ರಾಜ್ಯದ ಎರಡು ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ!

By Kannadaprabha News  |  First Published Nov 28, 2019, 10:55 AM IST

ದೇಶದ ಯೋಧರನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸೈನಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರವೇಶ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಬಾಲಕಿಯರ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.


ಮಡಿಕೇರಿ(ನ.28): ದೇಶದ ಯೋಧರನ್ನು ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸೈನಿಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೂ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರವೇಶ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಬಾಲಕಿಯರ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಬಾಲಕರಂತೆ ಇದೀಗ ಬಾಲಕಿಯರಿಗೂ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಲು ಅವಕಾಶ ನೀಡುತ್ತಿರುವುದರಿಂದ ವಿದ್ಯಾರ್ಥಿನಿಯರಲ್ಲಿ ಸಂತಸ ತಂದಿದೆ.

ದೇಶದಲ್ಲಿ ಒಟ್ಟು 31 ಸೈನಿಕ ಶಾಲೆಗಳಿದ್ದು, ರಾಜ್ಯದಲ್ಲಿನ ಕೊಡಗು ಹಾಗೂ ವಿಜಯಪುರ ಸೇರಿದಂತೆ ಒಟ್ಟು 5 ಸೈನಿಕ ಶಾಲೆಯಲ್ಲಿ ಮುಂದಿನ ವರ್ಷದಿಂದ ಬಾಲಕಿಯರಿಗೂ ಆರನೇ ತರಗತಿಯಿಂದ ಶಿಕ್ಷಣ ನೀಡಲು ಸಿದ್ಧತೆಗಳು ನಡೆಯುತ್ತಿದೆ. ಕೊಡಗು ಜಿಲ್ಲೆಯ ಕೂಡಿಗೆ ಸೈನಿಕ ಶಾಲೆಯಲ್ಲಿ 2020-21ನೇ ಸಾಲಿಗೆ ಆರಂಭಿಕ ಹಂತವಾಗಿ ಕೇವಲ 9 ಬಾಲಕಿಯರ ಪ್ರವೇಶಾತಿಗೆ ಅವಕಾಶ ನೀಡಲಾಗಿದೆ.

Tap to resize

Latest Videos

ಬಿಜೆಪಿ ಸೋತರೆ ಮತ್ತೆ ಚುನಾವಣೆಯೇ ಸೂಕ್ತ : ಪೇಜಾವರ ಶ್ರೀ

ಕಳೆದ ಎರಡು ವರ್ಷಗಳ ಹಿಂದೆ ಮಿಜೋರಾಂನ ಸೈನಿಕ್‌ ಸ್ಕೂಲ್‌ ಚಿಂಗ್‌ಶಿಪ್‌ನಲ್ಲಿ ಹೆಣ್ಣು ಮಕ್ಕಳ ದಾಖಲಾತಿಗೆ ರಕ್ಷಣಾ ಸಚಿವಾಲಯ ಪ್ರಾರಂಭಿಸಿದ ಪ್ರಾಯೋಗಿಕ ಯೋಜನೆಯ ಯಶಸ್ಸಿನ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಕೊಡಗು ಜಿಲ್ಲೆಯ ಕೂಡಿಗೆ ಸೈನಿಕ ಶಾಲೆಯಲ್ಲಿ ಪ್ರಸ್ತುತ 6ನೇ ತರಗತಿಯಿಂದ 12ನೇ ತರಗತಿ ವರೆಗೆ 600 ಬಾಲಕರು ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ 9 ಬಾಲಕಿಯರಿಗೆ ಈ ಶಾಲೆಯಲ್ಲಿ ಅವಕಾಶ ನೀಡಿದ್ದು, ರಾಜ್ಯದ ಯಾವುದೇ ಭಾಗದಿಂದ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ವಿಜಪುರಪುರ ಸೈನಿಕ ಶಾಲೆಯಲ್ಲಿ 10 ಮಂದಿ ಬಾಲಕಿಯರಿಗೆ ಪ್ರವೇಶ ದೊರಕಲಿದೆ. ಇಲ್ಲಿ 650 ಮಂದಿ ಬಾಲಕರು ವ್ಯಾಸಂಗ ಮಾಡುತ್ತಿದ್ದಾರೆ.

