ಜನತಾ ಕರ್ಫ್ಯೂ: ಹಾಲಿಗಾಗಿ ಮುಗಿಬಿದ್ದ ಜನ!

Kannadaprabha News   | Asianet News
Published : Mar 22, 2020, 07:43 AM IST
ಜನತಾ ಕರ್ಫ್ಯೂ: ಹಾಲಿಗಾಗಿ ಮುಗಿಬಿದ್ದ ಜನ!

ಸಾರಾಂಶ

ಸರದಿ ಸಾಲಲ್ಲಿ ನಿಂತು ಹಾಲು ಖರೀದಿ ಮಾಡಿದ ಜನ| ಹಾಲಿಗಾಗಿ ಗುಂಪಾಗಿ ಮುಗಿಬಿದ್ದು ಜನ| ಬೆಂಗಳೂರಿನ ವಿವಿಧೆಡೆ ನಡೆದ ಘಟನೆ| ಜನತಾ ಕರ್ಫ್ಯೂ ಉದ್ದೇಶವೇ ಮರೆದ ಜನ|

ಬೆಂಗಳೂರು[ಮಾ.22]: ಕೊರೋನಾ ಸೋಂಕು ತಡೆಗೆ ಕರೆ ನೀಡಲಾಗಿರುವ ‘ಜನತಾ ಕರ್ಫ್ಯೂ’ದಿನ ಇಂದು[ಭಾನುವಾರ] ಹಾಲು, ಔಷಧ ಸೇರಿದಂತೆ ಮತ್ತಿತರ ಅಗತ್ಯ ಸೇವೆಗಳು ಲಭ್ಯವಿರಲಿದೆ ಎಂದು ಸರ್ಕಾರ ಹೇಳಿದ್ದರೂ ಶನಿವಾರ ರಾತ್ರಿ ವಿವಿಧೆಡೆ ಜನರು ನಂದಿನಿ ಬೂತ್‌ಗಳಿಗೆ ಗುಂಪಾಗಿ ಮುಗಿಬಿದ್ದು, ಸರದಿ ಸಾಲಲ್ಲಿ ನಿಂತು ಹಾಲು ಖರೀದಿ ಮಾಡಿದ ಘಟನೆ ನಡೆದಿದೆ.

ಮಾ.22ರಂದು ನಮ್ಮ ಮೆಟ್ರೋ ಬಂದ್: ಉಳಿದ ದಿನಗಳಲ್ಲಿ ಮಕ್ಕಳು, ಹಿರಿಯ ನಾಗರಿಕರಿಗೆ ನಿರ್ಬಂಧ!

ಚಾಮರಾಜಪೇಟೆಯ ರಾಮಕೃಷ್ಣ ಆಶ್ರಮ ವೃತ್ತದ ಬಳಿಯ ನಂದಿನಿ ಬೂತ್‌ ಸೇರಿದಂತೆ ನಗರದ ವಿವಿಧೆಡೆಯ ನಂದಿನಿ ಬೂತ್‌ಗಳಿಗೆ ರಾತ್ರಿ 11ರ ಸುಮಾರಿಗೆ ವಾಹನಗಳಲ್ಲಿ ಹಾಲು ಸರಬರಾಜಾಗುತ್ತಿದ್ದಂತೆ ಮುಗಿದ್ದ ಜನರು ರಾತ್ರಿಯೇ ಹಾಲು ಖರೀದಿ ಮಾಡಿದ್ದಾರೆ.

ಜನತಾ ಕರ್ಫ್ಯೂ: ಹುಬ್ಬಳ್ಳಿ-ಧಾರವಾಡ ಸ್ತಬ್ಧ, ಏನು ಇರುತ್ತೆ, ಏನೇನ್ ಇರಲ್ಲ?

ಹಾಲು ಔಷಧದಂತಹ ಅಗತ್ಯ ಸೇವೆಗಳ ಮೇಲೆ ಸರ್ಕಾರ ಯಾವುದೇ ನಿರ್ಬಧ ವಿಧಿಸಿಲ್ಲ. ಹಾಗಾಗಿ ಎಂದಿನಂತೆ ಅವರು ಲಭ್ಯವಾಗಲಿವೆ. ಅಲ್ಲದೆ, ಜನತಾ ಕರ್ಫ್ಯೂ ಉದ್ದೇಶವೇ ಕೊರೋನಾ ವೈರಸ್‌ ಹರಡುವಿಕೆ ತಡೆಗೆ ಜನರು ಗುಂಪು ಸೇರಬಾರದು ಎಂದು ಜಾಗೃತಿ ಮೂಡಿಸುವುದು. ಆದರೆ, ಇದರ ಪರಿವೇ ಇಲ್ಲದವರಂತೆ ಜನರು ಗುಂಪುಗೂಡಿ ಮುಗಿಬಿದ್ದಿರುವುದು ವಿಪರ್ಯಾಸವೇ ಸರಿ.

PREV
click me!

Recommended Stories

ಮುಗಿದ ವಿದ್ಯುದೀಕರಣ ಪ್ರಕ್ರಿಯೆ, ಬೆಂಗಳೂರು-ಮಂಗಳೂರು ವಂದೇ ಭಾರತ್‌ಗೆ ಸಿಕ್ತು ಗ್ರೀನ್‌ಸಿಗ್ನಲ್‌!
ಬಸ್‌ನಲ್ಲಿ ನಿದ್ದೆ ಮಾಡ್ತಿದ್ದ ಯುವತಿಗೆ ಕಾಮುಕನ ಕಿರುಕುಳ; ಗಟ್ಟಿಗಿತ್ತಿ ಹುಡುಗಿಯ ತಕ್ಕ ಶಾಸ್ತಿ ವಿಡಿಯೋ ವೈರಲ್!