ಕೊರೋನಾ ಕಾಟ: ಕುಗ್ಗಿದ ವೀಕ್‌ಎಂಡ್‌, ರಜಾದಿನ ಮೋಜು ಮಸ್ತಿ

Kannadaprabha News   | Asianet News
Published : Sep 14, 2020, 10:02 AM ISTUpdated : Sep 14, 2020, 10:48 AM IST
ಕೊರೋನಾ ಕಾಟ: ಕುಗ್ಗಿದ ವೀಕ್‌ಎಂಡ್‌, ರಜಾದಿನ ಮೋಜು ಮಸ್ತಿ

ಸಾರಾಂಶ

ಕೋವಿಡ್‌-19 ಸೋಂಕಿನಿಂದಾಗಿ ಕುಗ್ಗಿದ ಪ್ರವಾಸಿಗರ ಸಂಖ್ಯೆ| ಖಾಸಗಿ, ಸರ್ಕಾರಿ ಕಚೇರಿಗಳಿಗೆ, ಸಂಸ್ಥೆಗಳಿಗೆ ಭಾನುವಾರ ರಜೆ ಇರುವುದರಿಂದ ಈ ತಾಣಗಳಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದರು| ಇದೀಗ ರಜಾದಿನದಲ್ಲೂ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ| 

ಕಾರವಾರ(ಸೆ.14): ತಾಲೂಕಿನಲ್ಲಿ ಮಳೆಗಾಲದಲ್ಲಿ ಜನ್ಮ ತಾಳುವ ಕೆಲವು ಜಲಪಾತಗಳು ಪ್ರಮುಖ ಆಕರ್ಷಣೀಯ ಸ್ಥಳಾಗಳಾಗಿದ್ದು, ಪ್ರಸಕ್ತ ವರ್ಷ ಇಂತಹ ಪ್ರವಾಸಿ ತಾಣಗಳಿಗೆ ಮೋಜು ಮಸ್ತಿಗೆ ಬರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಕೋವಿಡ್‌-19 ಸೋಂಕಿನಿಂದಾಗಿ ಜಲಪಾತಗಳಿಗೆ ಪ್ರವಾಸಿಗರು ಆಗಮಿಸುವುದು ಕಡಿಮೆಯಾಗಿದ್ದು, ವೀಕೆಂಡ್‌, ರಜಾದಿನದಲ್ಲಿ ಕೆಲವು ಪ್ರಮುಖ ಜಲಪಾತಕ್ಕೆ ಪ್ರವಾಸಿಗರ ದಂಡೆ ಬರುತ್ತಿತ್ತು. ನಾಗರಮಡಿ, ಹನುಮಾನ್‌ ಲಾಠಿ, ಅಣಶಿ, ಗೋಲಾರಿ ಫಾಲ್ಸ್‌ ಒಳಗೊಂಡು ಹಲವಾರು ಜಲಪಾತಗಳು ಮಳೆಗಾಲದಲ್ಲಿ ಮಾತ್ರ ಜೀವತಳೆದಿರುತ್ತವೆ. ಸುತ್ತಲಿನ ಬೆಟ್ಟಗುಡ್ಡಗಳಿಂದ ಬರುವ ನೀರು ಒಂದೆಡೆ ಸೇರಿ ಜಲಪಾತ ಸೃಷ್ಟಿಯಾಗುತ್ತದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಕಾಣಸಿಗುವ ಜಲಪಾತಗಳು ಮಳೆಗಾಲ ಮುಗಿಯುತ್ತಿದ್ದಂತೆ ನೀರಿನ ಹರಿವು ಕಡಿಮೆಯಾಗಿ ಮರೆಯಾಗುತ್ತವೆ. ಆದರೆ, ಈಗಲೂ ಮಳೆ ಉತ್ತಮವಾಗಿದ್ದು, ಸಪ್ಟೆಂಬರ್‌ ತಿಂಗಳಲ್ಲೂ ಈ ಜಲಪಾತಗಳಲ್ಲಿ ನೀರು ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದೆ. ರಜಾದಿನಗಳಲ್ಲಿ ನೂರಾರು ಪ್ರವಾಸಿಗರು ಈ ಜಲಪಾತಗಳಿಗೆ ಆಗಮಿಸುತ್ತಿದ್ದರು. ಆದರೆ, ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

