ಹೊಟ್ಟೆತುಂಬಿಸಿಕೊಳ್ಳಲು ಹೋಗಿ, ಜೀವ ಉಳಿಸಿಕೊಳ್ಳಲು ಬಂದೆವು: ಮುಂಬೈ ವಲಸಿಗರ ಅಳಲು

By Kannadaprabha News  |  First Published May 21, 2020, 2:47 PM IST

ಹಸಿದ ಹೊಟ್ಟೆಗಳನ್ನು ತುಂಬಿಸಿಕೊಳ್ಳಲು ಮುಂಬೈಗೆ ಹೋದವರು ಇಂದು ಜೀವ ಉಳಿಸಿಕೊಳ್ಳಲು ತಾಯಿಯ ನೆಲಕ್ಕೆ ಬಂದು ಶರಣಾಗಿದ್ದಾರೆ. ಇದು ಮುಂಬೈಯಿಂದ ವಾಪಸ್ಸು ಬರುವ ಕೆ.ಆರ್‌. ಪೇಟೆ ತಾಲೂಕಿನ ವಿವಿಧ ಗ್ರಾಮಗಳ ವಲಸಿಗರ ನೋವಿನ ಕಥೆ.


ಮಂಡ್ಯ(ಮೇ 21): ಹಸಿದ ಹೊಟ್ಟೆಗಳನ್ನು ತುಂಬಿಸಿಕೊಳ್ಳಲು ಮುಂಬೈಗೆ ಹೋದವರು ಇಂದು ಜೀವ ಉಳಿಸಿಕೊಳ್ಳಲು ತಾಯಿಯ ನೆಲಕ್ಕೆ ಬಂದು ಶರಣಾಗಿದ್ದಾರೆ. ಇದು ಮುಂಬೈಯಿಂದ ವಾಪಸ್ಸು ಬರುವ ಕೆ.ಆರ್‌. ಪೇಟೆ ತಾಲೂಕಿನ ವಿವಿಧ ಗ್ರಾಮಗಳ ವಲಸಿಗರ ನೋವಿನ ಕಥೆ.

ಮುಂಬೈನಿಂದ ಕೆ.ಆರ್‌. ಪೇಟೆಗೆ ಹಿಂತಿರುಗಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗಿದೆ. ಹೊಟ್ಟೆಪಾಡಿಗಾಗಿ ಮುಂಬೈಗೆ ಹೋಗಿ ನೆಲೆಸಿದ್ದವರು ಇಂದು ಜೀವ ಭಯಕ್ಕೆ ತಮ್ಮ ತಮ್ಮ ಗ್ರಾಮಗಳಿಗೆ ಕದ್ದು ಮುಚ್ಚಿ ಬರಲಾರಂಭಿಸಿದ್ದಾರೆ.

Tap to resize

Latest Videos

undefined

ಸುನಾಮಿಯಂತೆ ಅಪ್ಪಳಿಸಿದ ವಲಸಿಗರು:

ತಾಲೂಕಿನ ರಾಜಘಟ್ಟ, ಜಾಗಿನಕೆರೆ, ಮರುವನಹಳ್ಳಿ ಮತ್ತು ಹೊನ್ನೇನಹಳ್ಳಿ ಗ್ರಾಮಕ್ಕೆ ಆಗಮಿಸಿದ ಮುಂಬೈ ವಲಸಿಗರುಗÜಳಿಂದ ಸೊಂಕು ಹರಡಲಾರಂಭಿಸುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತ ಸೋಂಕಿತರು ಹೆಚ್ಚಿರುವ ಗ್ರಾಮಗಳನ್ನು ಸೀಲ…ಡೌನ್‌ ಮಾಡಿ ಇತರ ಗ್ರಾಮೀಣ ಪ್ರದೇಶಗಳಿಗೆ ರೋಗ ಹರಡದಂತೆ ಎಚ್ಚರಿಕೆ ವಹಿಸಿತು. ಆದರೆ ಅನ್ಯರಾಜ್ಯಗಳಿಂದ ಜನ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸಲು ರಾಜ್ಯ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಮುಂಬೈನಿಂದ ಆಗಮಿಸುವವರ ಸಂಖ್ಯೆ ಸುನಾಮಿಯಂತೆ ತಾಲೂಕಿಗೆ ಅಪ್ಪಳಿಸಲಾರಂಬಿಸಿದೆ. ಇದು ಇನ್ನೂ ನಿಂತಿಲ್ಲ.

ಎಲ್ಲಿಂದ ಎಷ್ಟುಮಂದಿ?

