ನಿರಂತರವಾಗಿ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ಯಾದಗಿರಿ ತಾಲೂಕಿನ ಅಲ್ಲಿಪೂರ ಗ್ರಾಮದ ಕೆರೆ ಸಂಪೂರ್ಣ ಭರ್ತಿಯಾಗಿದೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ
ಯಾದಗಿರಿ(ಆ.04): ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಜನರು ನಲುಗಿ ಹೋಗಿದ್ದಾರೆ.ಮಳೆಗೆ ಜನರು ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದ್ದು, ಜಿಲ್ಲಾದ್ಯಂತ ಮಳೆಯ ಆಘಾತಕ್ಕೆ ಹಲವಾರು ಅನಾಹುತ, ಅವಾಂತರಗಳು ಮುಂದುವರೆದಿವೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ಯಾದಗಿರಿ ತಾಲೂಕಿನ ಅಲ್ಲಿಪೂರ ಗ್ರಾಮದ ಕೆರೆಯು ಸಂಪೂರ್ಣ ಭರ್ತಿಯಾಗಿದೆ. ಕೆರೆ ಭರ್ತಿಯಾದ ಪರಿಣಾಮ ಕೆರೆ ಕೋಡಿ ಮೇಲಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಹೋಗುತ್ತಿದ್ದು, ಅಲ್ಲಿಪುರ ಗ್ರಮಾದ ರಸ್ತೆಯು ಜಲಾವೃತವಾಗಿದೆ.
undefined
ಸರಕಾರಿ ಶಾಲೆ ಹಾಗೂ ಗ್ರಾಮ ಪಂಚಾಯತ್ ಭಾಗಕ್ಕೆ ತೆರಳಬೇಕೆಂದರೆ ಪರದಾಡುವಂತಾಗಿದೆ. ಮಕ್ಕಳು, ವೃದ್ಧರು ನಡೆದುಕೊಂಡು ಹೋಗಲು ಸಂಕಷ್ಟ ಎದುರಿಸುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗ ರಸ್ತೆ ಜಲಾವೃತವಾಗಿ ಗ್ರಾಮಸ್ಥರು ನಡೆದುಕೊಂಡು ಹೋಗಲು ಪರದಾಡುವಂತಾಗಿದೆ. ಎತ್ತರದ ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Uttara Kannada Rainfall; ಮಲಗಿದ್ದವರ ಮೇಲೆ ಮನೆ ಕುಸಿದು 4 ಮಂದಿ ದುರ್ಮರಣ
ಮನೆ ಕುಸಿತ ಸಹೋದರನ ಮನೆಯಲ್ಲಿ ವಾಸ
ಅಲ್ಲಿಪೂರ ಗ್ರಾಮದಲ್ಲಿ ಮನೆ ಕುಸಿದಿದೆ. ಗ್ರಾಮದ ಗುಂಡಪ್ಪ ಕುಂಬಾರ ಎಂಬುವವರ ಮನೆ ಗೊಡೆ ಕುಸಿದಿದೆ. ಮನೆ ಸೋರಿಕೆಯಾಗಿ ಮನೆ ಗೊಡೆ ಕುಸಿದಿದ್ದು, ಮನೆಯೊಳಗೆ ಇರುವ ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳು ಹಾನಿಯಾಗಿದೆ. ಮನೆ ಗೊಡೆ ಕುಸಿದ ಪರಿಣಾಮ ಗುಂಡಪ್ಪ ತಮ್ಮ ಸಹೋದರನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ಗುಂಡಪ್ಪ ಕುಂಬಾರ, ನಿನ್ನೆ ಸುರಿದ ಮಳೆಗೆ ಮನೆ ನೆನೆದು ಮನೆ ಗೊಡೆ ಕುಸಿದಿದೆ. ಮನೆಯಲ್ಲಿರುವ ಧವಸ ಧಾನ್ಯಗಳು ಹಾನಿಯಾಗಿವೆ. ಮನೆಯಿಲ್ಲದಕ್ಕೆ ನಾನು ನನ್ನ ಸಹೋದರನ ಮನೆಯಲ್ಲಿ ವಾಸವಾಗಿದ್ದೆನೆ. ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡಿ ಅನುಕೂಲ ಮಾಡಬೇಕೆಂದರು.
ಮಡಿಕೇರಿಯ ಬೆಟ್ಟದಲ್ಲಿ ಭಾರೀ ಒರತೆ: ಗುಡ್ಡ ಜರಿದು ಅನಾಹುತ
ಕಾಕಲವಾರ, ಮಿನಾಸಪುರ ಸೇತುವೆ ಮುಳುಗಡೆ
ಗುರುಮಿಠಕಲ್ ತಾಲೂಕಿನ ಕಾಕಲವಾರ ಹಾಗೂ ಮಿನಾಸಪುರ ಗ್ರಾಮದ ಸೇತುವೆಗಳು ಜಲಾವೃತವಾಗಿ ಸಂಪರ್ಕ ಕಳೆದುಕೊಂಡಿವೆ. ಊರಿಗೆ ತೆರಳಲು ಜನರು ಪರದಾಡುವಂತಾಗಿದೆ. ಮೂಡಬೂಳ, ಮುಷ್ಟುರು, ಕೊಹಿಲೂರು ಸೇರಿದಂತೆ ಮೊದಲಾದ ಕಡೆ ಬೆಳೆ ನೀರು ಪಾಲಾಗಿದೆ. ಹತ್ತಿ, ತೊಗರಿ, ಹೆಸರು ಬೆಳೆ ಹಾನಿಯಾಗಿದೆ .ಬೆಳೆ ಹಾನಿಯಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಯಾದಗಿರಿಯ ದೇಗುಲಗಳು ಜಲಾವೃತ
ಭೀಮಾನದಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತ್ತಿ ಬ್ಯಾರೇಜ್ ನಿಂದ 70 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು. ಭೀಮಾ ನದಿಯು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿಂದ ಭೀಮಾನದಿಗೆ 70 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಭೀಮಾನದಿಯು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು ಭೀಮಾನದಿ ತೀರದಲ್ಲಿರುವ ಕಂಗಳೇಶ್ವರ ಹಾಗೂ ವೀರಾಂಜನೇಯ ದೇಗುಲಗಳು ಜಲಾವೃತವಾಗಿದ್ದು, ಭಕ್ತರ ದರ್ಶನ ಭಾಗ್ಯ ಈಗ ಮರಿಚಿಕೆಯಾಗಿದೆ. ಭೀಮಾನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಿದೆ.