ಅಂದು ಭರವಸೆ ಕೊಟ್ಟು ಇಂದು ಗೊತ್ತೇ ಇಲ್ಲ ಎಂದ ಸಚಿವ: ಕೊಡಗಿನ ಜನ ಗರಂ

By Suvarna News  |  First Published Mar 13, 2020, 3:08 PM IST

ಕೆಲವು ತಿಂಗಳ ಹಿಂದೆ #WeNeedEmergencyHospitalInKodagu ಎಂಬ ಹ್ಯಾಶ್‌ ಟ್ಯಾಗ್ ಟ್ವಿಟರ್‌ನಲ್ಲಿ ಸೌಂಡ್ ಮಾಡಿತ್ತು. ಉತ್ತಮ ದರ್ಜೆಯ ಆಸ್ಪತ್ರೆಗಾಗಿ ಬೇಡಿಕೆ ಬಂದಿತ್ತು. ಆಗ ಸಚಿವ ಶ್ರೀರಾಮುಲು ಅವರೂ ಆಸ್ಪತ್ರೆಯ ಭರವಸೆ ನೀಡಿದ್ದರು. ಈಗ ಮಾತ್ರ ನಂಗೇ ಗೊತ್ತೇ ಇಲ್ಲ ಎಂಬಂತೆ ವರ್ತಿಸಿದ್ದಾರೆ.


ಕೊಡಗು(ಮಾ.13): ಕೆಲವು ತಿಂಗಳ ಹಿಂದೆ #WeNeedEmergencyHospitalInKodagu ಎಂಬ ಹ್ಯಾಶ್‌ ಟ್ಯಾಗ್ ಟ್ವಿಟರ್‌ನಲ್ಲಿ ಸೌಂಡ್ ಮಾಡಿತ್ತು. ಉತ್ತಮ ದರ್ಜೆಯ ಆಸ್ಪತ್ರೆಗಾಗಿ ಬೇಡಿಕೆ ಬಂದಿದೆ.

ಕೊಡಗು ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ವಿಚಾರ ತನ್ನ ಗಮನಕ್ಕೆ ಬಂದೇ ಇಲ್ಲ ಎಂದು ಸರ್ಕಾರ ಹೇಳಿದೆ. ಹಾಗಾದ್ರೆ ಕೆಲವು ತಿಂಗಳ ಹಿಂದೆ ಭಾರೀ ಟ್ವಿಟರ್ ಅಭಿಯಾನ ನಡೆಯಿತಲ್ಲ, ಅದು ಸರ್ಕಾರದ ಗಮನಕ್ಕೆ ಬಂದೇ ಇಲ್ವಾ ಎಂದ ಪ್ರಶ್ನೆ ಮುಡಿದೆ.

Tap to resize

Latest Videos

ಕೊರೋನಾ ಎಫೆಕ್ಟ್: ಹುಬ್ಬಳ್ಳಿಯಲ್ಲಿ ಕಳೆಗುಂದಿದ ರಂಗಪಂಚಮಿ

ವಿಧಾನಸಭೆಯಲ್ಲಿ ಶಾಸಕ ರಂಜನ್ ಪ್ರಶ್ನೆಗೆ ಆರೋಗ್ಯ ಸಚಿವ ಉತ್ತರಿಸಿದ್ದು ಆರೋಗ್ಯ ಸಚಿವರೇ, ತಮ್ಮ ಗಮನಕ್ಕೆ ಬಂದೇ ಇಲ್ವಾ? ಕಳೆದ ವರ್ಷ ತೀವ್ರ ಸ್ವರೂಪದಲ್ಲಿ ನಡೆದಿದ್ದ ಜೋರಾಟ #WeNeedEmergencyHospitalInKodagu ಅಭಿಯಾನ ಇದ್ಯಾವುದೂ ಗೊತ್ತೇ ಇಲ್ಲದಂತೆ ವರ್ತಿಸಿದ್ದಾರೆ ಶ್ರೀರಾಮುಲು.

ಅಭಿಯಾನಕ್ಕೆ ಸ್ಯಾಂಡಲ್‌ವುಡ್ ತಾರೆಯರಿಂದಲೂ ಬೆಂಬಲ ವ್ಯಕ್ತವಾಗಿತ್ತು. ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಆರೋಗ್ಯ ಸಚಿವ ನಂತರ ಕೊಡಗಿಗೂ ಭೇಟಿ ನೀಡಿದ್ದರು. ವೀರ ಯೋಧರ ನಾಡಿಗೆ ಬೇಕಾದ ಆಸ್ಪತ್ರೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳುತ್ತೇನೆ ಎಂದಿದ್ದ ರಾಮುಲು ಕೊಡವ ಭಾಷೆಯಲ್ಲೇ ಟ್ವೀಟ್ ಮಾಡಿದ್ದರು.

JDS ನವರಿಗೆ ಕಾಂಗ್ರೆಸ್ ಗಾಳ : ಅಧಿಕಾರಕ್ಕೇರಲು ಕಾಂಗ್ರೆಸ್ ಕಸರತ್ತು

ಈ ವಿಚಾರ ಸರ್ಕಾರದ ಗಮನಕ್ಕೆ ಬಂದೇ ಇಲ್ಲ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಹಾಗಾದ್ರೆ ಅಂದು ಭೇಟಿ ನೀಡಿದ್ದು, ಟ್ವೀಟ್ ಮಾಡಿದ್ದರ ಅರ್ಥ ಏನು? ಜನ ತಮ್ಮ‌ಮೇಲೆ‌ ಇಟ್ಟ ನಂಬಿಕೆಗೆ ಸಿಕ್ಕ ಫಲ ಇದೇನಾ? ಎಂದು ಸಚಿವರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್, ಫೇಸ್‌ಬುಕ್‌ನಲ್ಲಿ ಸಚಿವರನ್ನು ಕೊಡಗಿನ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. 

click me!