ಕೊರೋನಾ ಭೀತಿ: ಗಂಭೀರ ಕಾಯಿಲೆ ಇರುವ ಬಿಎಂಟಿಸಿ ಸಿಬ್ಬಂದಿಗೆ ರಜೆ

By Kannadaprabha NewsFirst Published Mar 22, 2020, 7:42 AM IST
Highlights

ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷ ದಾಟಿದ ಬಿಎಂಟಿಸಿ ನೌಕರರಿಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿದ್ದರೂ ಕಡ್ಡಾಯವಾಗಿ ರಜೆ ಮಂಜೂರು ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.

ಬೆಂಗಳೂರು(ಮಾ.22): ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯರಿಗೆ ಕಡ್ಡಾಯವಾಗಿ ರಜೆ ಮಂಜೂರು ಮಾಡಲು ತೀರ್ಮಾನಿಸಲಾಗಿದೆ.

ಮಧುಮೇಹ, ಕಿಡ್ನಿ, ಶ್ವಾಸಕೋಶ ಸೇರಿದಂತೆ ಅಪಾಯಕಾರಿ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷ ದಾಟಿದ ಬಿಎಂಟಿಸಿ ನೌಕರರಿಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿದ್ದರೂ ಕಡ್ಡಾಯವಾಗಿ ರಜೆ ಮಂಜೂರು ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.

ನಾಳೆಯಿಂದ 9 ದಿನ ಯಾವುದೇ ಪತ್ರಿಕಾಗೋಷ್ಠಿ ನಡೆಸುವಂತಿಲ್ಲ..!

ಕೇಂದ್ರ ಸರ್ಕಾರದ ಈ ಮೇಲ್ಕಡ ಸಮಸ್ಯೆಗಳಿಂದ ಬಳಲುತ್ತಿರುವ ಸರ್ಕಾರಿ ನೌಕರರು ರಜೆ ಕೋರಿದ್ದಲ್ಲಿ ವೈದ್ಯಕೀಯ ಪ್ರಮಾಣಪತ್ರ ರಹಿತವಾಗಿ ರಜೆ ಮಂಜೂರು ಮಾಡುವಂತೆ ಆದೇಶಿಸಿದೆ.

ಭಾರತ ತುರ್ತಾಗಿ 2 ವಾರ ಲಾಕ್‌ಡೌನ್‌ ಆಗದಿದ್ದರೆ ಭಾರೀ ಗಂಡಾಂತರ!

ಇದರನ್ವಯ ಬಿಎಂಟಿಸಿಯು ಈ ಸೂಚನೆ ಪಾಲನೆಗೆ ಮುಂದಾಗಿದೆ. ರಜೆ ಪಡೆದು ಹೋಗುವ ನೌಕರರ ಜಾಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

click me!