ಸೈನೈಡ್‌ ಮೋಹನ್‌ಗೆ 18ನೇ ಕೊಲೆ ಪ್ರಕರಣದಲ್ಲಿ ಮರಣ ದಂಡನೆ ತೀರ್ಪು..!

ರಕ್ಷಣಾ ಇಲಾಖೆಯ ನಿರ್ದೇಶನವನ್ನು ಅನುಷ್ಠಾನಗೊಳಿಸಲು ಸೈನಿಕ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಲಭ್ಯತೆ ಮತ್ತು ಸಾಕಷ್ಟುಮಹಿಳಾ ಸಿಬ್ಬಂದಿ ನೇಮಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟಅ​ಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಲಿಂಗ ಸಮಾನತೆ, ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗಾಗಿ ರಕ್ಷಣಾ ಇಲಾಖೆ ಸೈನಿಕ ಶಾಲೆಯಲ್ಲಿ ಬಾಲಕಿಯರಿಗೆ ಪ್ರವೇಶ ನೀಡುವ ನಿರ್ಧಾರ ಕೈಗೊಂಡಿದೆ.

ತಾಯಿ ಓದಲು ಹೇಳಿ​ದ್ದಕ್ಕೆ ಬಾಲಕಿ ಆತ್ಮ​ಹ​ತ್ಯೆ

ಹಲವು ವರ್ಷಗಳಿಂದ ರಕ್ಷಣಾ ಇಲಾಖೆ ನಿರ್ವಹಿಸುವ ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಅವಕಾಶ ನೀಡಬೇಕೆಂಬ ಒತ್ತಡವಿತ್ತು. ಈಗಾಗಲೇ ಮಿಜೋರಾಂನ ಶಾಲೆಯಲ್ಲಿ ಆರು ಬಾಲಕಿಯರಿಗೆ ಹಾಗೂ ಲಕ್ನೋದ ಸೈನಿಕ ಶಾಲೆಯಲ್ಲಿ 15 ಬಾಲಕಿಯರಿಗೆ ಆರನೇ ತರಗತಿಗೆ ಪ್ರಸಕ್ತ ವರ್ಷ ಅವಕಾಶ ನೀಡಲಾಗಿತ್ತು. 2020-21 ಸಾಲಿನಿಂದ ದೇಶದ ಐದು ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ ನೀಡಲಿದ್ದು, ಇದಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಶಾಲೆಗಳಲ್ಲಿ ನೀಡಲು ಅಗತ್ಯ ತಯಾರಿ ನಡೆಸಲಾಗುತ್ತಿದೆ. ಮುಂದಿನ ಬಾರಿ ಸೀಟು ಲಭ್ಯತೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಯಾವ್ಯಾವ ಶಾಲೆ?:

ರಕ್ಷಣಾ ಸಚಿವಾಲಯದ ಸೈನಿಕ ಶಾಲೆಗಳ ಸೊಸೈಟಿಯಿಂದ ದೇಶದ ಐದು ಸೈನಿಕ ಶಾಲೆಗಳಲ್ಲಿ 6ನೇ ತರಗತಿಯಿಂದ ಬಾಲಕಿಯರನ್ನು ಪ್ರವೇಶ ಮಾಡಿಸಿಕೊಳ್ಳಲು ಸಂಬಂ​ಧಿಸಿದ ಶಾಲೆಯ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಕೊಡಗು, ಬಿಜಾಪುರ ಸೈನಿಕ ಶಾಲೆಗಳು ಸೇರಿದಂತೆ ಚಂದ್ರಪುರ್‌(ಮಹಾರಾಷ್ಟ್ರ), ಘೋರಾಖಲ್‌ (ಉತ್ತರ್‌ಖಂಡ್‌), ಕಾಳಿಕಿರಿ (ಆಂಧ್ರಪ್ರದೇಶ) ಸೈನಿಕ ಶಾಲೆಯಲ್ಲಿ 2020- 21ರಿಂದ ವಿದ್ಯಾರ್ಥಿನಿಯರಿಗೆ ಪ್ರವೇಶ ಅವಕಾಶ ನೀಡಲಾಗಿದೆ.