ಪಟ್ಟಣಕ್ಕೆ ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಇಂದು ಕೂಡ 45 ಜನ ತವರೂರಿಗೆ ಆಗಮಿಸಿದ್ದಾರೆ. ತಾಲೂಕು ಆಡಳಿತದ ಅಂಕಿ ಅಂಶದಂತೆ ಇದುವರೆಗೆ 1045 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಇದರಲ್ಲಿ 1045 ಜನ ಮುಂಬೈನಿಂದ ಆಗಮಿಸಿದ್ದರೆ ಉಳಿದ 20 ಜನ ಗುಜರಾತ್‌ ರಾಜ್ಯದ ಸೂರತ್‌ನಿಂದ ಆಗಮಿಸಿದ್ದಾರೆ. ಆಗಮಿಸಿರುವ 1045 ಜನರಲಿ ್ಲ 112 ಜನರಿಗೆ ಕೊರೋನಾ ದೃಢಪಟ್ಟಿದ್ದು ಸೊಂಕಿತರಲ್ಲಿ 107 ಜನ ಮುಂಬೈನ ವಲಸಿಗರೇ ಆಗಿದ್ದಾರೆ.

ವಲಸೆ ಯಥೇಚ್ಛ ಪಾಸ್‌ ನೀಡಿದ್ದೇ ಕಾರಣ:

ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಯಂತೆ ಹೊರ ರಾಜ್ಯದಲ್ಲಿರುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ಪ್ರವಾಸಿಗಳು ಮಾತ್ರ ತಮ್ಮ ತಮ್ಮ ಸ್ವಗ್ರಾಮಕ್ಕೆ ಆಗಮಿಸಬೇಕು. ಇದಕ್ಕಾಗಿ ಜಿಲ್ಲಾಡಳಿತ ಅವರಿಗೆ ಅಗತ್ಯ ಪಾಸ್‌ ನೀಡಬೇಕು. ಆದರೆ ಸರ್ಕಾರದ ನಿಯಮಾವಳಿಗಳನ್ನು ಮೀರಿ ಮುಂಬೈನಲ್ಲಿ ಮನೆ ಮಠ ಮಾಡಿಕೊಂಡು ಸಮೃದ್ಧವಾಗಿ ಬದುಕುತ್ತಿರುವವರೆಲ್ಲರಿಗೂ ಪಾಸ್‌ ವಿತರಿಸಿದ ಪರಿಣಾಮ ತಾಲೂಕಿಗೆ ಮುಂಬೈನಿಂದ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇನ್ನೂ 2 ಸಾವಿರ ಜನ ತಾಲೂಕಿಗೆ ಆಗಮಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೆ ಕೆಲವರು ರಾಜ್ಯದ ಗಡಿ ಭಾಗ ನಿಪ್ಪಾಣಿಯಲ್ಲಿ ಸಿಲುಕಿದ್ದಾರೆ. ತವರೂರಿಗೆ ಆಗಮಿಸಲು ಪರದಾಡುತ್ತಿದ್ದಾರಂತೆ.

ಹಗರಿಬೊಮ್ಮನಹಳ್ಳಿ: ಎಣ್ಣೆ ಕ್ಯೂ ಮುಗೀತು ಗುಟ್ಕಾ ಖರೀದಿಗೆ ಜನವೋ ಜನ..!

ಮರುವನಹಳ್ಳಿ ಗ್ರಾಮದ ಒಂದೇ ಕುಟುಂಬದ ಮೂವರಿಗೆ ಮಾತ್ರ ಸೋಂಕು ತಗುಲಿದೆ. ಉಳಿದಂತೆ ಯಾವುದೇ ಗ್ರಾಮಕ್ಕೂ ಸೋಂಕು ಸಮುದಾಯವನ್ನು ತಾಗಿಸಿಲ್ಲ. ಆದರೆ ಜನ ಮುಂಬೈ ಸಂಪರ್ಕದಿಂದ ಸೋಂಕು ಹರಡಿದರೆ ಹೇಗೆ ಎನ್ನುವುದು ತಾಲೂಕಿನ ಜನರ ಭೀತಿಯಾಗಿದೆ.

