ಒಂದೂವರೆ ಗಂಟೆ ಆಕಾಶದಲ್ಲೇ ಸುತ್ತಾಡಿ ಲ್ಯಾಂಡ್‌ ಆದ ಅನಂತ್ ಕುಮಾರ್ ಹೆಗಡೆ ಇದ್ದ ವಿಮಾನ

By Suvarna News  |  First Published Aug 16, 2020, 11:26 AM IST

ಹವಾಮಾನ ವೈಪರಿತ್ಯದ ಕಾರಣ ವಿಳಂಬವಾಗಿ ಲ್ಯಾಂಡ್ ಆದ ವಿಮಾನ| ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ| ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ| 8:55ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ, 10:25ರವರೆಗೆ ಆಕಾಶದಲ್ಲೇ ಗಿರಕಿ ಹೊಡೆದಿದೆ| ಬೆಂಗಳೂರಿಂದ 46 ಜನರನ್ನು ಹೊತ್ತು ತಂದಿರುವ ವಿಮಾನ| 


ಹುಬ್ಬಳ್ಳಿ(ಆ.16): ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಮಾರು ಒಂದೂವರೆ ಗಂಟೆ ಆಕಾಶದಲ್ಲಿ ಸುತ್ತಾಡಿದ್ದ ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಅಗಿದೆ. ಹೀಗಾಗಿ ವಿಮಾನದಲ್ಲಿದ್ದ ಬಿಜೆಪಿಯ ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ 46 ಪ್ರಯಾಣಿಕರು ನಿರಾಳರಾಗಿದ್ದಾರೆ.

"

Latest Videos

undefined

ಏರ್ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ಬೆಂಗಳೂರಿನಿಂದ ಹುಬ್ಬಳ್ಳಿಗೆ ನಿಲ್ದಾಣದಲ್ಲಿ ಇಂದು(ಭಾನುವಾರ) 8:55ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ 10:25ರವರೆಗೆ ಆಕಾಶದಲ್ಲೇ ಗಿರಕಿ ಹೊಡೆಯುತ್ತಿತ್ತು. ವಿಮಾನದ ಪೈಲಟ್ ಏರ್‌ ಟ್ರಾಫಿಕ್ ಕಂಟ್ರೋಲರ್ ಅನುಮತಿಗೆ ಕಾಯುತ್ತಿದ್ದರು. ಕೊನೆಗೆ ಅನುಮತಿ ಸಿಕ್ಕಿದ್ದರಿಂದ ಸುರಕ್ಷಿತವಾಗಿ ವಿಮಾನ ಲ್ಯಾಂಡ್‌ ಅಗಿದೆ.  

ಧಾರವಾಡ: ನವಲಗುಂದದಲ್ಲಿ ಯೂರಿಯಾ ಪಡೆಯಲು ರೈತರ ಮಾರಾಮಾರಿ

ವಿಮಾನ ಲ್ಯಾಂಡಿಂಗ್‌ಗೆ ಅವಕಾಶ ನೀಡಲು ಎಟಿಸಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ವಿಮಾನ ಆಕಾಶದಲ್ಲೇ ಸುತ್ತಾಡಿದೆ. ಇದರಿಂದ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ ಆತಂಕದಲ್ಲಿದ್ದರು, ಕೊನೆಗೆ ವಿಮಾನ ಲ್ಯಾಂಡಿಗ್‌ಗೆ ಎಟಿಸಿ ಅನುಮತಿ ನೀಡಿದ ಬಳಿಕ ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ. 
 

click me!