'ಕಾಂಗ್ರೆಸ್‌ನಲ್ಲೂ ಬಣಗಳು ಇವೆ, ಸಮಸ್ಯೆ ಬಂದಾಗ ಗುಂಪುಗಾರಿಕೆ ಮಾಡೇ ಮಾಡ್ತೇವೆ'

Suvarna News   | Asianet News
Published : Mar 13, 2020, 03:00 PM IST
'ಕಾಂಗ್ರೆಸ್‌ನಲ್ಲೂ ಬಣಗಳು ಇವೆ, ಸಮಸ್ಯೆ ಬಂದಾಗ ಗುಂಪುಗಾರಿಕೆ ಮಾಡೇ ಮಾಡ್ತೇವೆ'

ಸಾರಾಂಶ

ಪ್ರಕಾಶ್ ಹುಕ್ಕೇರಿ ಎಂಪಿಯಾಗಿದ್ದಾಗಲೂ ಸಹ ಕಾಣಿಸಿಕೊಳ್ಳುತ್ತಿರಲಿಲ್ಲ| ಹುಕ್ಕೇರಿ ಅವರು ತಮ್ಮ ಭಾಗಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು| ಪ್ರಕಾಶ್ ಹುಕ್ಕೇರಿ ಮೇಲೆ ಆರೋಪ ಮಾಡೋದು ಅವಶ್ಯಕತೆ ಇಲ್ಲ ಅವರ ವರ್ಕಿಂಗ್ ಸ್ಟೈಲ್ ಹಾಗಿದೆ ನಾವೇನೂ ಮಾಡಕ್ಕಾಗಲ್ಲ| 

ಬೆಳಗಾವಿ(ಮಾ.13): ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ ಅಂತಾ ಹೇಳಲ್ಲ, ನಮ್ಮಲ್ಲಿಯೂ ಇದೆ. ಬೇರೆ ಪಕ್ಷದಲ್ಲೂ ಇದೆ. ವೈಯಕ್ತಿಕ ಸಮಸ್ಯೆ ಬಂದಾಗ ಗುಂಪುಗಾರಿಕೆ ಮಾಡೇ ಮಾಡುತ್ತೇವೆ. ಆದರೆ ಪಕ್ಷ ಬಂದಾಗ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಪಕ್ಷದಲ್ಲಿ ಹೆಚ್ಚು ಕಾಣಿಸಿಕೊಳ್ಳದ ವಿಚಾರದ ಬಗ್ಗೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ಹುಕ್ಕೇರಿ ಎಂಪಿಯಾಗಿದ್ದಾಗಲೂ ಸಹ ಕಾಣಿಸಿಕೊಳ್ಳುತ್ತಿರಲಿಲ್ಲ. ತಮ್ಮ ಭಾಗಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಅವರ ಮೇಲೆ ಆರೋಪ ಮಾಡೋದು ಅವಶ್ಯಕತೆ ಇಲ್ಲ. ಅವರ ವರ್ಕಿಂಗ್ ಸ್ಟೈಲ್ ಹಾಗಿದೆ ನಾವೇನೂ ಮಾಡಕ್ಕಾಗಲ್ಲ ಎಂದು ಹೇಳಿದ್ದಾರೆ.

ನೆರೆ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡೇ ಮಾಡುತ್ತೇವೆ. ಸರ್ಕಾರದ ಮೇಲೆ ಪದೇ ಪದೇ ಒತ್ತಾಯ ಮಾಡುತ್ತಲೇ ಇದ್ದೇವೆ ಎಂದು ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