ವರ್ತಕರಿಗೆ ಭಯ: ಅಂಗಡಿ ತೆರದಿಲ್ಲ ವ್ಯಾಪಾರ ಆರಂಭಿಸಿಲ್ಲ

ಸರ್ಕಾರ ಲಾಕ್‌ಡೌನ್‌ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಆದರೆ ಕೆ.ಆರ್‌. ಪೇಟೆ ಪಟ್ಟಣದ ವರ್ತಕ ಸಮುದಾಯ ಮಾತ್ರ ಅಂಗಡಿ ಮುಂಗಟ್ಟು ತೆರೆಯಲು ಹಿಂದೆ ಮುಂದೆ ನೋಡುತ್ತಿದೆ. ಚಿಕಿತ್ಸೆ ಆರಂಭಿಸಿದ್ದ ಕೆಲವು ಖಾಸಗಿ ವೈದ್ಯರು ತಮ್ಮ ಕ್ಲಿನಿಕ್‌ ಮುಚ್ಚಿ ಕೊರೋನಾ ಭೀತಿಯಲ್ಲಿ ಮನೆ ಸೇರಿದ್ದಾರೆ. ನಿತ್ಯ ತವರಿಗೆ ಆಗಮಿಸುತ್ತಿರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಿ ಅವರಿಗೆ ಅನ್ನ ಆಹಾರ ನೀಡುವುದು ತಾಲೂಕು ಆಡಳಿತಕ್ಕೆ ತಲೆನೋವಾಗಿದೆ. ಕ್ವಾರಂಟೈನ್‌ನಲ್ಲಿರುವವರು ತಾಲೂಕು ಆಡಳಿತ ತಮಗೆ ತಿನ್ನಲೂ ಯೋಗ್ಯವಲ್ಲದ ಕಳಪೆ ಆಹಾರವನ್ನು ನೀಡುತ್ತಿದೆ ಎಂದು ಫೇಸ್‌ಬುಕ್‌ ಮತ್ತು ವಾಟ್ಸಪ್‌ನಲ್ಲಿ ಅಳಲು ತೋಡಿಕೊಳ್ಳುತ್ತಿದ್ದು ಸಾಕಷ್ಟುವೈರಲ್‌ ಆಗುತ್ತಿದೆ. ಇದೂ ಕೂಡ ಅಧಿಕಾರಿಗಳಿಗೆ ತಲೆ ನೋವು ತಂದಿದೆ. ಕ್ವಾರಂಟೈನ್‌ ಕೇಂದ್ರದಿಂದ ತಪ್ಪಿಸಿಕೊಂಡರೆ ತಾಲೂಕಿನ ಹಳ್ಳಿ ಹಳ್ಳಿಗಳು ಕೋರೋನಾ ಸಾಮ್ರಾಜ್ಯಕ್ಕೆ ಒಳಪಡಲಿವೆ ಎಂಬ ಆತಂಕ ಮಾತ್ರ ಅಧಿಕಾರಿಗಳನ್ನು ಕಾಡುತ್ತಿದೆ.

ಕ್ರೂರಿ ಕೊರೋನಾ ಅಟ್ಟಹಾಸಕ್ಕೆ ಮೂರು ಹೆಣ್ಣು ಮಕ್ಕಳು ಅನಾಥ..!

ನಾವಾರೂ ಮುಂಬೈನಲ್ಲಿ ಶಾರೂಕ್‌ ಖಾನ್‌ -ಅಮೀರ್‌ ಖಾನ್‌ಗಳ ರೀತಿಯಲ್ಲಿ ಹೀರೋಗಳಲ್ಲ. ಮುಂಬೈನಲ್ಲಿರುವವರು ಬಹುತೇಕ ಕೂಲಿ ಕಾರ್ಮಿಕರು. ಆಟೋ ರಿಕ್ಷಾ ಚಾಲಕರು. ಹೋಟೆಲ್‌ಗಳಲ್ಲಿ ಸಪ್ಲೆಯರ್‌ ಮತ್ತು ಕ್ಲೀನರ್‌ಗಳಾಗಿ ಬದುಕು ಕಟ್ಟಿಕೊಂಡಿದ್ದವರು. ಮುಂಬೈನಲ್ಲಿ ಕೊರೋನಾ ಹೆತ್ತಾಗಿ ಅಲ್ಲಿನ ಉದ್ಯಮಗಳು ಸ್ಥಗಿತಗೊಂಡವು. ನಮ್ಮ ಬದುಕು ಬೀದಿಗೆ ಬಿದ್ದಿದೆ. ಈ ಕಾರಣಕ್ಕಾಗಿ ನಾವು ನಮ್ಮ ಸ್ವಗ್ರಾಮಕ್ಕೆ ಆಗಮಿಸಿ ಜೀವ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಮುಂಬೈನಗರ ಸೊಂಕು ಮುಕ್ತಗೊಂಡು ಜನ ಜೀವನ ಯಥಾಸ್ಥಿಗೆ ಮರಳಿದ ಅನಂತರ ಇವರೆಲ್ಲರೂ ಮತ್ತೆ ಮುಂಬೈಗೆ ಹೋಗುತ್ತೇವೆ. ನಾವು ಮುಂಬೈನಲ್ಲಿದ್ದರೂ ಕೆ.ಆರ್‌.ಪೇಟೆ ತಾಲೂಕಿನ ಮಣ್ಣಿನಲ್ಲಿಯೇ ಮರೆಯಾಗುವವರು. ನಮ್ಮ ಬಗ್ಗೆ ತಾಲೂಕಿನಲ್ಲಿ ಅನಗತ್ಯವಾಗಿ ಅಪಪ್ರಚಾರ ಮಾಡಿ ಭೀತಿ ಹುಟ್ಟಿಸಲಾಗುತ್ತಿದೆ ಎಂದು ಮುಂಬೈ ವಲಸಿಗ ಆದಿಹಳ್ಳಿ ರಮೇಶ್‌,

-ಸಿಂ.ಕಾ.ಸುರೇಶ್‌

click me!