ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದು ಇವರು ರಾಜ್ಯದ ಅಭಿವೃದ್ಧಿಗಾಗಿ ಯಾವುದೇ ರೀತಿಯ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಲಾಗಿದೆ.
ರಾಮನಗರ (ಸೆ.23): ನೆರೆ ಹಾವಳಿ, ಜಿಎಸ್‌ಟಿ ಹಣ ಸೇರಿದಂತೆ ಅನೇಕ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಬಗೆಗೆ ಮಲತಾಯೊ ಧೋರಣೆ ಅನುಸರಿಸುತ್ತಿದೆ.
ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಹಾಗೂ 25 ಬಿಜೆಪಿ ಸಂಸದರಿಂದ ಕರ್ನಾಟಕಕ್ಕೆ ಕೊಡುಗೆ ಏನೆಂದು ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷರಾದ ಧ್ರವನಾರಾಯಣ ಪ್ರಶ್ನಿಸಿದರು,
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾತನಾಡಿದ ಅವರು ಕರ್ನಾಟಕದಿಂದ ಆಯ್ಕೆಯಾದವರು ಕೇಂದ್ರದಿಂದ ರಾಜ್ಯದಲ್ಲೆ ಆಗುತ್ತಿರುವ ಅನ್ಯಾಯ ಸರಿ ಪಡಿಸಲು ಸಾಧ್ಯವಾಗುತ್ತಿಲ್ಲ.
HDD ಮೇಲೆ ಪ್ರಯೋಗಿಸಿದ ಅಸ್ತ್ರ :ಶಿರಾ ಗೆಲ್ಲಲು ಬಿಜೆಪಿಯ ಮಾಸ್ಟರ್ ಪ್ಲಾನ್
ನಿರ್ಮಲಾ ಸೀತಾರಾಮನ್ ಹಣಕಾಸಯ ಸಚಿವರಾಗಿ ಹಾಗೂ 25 ಮಂದಿ ಬಿಜೆಪಿ ಸಂಸದರನ್ನು ಮುಂದುವರಿಸಲು ಯವಾ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು.
ಇದುವರೆಗೆ ರಾಜ್ಯಕ್ಕೆ ಬರಬೇಕಾದ 13,672 ಕೋಟಿ ರುಪಾಯಿ ಬಿಡುಗಟಡ ಮಾಡಿಲ್ಲ. ರಾಜ್ಯದ ಪ್ರತಿಯೊಬ್ಬರು ಬೆವರು ಹರಿಸಿ ಸಂಪಾದಿಸಿದ ಹಣದಿಂದ ತೆರಿಗೆ ಕಟ್ಟಿದ್ದಾರೆ.
ನಮ್ಮ ತೆರಿಗೆ ಹಣ ನಮಗೆ ವಾಪಸ್ ನೀಡಲು ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವರು ಹೇಳುತ್ತಾರೆ. ಬಿಜೆಪಿಯ 25 ಸಮಸದರಿಗೆ ರಾಜ್ಯದ ಮೇಲೆ ಅಭಿಮಾನವಿದ್ದರೆ ವಿತ್ತ ಸಚಿವರು ಮತ್ತು ಪ್ರಧಾನಿಯವರ ಬಳಿ ಹೋರಾಟ ಮಾಡಿ ರಾಜ್ಯದ ಪಾಲು ತರಲಿ ಎಂದರು.