ಕಲಬುರಗಿ ಭಾರೀ ಮಳೆ: ಉಕ್ಕೇರಿದ ದಸ್ತಾಪುರ ಹಳ್ಳ, ಗಂಡೋರಿ ಜಲಾಶಯ ಭರ್ತಿ

By Girish Goudar  |  First Published Aug 4, 2022, 11:01 PM IST

ಬೆಳಕೋಟ ಬಳಿಯ 1.5 ಟಿಎಂಸಿ ಸಾಮರ್ಥ್ಯದ ಗಂಡೋರಿ ನಾಲಾ ಜಲಾಶಯ ಭರ್ತಿ 


ಕಲಬುರಗಿ(ಆ.04): ನಿರಂತರ ಸುರಿಯುತ್ತಿರುವ ಮಳೆಗೆ ಕಮಲಾಪುರ ತಾಲೂಕು ತತ್ತರಿಸಿದೆ. ಇಲ್ಲಿನ ದಸ್ತಾಪುರ ಹಳ್ಳ ಉಕ್ಕೇರಿದೆ. ಬೆಳಕೋಟ ಬಳಿಯ 1.5 ಟಿಎಂಸಿ ಸಾಮರ್ಥ್ಯದ ಗಂಡೋರಿ ನಾಲಾ ಜಲಾಶಯ ಭರ್ತಿಯಾಗಿದೆ. ಜಲಾಶಯಕ್ಕೆ 600 ಕ್ಯೂಸೆಕ್‍ನಿಂದ 750 ಕ್ಯೂಸೆಕ್ ಒಳ ಹರಿವು ಹಚ್ಚಾಗಿದೆ. ಒಳಹರಿವು ಹೆಚ್ಚಾದರೆ ಹೊರಹರಿವಿನ ಪ್ರಮಾಣ ಹೆಚ್ಚಿಸಲಾಗುವುದು ಎಂದು ಸಹಾಯಕ ಇಂಜಿನಿಯರ ಶ್ರೀಕಾಂತ್ ಹೂಂಡಾಳೆ ತಿಳಿಸಿದ್ದಾರೆ. 

ಗಂಡೋರಿ ನಾಲಾ ಭರ್ತಿಯಾದ ಕಾರಣ ದಸ್ತಾಪುರ ಹಳ್ಳ ತುಂಬಿ ಹರಿಯುತ್ತಿದೆ ಹಾಗೂ ಮುಖ್ಯ ಸಂಪರ್ಕ ಕಡಿತಗೊಂಡಿದೆ. ಸುಮಾರು 2 ದಶಕ ಕಳೆದರೂ ಇಲ್ಲಿ ಸೇತುವೆ ನಿರ್ಮಿಸಿಲ್ಲ. ಈ ವರ್ಷ ಮಳೆ ಹೆಚ್ಚಾಗಿದ್ದು ಮೇಲಿಂದ ಮೇಲೆ ಪ್ರಭಾವ ಉಂಟಾಗುತ್ತಿದೆ.

Tap to resize

Latest Videos

ಮಗನ ರಕ್ಷಣೆ ಮಾಡಲು ನೀರಿಗೆ ಹಾರಿದ್ದ ಅಪ್ಪ, ತಂದೆ-ಮಗನ ಶವ ಪತ್ತೆ

ದಸ್ತಾಪುರ ಸೇತುವೆ ಮೇಲೆ ಭಾರಿ ಪ್ರಮಾಣದಲ್ಲಿ ನೀರಿದೆ. ಜಮೀನುಗಳಿಗೂ ನೀರು ನುಗ್ಗಿದೆ. ಹೊಲಗಳಿಗೆ ಹೋದ ರೈತರು ವಾಪಸ್ ಬರಲು ಆಗುತ್ತಿಲ್ಲ , ಸೇತುವೆ ಮೇಲೆ ಹೆಚ್ಚಿನ ಪ್ರಮಾಣದ  ನೀರು ಇರುವುದರಿಂದ ರೈತರು ಅತ್ತ ಮನೆಗೂ ಇಲ್ಲ ಇತ್ತ ಹೊಲದಲ್ಲೂ ಇಲ್ಲ ಎನ್ನುವ ರೀತಿ ಆಗಿದೆ. ನೂರಾರು ಎಕರೆ ಜಮೀನಿನಿಂದ ಹರಿದು ಬರುವ ನೀರು ಈ ಹಳ್ಳಕ್ಕೆ ಬಂದು ಸೇರುತ್ತಿದೆ.

ಸೇತುವೆ ಮೇಲೆ ನೀರು ಹರಿಯುತ್ತಿದೆ ನಿತ್ಯ ಅವಶ್ಯಕ ವಸ್ತುಗಳ ಖರೀದಿ, ಅವಘಾತ. ಅನಾರೋಗ್ಯ ಮತ್ತು ಇತರ ತುರ್ತು ಸಂದರ್ಭದಲ್ಲಿ ಗ್ರಾಮದಿಂದ ಆಚೆ ಹೋಗಲಾಗುವುದಿಲ್ಲ. ಪ್ರವಾಹ ಸ್ವಲ್ಪ ತಗ್ಗಿದಾಗ ಜನ ಅನಿವಾರ್ಯ ಕಾರಣಗಳಿಂದ ಜನ ಆಚೆಗೆ ದಾಟುತ್ತಿದ್ದಾರೆ. ಮಕ್ಕಳು, ವೃದ್ಧರು ಮಹಿಳೆಯರು ಹೆಗಲ ಮೇಲೆ ಕುಳ್ಳಿರಿಸಿಕೊಂಡು ದಾಟುತ್ತಾರೆ. ಸ್ವಲ್ಪ ಆಯ ತಪ್ಪಿದರೆ ಪ್ರವಾಹ ಕೊಚ್ಚಿ ಹೋಗುವುದು ನಿಶ್ಚಿತ. ಆತಂಕದಲ್ಲೇ ದಸ್ತಾಪುರ ಜನ ಬದುಕುತ್ತಿದ್ದಾರೆ.
 

click me!