* ಕೊರೋನಾ ನಡುವೆ ತಮಿಳುನಾಡು ಪ್ರವಾಸ ಮಾಡಿದ್ದ ಶಿವಮೊಗ್ಗ ಭಕ್ತರು
* ವಾಪಸ್ ಆಗಮಿಸಿದ ಎಲ್ಲರಿಗೂ ಕೊರೋನಾ ಟೆಸ್ಟ್
* ಜಿಲ್ಲಾಡಳಿತದಿಂದ ಕಠಿಣ ಕ್ರಮ
* ಸಚಿವ ಈಶ್ವರಪ್ಪ ಭಕ್ತರನ್ನು ತಮಿಳುನಾಡಿಗೆ ಕಳುಹಿಸಿದ್ದರು
ಶಿವಮೊಗ್ಗ(ಜ. 05) ಕೊರೋನಾ ಏರಿಕೆ ನಡುವೆ ಓಂ ಶಕ್ತಿ ದರ್ಶನಕ್ಕಾಗಿ ತಮಿಳುನಾಡಿಗೆ (Tamilnadu) ಹೋಗಿ ವಾಪಸ್ ಮರಳಿದ ಭಕ್ತರ ತಂಡ ತೀವ್ರ ಆತಂಕ ಸೃಷ್ಟಸಿದ ಬೆನ್ನಲ್ಲೇ ಜಿಲ್ಲಾಡಳಿತ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿದೆ. ಬುಧವಾರ ಮುಂಜಾನೆ ನಗರಕ್ಕೆ ಅಗಮಿಸಿದ ಎಲ್ಲ 25 ಬಸ್ ಗಳನ್ನು ನಗರದ ಹೊರವಲಯದ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಇಳಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಪ್ರತಿಯೊಬ್ಬರನ್ನೂ ಕೋವಿಡ್ (Corona Test) ಟೆಸ್ಟ್ ಗೆ ಒಳಪಡಿಸಲಾಯಿತು.
ಸೋಂಕಿನ ಲಕ್ಷಣ ಕಂಡವರನ್ನು ನೇರವಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಸೋಂಕಿನ ಲಕ್ಷಣ ಇಲ್ಲದವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಅಗಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಶಿವಮೊಗ್ಗ ದಿಂದ 25 ಬಸ್ಸುಗಳಲ್ಲಿ 1250 ಜನ ಭಕ್ತರು ತೆರಳಿದ್ದರು. ಇದೇ ರೀತಿ ರಾಜ್ಯದ ವಿವಿಧ ಭಾಗಗಳಿಂದ ಕೂಡ ತೆರಳಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ(KS Eshwarappa) ಈ ಭಕ್ತರನ್ನು ತಮಿಳುನಾಡಿಗೆ ಕಳುಹಿಸಿದ್ದರು. ಪ್ರತಿವರ್ಷ ಇದೇ ರೀತಿ ಸಾವಿರಾರು ಭಕ್ತರನ್ನು ಕಳುಹಿಸುವುದನ್ನು ರೂಢಿಸಿಕೊಂಡು ಬಂದಿದ್ದಾರೆ. ಆದರೆ ಈ ಸಾರಿ ಕೊರೋನಾ ಆತಂಕ ತಂದಿದೆ.
ಕರ್ನಾಟಕದಲ್ಲಿ ಕೊರೋನಾ ಅಬ್ಬರ: ಕರ್ನಾಟಕ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಆದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ದಿನ ದಿನಕ್ಕೆ ದ್ವಿಗುಣವಾಗುತ್ತಿದೆ.#
UP Elections: ಚುನಾವಣೆ ಮೇಲೆ ಕೊರೋನಾ ಕರಿಛಾಯೆ, ಮೋದಿ ಹಾಗೂ ಕಾಂಗ್ರೆಸ್ ರ‍್ಯಾಲಿ ರದ್ದು!