ಕರಾವಳಿಯಲ್ಲಿ ಮುಂದುವರೆದ ವರುಣನ ಆರ್ಭಟ

ಕಾರವಾರ ಕದ್ರಾ ಮೂಲಕ ಜೊಯಿಡಾಕ್ಕೆ ತೆರಳುವಾಗ ಅಣಶಿ ಜಲಪಾತ ರಸ್ತೆ ಪಕ್ಕದಲ್ಲೇ ಕಾಣಸಿಗುತ್ತದೆ. ಈ ರಸ್ತೆಯಲ್ಲಿ ಸಾಗುವವರೆ ಪ್ರಮುಖ ಪ್ರವಾಸಿಗರಾಗಿದ್ದಾರೆ. ಗೋಲಾರಿ, ಹನುಮಾನ್‌ ಲಾಠಿ, ನಾಗರಮಡಿ ಜಲಪಾತ ಕಾರವಾರದಿಂದ ಕುಮಟಾಕ್ಕೆ ತೆರಳುವ ಮಾರ್ಗದಲ್ಲಿ ಸಿಗುತ್ತವೆ. ಗೋಲಾರಿ ಜಲಪಾತಕ್ಕೆ ತೆರಳಬೇಕಾದರೆ ತೋಡುರು ಬಳಿ ಒಳಗೆ ಹೋಗಬೇಕು. 6 ರಿಂದ 8 ಕಿ.ಮೀ. ಅರಣ್ಯದಲ್ಲಿ ನಡೆದುಕೊಂಡು ಹೋಗಬೇಕು.

ನಾಗರಮಡಿಗೆ ತೆರಳಬೇಕಾದರೆ ಚೇಂಡಿಯಾ ಬಳಿ ಹೋಗಬೇಕಿದ್ದು, ಇಲ್ಲಿ ಕೂಡಾ ಪೂರ್ಣ ಜಲಪಾತದ ವರೆಗೆ ವಾಹನ ಹೋಗುವುದಿಲ್ಲ. 2 ರಿಂದ 3 ಕಿ.ಮೀ. ನಡೆಯಬೇಕು. ಹನುಮಾನ್‌ ಲಾಠಿಗೆ ತೆರಳಬೇಕಾದರೆ ಮುದುಗಾ ಬಳಿ ಒಳಕ್ಕೆ ಹೋಗಬೇಕು. ಒಂದು ಕಿಮೀ ರಸ್ತೆ ಕಡಿದಾಗಿದ್ದು, ವಾಹನ ಸಾಗುತ್ತದೆ. ನಂತರ ಜಲಪಾತಕ್ಕೆ 200 ಮೀ.ನಷ್ಟುನಡೆದುಕೊಂಡು ಹೋಗಬೇಕು. ಈ ತಾಣಗಳಿಗೆ ಸ್ಥಳೀಯರು, ನೌಕಾನೆಲೆ ಅಧಿಕಾರಿಗಳು, ಸಿಬ್ಬಂದಿ, ಗೋವಾದವರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದರು. ಖಾಸಗಿ, ಸರ್ಕಾರಿ ಕಚೇರಿಗಳಿಗೆ, ಸಂಸ್ಥೆಗಳಿಗೆ ಭಾನುವಾರ ರಜೆ ಇರುವುದರಿಂದ ಈ ತಾಣಗಳಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದರು. ಆದರೆ ರಜಾದಿನದಲ್ಲೂ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ.

ಈ ವರ್ಷ ಹನುಮಾನ್‌ ಲಾಠಿಗೆ ಹೊರಗಿನಿಂದ ಬರುವವರ ಸಂಖ್ಯೆ ಕಡಿಮೆಯಾಗಿದೆ. ಸ್ಥಳೀಯರೇ ಹೆಚ್ಚು ಬರುತ್ತಾರೆ. ಸಣ್ಣ ಜಲಪಾತವಾದರೂ ಅಪಾಯವಿಲ್ಲ. ಕುಟುಂಬದೊಂದಿಗೆ ಕಾಲಕಳೆಯಲು ಈ ಸ್ಥಳ ಉತ್ತಮವಾಗಿದೆ. ನೀರಿನಲ್ಲಿ ಈಜಾಡಲು ಆಗುತ್ತದೆ. ಕಲ್ಲುಗಳು ಇರುವುದರಿಂದ ಮಕ್ಕಳು ಕೂಡಾ ನೀರಿನಲ್ಲಿ ಆಟವಾಡಬಹುದು ಎಂದು ಸ್ಥಳೀಯ ಸಾಯಿಕಿರಣ ಬಾಬ್ರೇಕರ ಅವರು ತಿಳಿಸಿದ್ದಾರೆ. 

"

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