ಕಾರವಾರ: ಕಡಿದ ಹಾವನ್ನು ಹಿಡಿದು ಆಸ್ಪತ್ರೆಗೆ ತಂದ ವ್ಯಕ್ತಿ!

Kannadaprabha News   | Asianet News
Published : Sep 23, 2020, 12:18 PM ISTUpdated : Sep 23, 2020, 12:32 PM IST
ಕಾರವಾರ: ಕಡಿದ ಹಾವನ್ನು ಹಿಡಿದು ಆಸ್ಪತ್ರೆಗೆ ತಂದ ವ್ಯಕ್ತಿ!

ಸಾರಾಂಶ

ವ್ಯಕ್ತಿಗೆ ಕಡಿದ ಹಾವು| ಹಾವಿನ ಮರಿಯನ್ನೇ ಹಿಡಿದುಕೊಂಡು ಆಸ್ಪತ್ರೆಗೆ ತಂದ ವ್ಯಕ್ತಿ| ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲು ಗ್ರಾಮದಲ್ಲಿ ನಡೆದ ಘಟನೆ| 

ಕಾರವಾರ(ಸೆ.23):ದನದ ಕೊಟ್ಟಿಗೆಗೆ ಸೊಪ್ಪು ತರಲು ಕಾಡಿಗೆ ಹೋಗಿದ್ದಾಗ ವ್ಯಕ್ತಿಯೊಬ್ಬರಿಗೆ ಹಾವಿನ ಮರಿ ಕಡಿದಿದ್ದು, ಆ ಹಾವಿನ ಮರಿಯನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಿಂದ ವರದಿಯಾಗಿದೆ.

ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲು ನಿವಾಸಿ ಬಲೀಂದ್ರ ಗೌಡ ಅವರಿಗೆ ಮಂಗಳವಾರ ಬೆಳಗ್ಗೆ ಕಾಡಿಗೆ ಹೋದಾಗ ವಿಷಪೂರಿತ ಹಾವಿನ ಮರಿ ಕಾಲಿಗೆ ಕಡಿದಿದೆ. ನೋವಾಗಿದ್ದರಿಂದ ಕೆಳಗೆ ನೋಡಿದ್ದಾರೆ. ಹಾವಿನ ಮರಿ ಕಂಡಿದ್ದು, ಮರಿಯನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿಕೊಂಡು ಅಂಕೋಲಾ ತಾಲೂಕಾಸ್ಪತ್ರೆಗೆ ಆಗಮಿಸಿದ್ದಾರೆ. 

ಕಾರವಾರ; ಸಿನಿಮೀಯ ಕಾರ್ಯಾಚರಣೆ, ಜನರಿಂದಲೇ ಮೀನುಗಾರರ ರಕ್ಷಣೆ

ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ತೆರಳುವಂತೆ ಅಂಕೋಲಾ ವೈದ್ಯರು ತಿಳಿಸಿದರು. ಬಳಿಕ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.
 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು