ಕ್ರಿಕೆಟ್‌ ಬೆಟ್ಟಿಂಗ್‌ ಮಾಡ್ತೀರಾ : ಹುಷಾರ್, ನಿಮ್ಮ ಮೇಲಿರುತ್ತೆ ಕಣ್ಣು

By Kannadaprabha NewsFirst Published Sep 23, 2020, 12:07 PM IST
Highlights

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಕೊಳ್ಳುವವರು ಹುಷಾರ್.. ಯಾಕಂದ್ರೆ ನಿಮ್ಮ ಮೇಲೆ ಇರುತ್ತೆ ಒಂದು ಕಣ್ಣು ಎಚ್ಚರ

ಚಿಕ್ಕಬಳ್ಳಾಪುರ (ಸೆ/23):  ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕವಾಯಿತು ನಡೆಸಬೇಕು, ಹಿಂದಿನ ಪ್ರಕರಣಗಳಲ್ಲಿನ ಆರೋಪಿಗಳ ಮೊಬೈಲ್‌ ವಿವರಗಳನ್ನು ಪಡೆದು ಅವರ ಚಲನ ವಲನಗಳ ಮೇಲೆ ಸೂಕ್ತ ಕಣ್ಗಾವಲು ಇಡಬೇಕು, ಪ್ರತಿ ದಿನ ಆರೋಪಿಗಳ ಹಾಜರಾತಿಯನ್ನು ಠಾಣೆಯಲ್ಲಿ ಪಡೆದುಕೊಳ್ಳಬೇಕು. ಐಪಿಎಲ್‌ ಬೆಟ್ಟಿಂಗ್‌ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.

ಇದು, ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಜಿಲ್ಲೆಯ ಎಲ್ಲಾ ಸಿಪಿಐ, ಪಿಐ, ಪಿಎಸ್‌ಐ ಹಾಗೂ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕರಿಗೆ ಪ್ರಸ್ತುತ ನಡೆಯುತ್ತಿರುವ ಐಪಿಲ್‌ ಕ್ರಿಕೆಟ್‌ ವೇಳೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಗೆ ಕಡಿವಾಣ ಹಾಕಲು ಕೈಗೊಳ್ಳಬೇಕಾದ ಮಾರ್ಗಸೂಚಿಗಳ ಬಗ್ಗೆ ಕಳುಹಿಸಿರುವ ಇ-ಮೇಲ್‌ ಸಂದೇಶ.

IPL ಫೀವರ್ : ಲಕ್ಷ ಲಕ್ಷ ಬೆಟ್ಟಿಂಗ್ ದಂಧೆಗೆ ಕಡಿವಾಣವೇ ಇಲ್ಲ .

ಎಸ್ಪಿ ಖಡಕ್‌ ಸೂಚನೆ ಏನು?

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕೆಂದು ಎಸ್ಪಿ ಮಿಥುನ್‌ ಕುಮಾರ್‌, ಜಿಲ್ಲೆಯ ತಮ್ಮ ಅಧೀನ ಪೊಲೀಸ್‌ ಅಧಿಕಾರಿಗಳಿಗೆ ಇ-ಮೇಲ್‌ ಸಂದೇಶ ಕಳಿಸಿ, ಪ್ರಮುಖವಾಗಿ ವಾಣಿಜ್ಯ ಕೇಂದ್ರಗಳಾದ ಎಪಿಎಂಸಿ, ಶಾಲಾ, ಕಾಲೇಜು ಸಮೀಪ, ಬಸ್‌ ನಿಲ್ದಾಣ, ಪಾರ್ಕ್, ಆಟೋ, ಟ್ಯಾಕ್ಸಿ, ಟೆಂಪೋ, ರೈಲ್ವೆ, ಲಾರಿ ನಿಲ್ದಾಣ, ಹೋಟೆಲ್‌, ಬಾರ್‌, ರಿಕ್ರಿಯೇಷನ್‌ ಕ್ಲಬ್‌ಗಳು ಮತ್ತಿತರ ಸ್ಥಳಗಳಲ್ಲಿ ನಿಗಾ ವಹಿಸುವಂತೆ ಹಗೂ ಐದು ವರ್ಷಗಳಲ್ಲಿ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಪ್ರಕರಣಗಳಲ್ಲಿ ದಸ್ತಗಿರಿಯಾಗಿರುವ ಆರೋಪಿಗಳ ಪೂರ್ಣ ವಿವರಗಳನ್ನು ಠಾಣೆಯಲ್ಲಿ ನಿರ್ವಹಿಸುವಂತೆ ಸೂಚಿಸಿದ್ದಾರೆ.

"

click me!