ಜನವರಿ 5ಕ್ಕೆ ಪ್ರವೇಶ ಪರೀಕ್ಷೆ :

ಸೈನಿಕ ಶಾಲೆಗಳಲ್ಲಿ ಪ್ರವೇಶ ಪಡೆಯಲು ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿ ಕರೆಯಲಾಗಿದ್ದು, ಡಿ.6 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಜನವರಿ 5ರಂದು ಪರೀಕ್ಷಾ ಕೇಂದ್ರಗಳಲ್ಲಿ 6ನೇ ತರಗತಿಗೆ ಪ್ರವೇಶ ಪರೀಕ್ಷೆ, ಲಿಖಿತ, ವೈದ್ಯಕೀಯ, ಫಿಟ್ನೆಸ್‌ ಪರೀಕ್ಷೆಗಳು ನಡೆಯಲಿವೆ.

ಆನ್‌ಲೈನ್‌ನಲ್ಲಿ ಅರ್ಜಿ:

ಕೂಡಿಗೆ ಸೈನಿಕ ಶಾಲೆಯಲ್ಲಿ ಬಾಲಕಿಯರಿಗೆ 9 ಸೀಟುಗಳನ್ನು ನಿಗದಿಪಡಿಸಲಾಗಿದೆ. ಪ್ರವೇಶಕ್ಕೆ ಅರ್ಜಿ ಸಲ್ಲಿಸಲು hಠಿಠಿps://ಡಿಡಿಡಿ.saಜ್ಞಿಜಿks್ಚhಟಟ್ಝadಞಜಿssಜಿಟ್ಞ.ಜ್ಞಿ/ ವೆಬ್‌ಸೈಟ್‌ನ್ನು ನೋಡಬಹುದು ಎಂದು ಕೂಡಿಗೆ ಸೈನಿಕ ಶಾಲೆಯ ಪ್ರಮುಖರು ತಿಳಿಸಿದ್ದಾರೆ.

ಹೆಚ್ಚಿನ ಅರ್ಜಿ ಸಲ್ಲಿಕೆ ಸಾಧ್ಯತೆ!

ರಾಜ್ಯದ ಕೊಡಗು ಹಾಗೂ ಬಿಜಾಪುರದ ಸೈನಿಕ ಶಾಲೆಗಳಲ್ಲಿ ಇದೇ ಪ್ರಥಮ ಬಾರಿಗೆ ಬಾಲಕಿಯರಿಗೆ ಪ್ರವೇಶಕ್ಕೆ ಅವಕಾಶ ನೀಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುವ ಸಾಧ್ಯತೆಗಳಿವೆ. ಈ ಎರಡು ಶಾಲೆಗಳಲ್ಲಿ 2020-21ನೇ ಶೈಕ್ಷಣಿಕ ವರ್ಷದಿಂದ ಒಟ್ಟು 19 ಸೀಟುಗಳು ಲಭ್ಯವಿದೆ.

ಮಂಗಳೂರು: ಈರುಳ್ಳಿ ರೇಟ್‌ ಕೇಳಿ ಮಸಾಲೆ ಅರೆಯಿರಿ!

ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಕೊಡಗಿನ ಸೈನಿಕ ಶಾಲೆಯಲ್ಲಿ ಬಾಲಕಿಯರಿಗೂ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ. ನಾನು ಸೇನೆಗೆ ಸೇರುವ ಸಂದರ್ಭ ಕಷ್ಟಇತ್ತು. ಇದೀಗ ಸೈನಿಕ ಶಾಲೆಯಲ್ಲಿ ಬಾಲಕಿಯರಿಗೆ ಶಿಕ್ಷಣ ನೀಡುವುದರಿಂದ ಅವರಿಗೆ ಸೇನೆಯ ಬಗ್ಗೆ ಸಂಪೂರ್ಣ ತಿಳುವಳಿಕೆ ಲಭ್ಯವಾಗಲಿದೆ. ಆದ್ದರಿಂದ ಪೂರ್ವ ತಯಾರಿ ಮಾಡಿಕೊಂಡು ಸೇನೆಗೆ ಸೇರಲು ಸಹಕಾರಿಯಾಗಿದೆ ಎಂದು ಮಡಿಕೇರಿ ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌ ಗೀತಾ ಶೆಟ್ಟಿ ಹೇಳಿದ್ದಾರೆ.

-ವಿಘ್ನೆಶ್‌ ಎಂ. ಭೂತನಕಾಡು

click me!