ಯುವಕನೊಬ್ಬನಲ್ಲಿ ಕೊರೋನಾ ಶಂಕೆ|ಆತನ ಗಂಟಲು ದ್ರವ ಮಾದರಿ ತಪಾಸಣೆಗೆ ಬೆಂಗಳೂರಿಗೆ ರವಾನೆ| ವರದಿ ಬಂದ ನಂತರವೇ ಎಲ್ಲ ವಿಷಯ ತಿಳಿಯಲಿದೆ: ಡಿಸಿ|
ವಿಜಯಪುರ(ಮಾ.16): ಮೆಕ್ಕಾದಿಂದ ವಿಜಯಪುರಕ್ಕೆ ಮರಳಿದ ಯುವಕನೊಬ್ಬನಲ್ಲಿ ಕೊರೋನಾ ಲಕ್ಷಣಗಳ ಶಂಕೆ ಹಿನ್ನೆಲೆಯಲ್ಲಿ ಆತನ ಗಂಟಲು ದ್ರವ ಮಾದರಿ (ಥ್ರೋಟ್ ಸ್ಕ್ವಾಬ್)ಯನ್ನು ತಪಾಸಣೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ತಿಳಿಸಿದ್ದಾರೆ.
ಕೊರೋನಾ ಇದ್ದರೂ ಅಮೆರಿಕದ ರಾಜ್ಯದಲ್ಲಿ ನಮಸ್ತೆಗೆ ನಿಷೇಧ!
undefined
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ. 5ರಂದು 28 ವರ್ಷದ ಯುವಕನೋರ್ವ ಮೆಕ್ಕಾದಿಂದ ಮರಳಿದ್ದು, ಆತನ ತಂದೆ-ತಾಯಿ ಧೈರ್ಯ ತುಂಬಿ ಆತನ ಪರೀಕ್ಷೆಗೆ ಒಪ್ಪಿಸಿದ್ದಾರೆ. ಈಗಾಗಲೇ ಈ ಯುವಕನನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ವಿಶೇಷ ಐಸೋಲೇಷನ್ ಘಟಕದಲ್ಲಿ ಇರಿಸಲಾಗಿದೆ. ಕೊರೋನಾ ಲಕ್ಷಣಗಳ ಶಂಕೆ ಹಿನ್ನೆಲೆ ಆತನ ಗಂಟಲು ದ್ರವ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಎಲ್ಲ ವಿಷಯ ತಿಳಿಯಲಿದೆ ಎಂದರು.
ಹಾವೇರಿಗೂ ಕೊರೋನಾ ಕಾಟ: ಇಬ್ಬರಲ್ಲಿ ಕೊರೋನಾ ಲಕ್ಷಣ
ವಿದೇಶದಿಂದ ಬಂದಿರುವ ಒಟ್ಟು ಐದು ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಅದರಲ್ಲಿ ನಾಲ್ಕು ಜನರ ರಿಪೋರ್ಟ್ ನೆಗೆಟಿವ್ ಬಂದಿದ್ದು, ಇನ್ನುಳಿದ ಜನರ ಸ್ಯಾಂಪಲ್ ವರದಿ ಇನ್ನೂ ಬರಬೇಕಿದೆ ಎಂದರು.