುವೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿ​ಸುವ ಗುರಿ ಹೊಂದಲಾಗಿದೆ. ಸ್ಮಾರ್ಟ್‌ಸಿಟಿಯ 44 ಕಾಮಗಾರಿಗಳನ್ನು ಪ್ರಧಾನಮಂತ್ರಿ ಲೋಕಾರ್ಪಣೆ ಮಾಡಲಿದ್ದಾರೆ. ಜಲಜೀವನ್‌ ಮಿಷನ್‌ ಯೋಜನೆಯಡಿ 2,25,700 ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಹಿಂದೆ ಕೇವಲ 94,359 ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸಂಪರ್ಕ ಇತ್ತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ .134 ಕೋಟಿ ವೆಚ್ಚದ ಕಾಮಗಾರಿ ಲೋಕಾರ್ಪಣೆ ಆಗಲಿದೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ 13ನೇ ಕಂತನ್ನು ಮೋದಿ ಅವರು ಶಿವಮೊಗ್ಗದಿಂದಲೇ ರೈತರ ಖಾತೆಗಳಿಗೆ ಜಮೆ ಮಾಡಲಿದ್ದಾರೆ ಎಂದು ಸಂಸ​ದ ರಾಘ​ವೇಂದ್ರ ಮಾಹಿತಿ ನೀಡಿ​ದ​ರು.

click me!