ಇಂದು(ಜ.05) ಕೊರೋನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಡಬಲ್ ಆಗಿದೆ. ಕಳೆದ 24 ಗಂಟೆಗಳಲ್ಲಿ 4,246 ಪ್ರಕರಣಗಳು ಪತ್ತೆ ಆಗಿವೆ. ಇನ್ನು ಕೊರೋನಾ ಹಾಟ್‌ಸ್ಫಾಟ್ ಆಗುತ್ತಿರುವ ಬೆಂಗಳೂರಿನಲ್ಲಿ ಇಂದು ಒಂದೇ ದಿನ 3,605 ಜನರಿಗೆ ಸೋಂಕು ದೃಢವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಶೇ. 3.33ಕ್ಕೇರಿದೆ. ಕೊರೋನಾ ಆತಂಕದ ಮಧ್ಯೆ ರೂಪಾಂತರಿ ವೈರಸ್ ಒಮಿಕ್ರಾನ್ ಸಹ ಹೆಚ್ಚಳವಾಗಿದ್ದು, ಇದುವರೆಗೆ 226 ಜನರಿಗೆ ಕೇಸ್ ಪತ್ತೆಯಾಗಿದೆ ಎಂದು ಟ್ವಿಟರ್ನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಕೋವಿಡ್ 19 (Covid 19) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ 20 ಸಾವಿರಗಳಷ್ಟು ಏರಿಕೆಯಾಗುತ್ತಿದೆ. ನಿನ್ನೆ 37, 379 ಸೋಂಕಿನ ಪ್ರಕರಣಗಳು ದಾಖಲಾಗಿದ್ದವು. ಆದರೆ ಇಂದು, ಕೇವಲ 24ಗಂಟೆಯಲ್ಲಿ ಬರೋಬ್ಬರಿ 58,097 ಕೊರೋನಾ ಸೋಂಕಿನ ಕೇಸ್ಗಳು ಪತ್ತೆಯಾಗಿವೆ. ಇದು ನಿನ್ನೆಗಿಂತಲೂ ಶೇ.55ರಷ್ಟು ಅಧಿಕವಾದ ಹಾಗಾಗಿದೆ. ಒಟ್ಟಾರೆ ಕೊರೊನಾ ಕೇಸ್(Corona Cases)ಗಳಲ್ಲಿ 18,466 ಕೇಸ್ಗಳು ಮಹಾರಾಷ್ಟ್ರದಲ್ಲೇ ಪತ್ತೆಯಾಗಿವೆ. ಕಳೆದ 24ಗಂಟೆಯಲ್ಲಿ 534 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಹಾಗೇ, ಒಮಿಕ್ರಾನ್ ಸೋಂಕಿತರ ಸಂಖ್ಯೆ ದೇಶದಲ್ಲಿ 2135ಕ್ಕೆ ತಲುಪಿದೆ.
ಒಮಿಕ್ರಾನ್‌ಗೆ ಮೊದಲ ಬಲಿ: ಭಾರತದಲ್ಲಿ ಒಮಿಕ್ರಾನ್‌ಗೆ ಮೊದಲ ಬಲಿಯಾಗಿದೆ. ರಾಜಸ್ಥಾನದಲ್ಲಿ ಲಕ್ಷ್ಮೀನಾರಾಯಣನಗರದ 73 ವರ್ಷದ ವ್ಯಕ್ತಿ ಒಮಿಕ್ರಾನ್ನಿಂದ ಮೃತಪಟ್ಟಿದ್ದಾರೆ. ಅವರು ಡಿಸೆಂಬರ್ 15 ರಂದು ಕೊವಿಡ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದರು ಮತ್ತು ಅಂದಿನಿಂದ ಆಸ್ಪತ್ರೆಯಲ್ಲಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಕೊಮೊರ್ಬಿಡಿಟಿಗಳು ಅವರಿಗಿತ್ತು ಎಂದು ವರದಿಯಾಗಿದೆ.