ಮಾಜಿ ಸಚಿವ ಜನಾರ್ದನ ರೆಡ್ಡಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ರಾಮೇಶ್ವರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.
ಬಳ್ಳಾರಿ (ಸೆ.14): ಕೊರೋನಾ ಸೋಂಕಿನಿಂದ ಗುಣಮುಖರಾಗಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರು ಇದೀಗ ಕುಟುಂಬ ಸದಸ್ಯರ ಸಮೇತ ತಮಿಳುನಾಡಿನ ಪ್ರಸಿದ್ಧ ಯಾತ್ರಾಸ್ಥಳ ರಾಮೇಶ್ವರಂಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿರುವ ಜನಾರ್ದನ ರೆಡ್ಡಿ, ರಾಮೇಶ್ವರಂ ಮಹತ್ವ ಕುರಿತು ತಿಳಿಸಿದ್ದಾರಲ್ಲದೆ, ಪುತ್ರ ಹಾಗೂ ಪತ್ನಿ ಜತೆಗಿನ ಫೋಟೋವನ್ನು ಹಾಕಿಕೊಂಡಿದ್ದಾರೆ.
ರಾವಣನನ್ನು ಸಂಹಾರ ಮಾಡಿದ ಬಳಿಕ ಶ್ರೀರಾಮಚಂದ್ರನು ಮಾತೃಭೂಮಿಗೆ ಮರಳಿದ ಬಳಿಕ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾನೆ. ರಾವಣನನ್ನು ವಧಿಸಿದ ಪಾಪವನ್ನು ಪ್ರಾಯಶ್ಚಿತ ಮಾಡಿಕೊಳ್ಳಲು ಆಯ್ಕೆ ಮಾಡಿಕೊಂಡ ಸ್ಥಳವೇ ರಾಮೇಶ್ವರಂ ಆಗಿದೆ.
ಬಳ್ಳಾರಿ-ಹೊಸಪೇಟೆ: ಶೀಘ್ರದಲ್ಲೇ 24X7 ಕುಡಿಯುವ ನೀರು ಯೋಜನೆಗೆ ಚಾಲನೆ .
ರಾಮೇಶ್ವರಂ ಸಮುದ್ರದಲ್ಲಿ ಸ್ನಾನ ಮಾಡಿದರೆ 24 ತೀರ್ಥ ಕ್ಷೇತ್ರಗಳಲ್ಲಿ ಸ್ನಾನ ಮಾಡಿದ ಪುಣ್ಯ ಲಭಿಸಲಿದ್ದು, ಪಾಪಗಳೆಲ್ಲವೂ ಪರಿಹಾರವಾಗುತ್ತವೆ ಎಂದು ಜನಾರ್ದನ ರೆಡ್ಡಿ ಬರೆದುಕೊಂಡಿದ್ದಾರೆ.