ಹಾವೇರಿಗೂ ಕೊರೋನಾ ಕಾಟ: ಇಬ್ಬರಲ್ಲಿ ಕೊರೋನಾ ಲಕ್ಷಣ

By Kannadaprabha NewsFirst Published Mar 16, 2020, 8:29 AM IST
Highlights

ಇಬ್ಬರಲ್ಲಿ ಕೊರೋನಾ ವೈರಸ್‌ ಲಕ್ಷಣ| ಇಬ್ಬರ ರಕ್ತ, ಗಂಟಲು ದ್ರವದ ಮಾದರಿ ಲ್ಯಾಬ್‌ಗೆ ರವಾನೆ| ಇಬ್ಬರಿಗೂ  ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ| 

ಹಾವೇರಿ(ಮಾ.16): ಹಜ್‌ ಯಾತ್ರೆಯಿಂದ ಹಿಂದಿರುಗಿದ ಹಾನಗಲ್ಲ ಪಟ್ಟಣದ ವ್ಯಕ್ತಿ ಹಾಗೂ ಆತನ ಮೂರು ವರ್ಷದ ಮೊಮ್ಮಗನಿಗೆ ಶಂಕಿತ ಕೊರೋನಾ ವೈರಸ್‌ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಭಾನುವಾರ ಲ್ಯಾಬ್‌ಗೆ ಕಳುಹಿಸಲಾಗಿದೆ.

ಕೊರೋನಾ ಇದ್ದರೂ ಅಮೆರಿಕದ ರಾಜ್ಯದಲ್ಲಿ ನಮಸ್ತೆಗೆ ನಿಷೇಧ!

ಹಾನಗಲ್ಲ ಪಟ್ಟಣದ 60 ವರ್ಷದ ವ್ಯಕ್ತಿ ಹಜ್‌ ಯಾತ್ರೆ ಮುಗಿಸಿ ಮಾ. 3ರಂದೇ ಹುಬ್ಬಳ್ಳಿಗೆ ಹಿಂದಿರುಗಿದ್ದರು. ಅಲ್ಲಿ ಕೆಲವು ದಿನ ಸಂಬಂಧಿಕರ ಮನೆಯಲ್ಲಿ ಉಳಿದು ಮಾ. 12ರಂದು ಹಾನಗಲ್ಲಿನ ಮನೆಗೆ ಆಗಮಿಸಿದ್ದರು. ವಿದೇಶದಿಂದ ಹಿಂದಿರುಗಿದವರ ಮೇಲೆ ನಿಗಾ ವಹಿಸಿರುವ ಆರೋಗ್ಯ ಇಲಾಖೆ ತಂಡ ಪರೀಕ್ಷಿಸಿದಾಗ ರೋಗ ಆತನಲ್ಲಿ ರೋಗ ಲಕ್ಷಣಗಳು ಕಂಡುಬಂದಿವೆ. ಅಲ್ಲದೇ ಆತನ ಮೂರು ವರ್ಷದ ಮೊಮ್ಮಗನಿಗೂ ಕೆಮ್ಮು, ಜ್ವರ, ನೆಗಡಿಯಾಗಿದ್ದು, ಕೊರೋನಾ ಲಕ್ಷಣಗಳು ಇರುವುದನ್ನು ಗಮನಿಸಿ ಇಬ್ಬರನ್ನೂ ಭಾನುವಾರ ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ.

ಅಜ್ಜ ಮತ್ತು ಮೊಮ್ಮಗನ ರಕ್ತ ಮತ್ತು ಕಫದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಜ್‌ನಿಂದ ಹಿಂದಿರುಗಿರುವ ವ್ಯಕ್ತಿಯ ಪತ್ನಿಯನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಸ್ಪತ್ರೆ ವಾರ್ಡ್‌ನಲ್ಲಿ ಇರಿಸಲಾಗಿದೆ.

ಕೊರೋನಾ : ಮಾಧ್ಯಮ ಅತಿ ರಂಜನೆ ಅಲ್ಲ, ನೈಜ ಪರಿಸ್ಥಿತಿಯೇ ಭಯಾನಕ

ಹಜ್‌ ಯಾತ್ರೆಯಿಂದ ವಾಪಸಾದ ವ್ಯಕ್ತಿ ಹಾಗೂ ಆತನ ಮೊಮ್ಮಗನಲ್ಲಿ ಕೊರೋನಾ ರೋಗ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಸಾರ್ವಜನಿಕರಿಂದ ಪ್ರತ್ಯೇಕಿಸಿ ಜಿಲ್ಲಾಸ್ಪತ್ರೆ ವಾರ್ಡ್‌ನಲ್ಲಿ ಇರಿಸಲಾಗಿದೆ. ಅವರ ರಕ್ತ, ಕಫದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್‌ ಡಾ. ನಾಗರಾಜ ನಾಯಕ ಹೇಳಿದ್ದಾರೆ. 
 

click me!