Covid outbreak : ಮಂಡ್ಯ ಸರ್ಕಾರಿ ಶಾಲೆಯಲ್ಲಿ ಕೋವಿಡ್‌ ಸ್ಫೋಟ

By Kannadaprabha News  |  First Published Jan 5, 2022, 2:49 PM IST
  • ಮಂಡ್ಯ ಸರ್ಕಾರಿ ಶಾಲೆಯಲ್ಲಿ ಕೋವಿಡ್‌ ಸ್ಫೋಟ
  •  15 ವಿದ್ಯಾರ್ಥಿಗಳು, ಓರ್ವ ಶಿಕ್ಷಕನಿಗೆ ವೈರಸ್‌
  •   ಸೋಂಕಿತರು ಆಸ್ಪತ್ರೆಗೆ ರವಾನೆ - ಶಾಲೆ ಸೀಲ್‌ಡೌನ್‌, ಪೋಷಕರು, ಮಕ್ಕಳಲ್ಲಿ ಆತಂಕ

 ಕೆ.ಆರ್‌.ಪೇಟೆ (ಜ.05):  ತಾಲೂಕಿನ ಮಾಕವಳ್ಳಿ ಸರ್ಕಾರಿ ಪ್ರೌಢ ಶಾಲೆಯ (Govt High School) 15 ವಿದ್ಯಾರ್ಥಿಗಳು (Student), ಓರ್ವ ಶಿಕ್ಷಕ (Teacher) ಸೇರಿ 16 ಮಂದಿಯಲ್ಲಿ ಕೊರೋನಾ (Corona) ಸೋಂಕು ಕಾಣಿಸಿಕೊಂಡಿದೆ.  ಸರ್ಕಾರಿ ಪ್ರೌಢ ಶಾಲೆಯ (Govt High School) ಕೆಲವು ವಿದ್ಯಾರ್ಥಿಗಳಲ್ಲಿ ನಿರಂತರ ಕೆಮ್ಮು, ಶೀತ, ಜ್ವರ, ತಲೆನೋವು ಕಾಣಿಸಿಕೊಂಡಿತ್ತು. ಇದರಿಂದ ಸಂಶಯಗೊಂಡ ಶಾಲೆಯ (school) ಮುಖ್ಯ ಶಿಕ್ಷಕ ಲಿಂಗರಾಜು (Lingaraju) ಕಳೆದ ಶುಕ್ರವಾರ (ಡಿ.31) ಶಿಕ್ಷಣ ಇಲಾಖೆ ಮತ್ತು ತಾಲೂಕು ಆರೋಗ್ಯ ಇಲಾಖೆಗೆ (Health Department) ಮಾಹಿತಿ ನೀಡಿ ಮಕ್ಕಳ ತಪಾಸಣೆಗೆ ಕೋರಿದ್ದರು.

ಮುಖ್ಯ ಶಿಕ್ಷಕರ ಮಾಹಿತಿ ಮೇರೆಗೆ ಜ.3ರಂದು ತಾಲೂಕು ಆರೋಗ್ಯ ಇಲಾಖೆ (Health Department) ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಶಾಲೆಯ 100 ಮಕ್ಕಳ ತಪಾಸಣೆ ನಡೆಸಿದ್ದರು. ಈ ವರದಿ ಬಂದು 15 ಶಾಲಾ ಮಕ್ಕಳು (school Children) ಮತ್ತು ಓರ್ವ ಶಿಕ್ಷಕರಿಗೆ ಕೊರೋನಾ ಪಾಸಿಟಿವ್‌ (Corona)  ಬಂದಿದೆ. 10ನೇ ತರಗತಿಯ 11 ಮಕ್ಕಳು, 9ನೇ ತರಗತಿ 3 ಮಕ್ಕಳು, 8ನೇ ತರಗತಿಯ ಒಬ್ಬ ವಿದ್ಯಾರ್ಥಿ (students) ಸೇರಿದಂತೆ ಒಟ್ಟು 15 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಇವರಲ್ಲಿ 5 ಮಂದಿ ಗಂಡು ಮಕ್ಕಳು ಮತ್ತು 10 ಮಂದಿ ಹೆಣ್ಣು ಮಕ್ಕಳು ಇದ್ದಾರೆ.

Tap to resize

Latest Videos

ಶಾಲೆ ಹಿಂದಿ ಶಿಕ್ಷಕ (Teacher) ಲಾಯಪ್ಪ ಅವರಿಗೆ ಸೋಂಕು ಹರಡಿರುವುದು ತಾಲೂಕಿನಲ್ಲಿ ಆತಂಕವನ್ನು ಉಂಟು ಮಾಡಿದೆ. ಶಾಲೆಯಲ್ಲಿ (School) ಒಟ್ಟು 145 ವಿದ್ಯಾರ್ಥಿಗಳಲ್ಲಿ ಇದುವರೆಗೆ 100 ಮಕ್ಕಳ ತಪಾಸಣೆ ನಡೆದಿದೆ. ಉಳಿದ 45 ಮಕ್ಕಳ ತಪಾಸಣೆ ಕಾರ್ಯ ಮುಂದುವರಿದಿದೆ. ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವವಿದೆ.

ಆರೋಗ್ಯಾಧಿಕಾರಿಗಳ ಭೇಟಿ :  ಶಾಲಾ ಮಕ್ಕಳಲ್ಲಿ ವೈರಸ್‌ (Virus) ಪತ್ತೆ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್‌, ನೋಡಲ್ ಅಧಿಕಾರಿ ಡಾ. ಆಶಾ ನೇತೃತ್ವದ ವೈದ್ಯರ ತಂಡ ಮಾಕವಳ್ಳಿ ಶಾಲೆಗೆ ಭೇಟಿ ನೀಡಿ ಆ್ಯಂಬುಲೆನ್ಸ್‌ (ambulance) ಮೂಲಕ ಎಲ್ಲ 16 ಜನ ಸೋಂಕಿತರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ.

ಆಸ್ಪತ್ರೆಯ (Hospital) ಆವರಣದಲ್ಲಿ ಇತರರಿಗೆ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಶಾಲೆಯನ್ನು ಸೀಲ್‌ ಡೌನ್‌ ಮಾಡಲಾಗಿದೆ. ಸ್ಯಾನಿಟೈಸರ್‌ ಮಾಡಲು ಕ್ರಮ ವಹಿಸಲಾಗಿದೆ. ಮಕ್ಕಳಿಂದ ಮತ್ತು ಶಿಕ್ಷಕರಿಂದ ಇತರರಿಗೆ ಸೋಂಕು ಹರಡಿರುವ ಸಂಭವವಿದೆ. ಸೋಂಕಿತರ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೆ ಒಳಪಡಿಸಿ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸುವುವ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗೆ 7 ದಿನ ಕಾಲ ರಜೆ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಲಾಗಿದೆ. ಕೊರೋನಾ ಪಾಸಿಟಿವ್‌ ವರದಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಶಾಲಾ ಮಕ್ಕಳಲ್ಲಿ ಒಮಿಕ್ರೋನ್‌ ಇದೆಯಾ ಅಥವಾ ಕೊರೋನಾ ಎರಡನೇ ಅಲೆಯಲ್ಲಿ ಕಾಣಿಸಿಕೊಂಡಿದೆಯೇ ಎಂಬುದು ಗೊತ್ತಾಗಲಿದೆ ಎಂದು ಡಾ.ಮಧುಸೂದನ್‌ ತಿಳಿಸಿದ್ದಾರೆ.

ತಾಲೂಕಿನಲ್ಲಿ ಕೊರೋನಾ 3ನೇ ಅಲೆ ಸದ್ದಿಲ್ಲದೆ ಆವರಿಸುತ್ತಿದೆ. ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ಸಹಜವಾಗುತ್ತಿದ್ದ ಸನ್ನಿವೇಶದಲ್ಲಿಯೇ ಮಕ್ಕಳಲ್ಲಿ ಸೋಂಕು ಕಂಡು ಬಂದಿರುವುದು ಮಕ್ಕಳು, ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.

  • ಮಂಡ್ಯ ಸರ್ಕಾರಿ ಶಾಲೆಯಲ್ಲಿ ಕೋವಿಡ್‌ ಸ್ಫೋಟ
  •  15 ವಿದ್ಯಾರ್ಥಿಗಳು, ಓರ್ವ ಶಿಕ್ಷಕನಿಗೆ ವೈರಸ್‌
  •   ಸೋಂಕಿತರು ಆಸ್ಪತ್ರೆಗೆ ರವಾನೆ - ಶಾಲೆ ಸೀಲ್‌ಡೌನ್‌, ಪೋಷಕರು, ಮಕ್ಕಳಲ್ಲಿ ಆತಂಕ
click me!