ಹುಳುಗಳ ಕಾಟಕ್ಕೆ ಬೇಸತ್ತ ಬಾಗಲಕೋಟೆ ಮಂದಿ: ಅಧಿಕಾರಿಗಳಿಗೆ ಹಿಡಿಶಾಪ..!

By Girish GoudarFirst Published Oct 17, 2023, 10:30 PM IST
Highlights

ರಾತ್ರಿಯಾದ್ರೆ ಊಟ ಮಾಡೋಂಗಿಲ್ಲ, ನಿದ್ರೆ ಹತ್ತೋದಿಲ್ಲ, ಕ್ಷಣ ಕ್ಷಣಕ್ಕೂ ಇಲ್ಲಿ ನುಸಿ, ಹುಳುಗಳ ಕಾಟ, ಹುಳುಗಳ ಕಾಟಕ್ಕೆ ಬೇಸತ್ತು ಕಣ್ಣೀರಿಡುತ್ತಿರೋ ಬಾಗಲಕೋಟೆಯ ನವನಗರದ ವೃದ್ದರು. ಮಕ್ಕಳು ಮರಿಗಳು ತಪ್ಪದ ಅನಾರೋಗ್ಯ ಭೀತಿ ಜ್ವರ, ತುರಿಕೆ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿರೋ ಜನರು.

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಅ.17):  ಇಲ್ಲಿನ ಜನ್ರು ರಾತ್ರಿಯಾದ್ರೆ ಸಾಕು ನೆಮ್ಮದಿಯಿಂದ ಊಟ ಮಾಡೋ ಹಾಗಿಲ್ಲ, ನಿದ್ರೆಯಂತೂ ಇಲ್ಲವೇ ಇಲ್ಲ, ಇನ್ನು ಮಕ್ಕಳು ಮರಿಗಳಿಗೆ ಒಂದಿಲ್ಲೊಂದು ರೋಗ ರುಜಿನದ ಕಾಟ, ಹೀಗೆ ಒಂದಿಲ್ಲೊಂದು ಸಮಸ್ಯೆಗಳನ್ನ ಇಲ್ಲಿನ ಜನ್ರು ನುಸಿ ಮತ್ತು ಹುಳುಗಳ ಕಾಟದಿಂದ ಎದುರಿಸುತ್ತಿದ್ದಾರೆ. ಸಾಲದ್ದಕ್ಕೆ ನುಸಿ ಮತ್ತು ಹುಳುಗಳ ಕಾಟಕ್ಕೆ ವಯೋವೃದ್ದರು ನಿದ್ರೆ ಊಟವಿಲ್ಲದೆ ಕಣ್ಣೀರಿಡುತ್ತಿದ್ದಾರೆ. ಹಾಗಾದ್ರೆ ಇದೆಲ್ಲಿ ಅಂತೀರಾ? ಈ ಕುರಿತ ವರದಿ ಇಲ್ಲಿದೆ...

ಹೌದು, ಒಂದೆಡೆ ರಾತ್ರಿಯಾದ್ರೆ ಸಾಕು ಮನೆ ಮನೆಯಲ್ಲಿ ಕಾಣ ಸಿಗುವ ಹುಳುಗಳಿಂದ ಬೇಸತ್ತಿರೋ ಜನ್ರು, ಮತ್ತೊಂದೆಡೆ ಮನೆಯಲ್ಲಿ ಊಟಕ್ಕೆ ಕುಳಿತ್ರೆ ಸಾಕು ಪ್ಲೇಟ್​ನಲ್ಲಿ ಕಾಣ ಸಿಗೋ ಹುಳುಗಳು, ಹುಳುಗಳ ಬಾಧೆಯಿಂದ ಕ್ಯಾಮರಾ ಎದುರು ಕಣ್ಣೀರಿಡುತ್ತಿರೋ ವೃದ್ದ ಜೀವಗಳು. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆಯ ನವನಗರದಲ್ಲಿ. 

ಉಲ್ಟಾ ಹೊಡೆದ ಮಹಾಲಿಂಗೇಶ್ವರ ಸ್ವಾಮೀಜಿ: ಮೋದಿ ಆಯ್ಕೆ ಮಾಡಿಲ್ಲಾಂದ್ರೆ ಯಾರೂ ಉಳಿಯೊಲ್ಲವೆಂದು ನಾನು ಹೇಳಿಲ್ಲ

ಹೌದು. ನವನಗರದ 35 ಮತ್ತು 36ನೇ ಸೆಕ್ಟರ್​ನಲ್ಲಿ ಈಗ ಜನ್ರು ನುಸಿ ಹುಳುಗಳ ಭಾಧೆಯಿಂದ ಕಂಗೆಡುವಂತಾಗಿದೆ. ಯಾಕಂದ್ರೆ ಸಮೀಪದಲ್ಲಿಯೇ ಎಪಿಎಂಸಿ ಬೃಹತ್ ಗೋಡವಾನ್​ಗಳು ಇರೋದ್ರಿಂದ ಅಲ್ಲಿಂದ ನುಸಿ ಮತ್ತು ಹುಳುಗಳು ಈ ಪ್ರದೇಶದ ಮನೆಗಳಿಗೆ ಬರುತ್ತಿದ್ದು, ಇದ್ರಿಂದ ಮನೆಯ ಗೋಡೆ, ಕಿಟಕಿ, ಅಡುಗೆ ಮನೆ, ಹಾಲ್​ ಜೊತೆಗೆ ಊಟಕ್ಕೆ ಕುಳಿತ್ರೆ ಪ್ರತಿಯೊಬ್ಬರು ಪ್ಲೇಟ್​ನಲ್ಲಿಯೂ ಸಹ ಹುಳುಗಳೇ ಹುಳುಗಳು. ಇದ್ರಿಂದ ಜನರೆಲ್ಲಾ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಗೋಡಾವನ್​​ಗಳಲ್ಲಿ ಸ್ಟಾಕ್​ ಮಾಲ್ ಇರೋದ್ರಿಂದ ಸಾಯಂಕಾಲ ಕಿಟಕಿ, ಬಾಗಿಲು ತೆರಯುವುದರಿಂದ ಸಹಜವಾಗಿಯೇ ಅಲ್ಲಿರೋ ನುಸಿ ಹುಳುಗಳು ಬಂದು ಸಮೀಪದಲ್ಲಿರೋ ಮನೆಗಳಿಗೆ ಬರುತ್ತಿದ್ದು, ಇದ್ರಿಂದ ಇಲ್ಲಿನ ಜನ ನೆಮ್ಮದಿಯನ್ನ ಕಳೆದುಕೊಳ್ಳುವಂತಾಗಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಫೋನ ಮಾಡಿದ್ರೂ ಯಾರೂ ಸಹ ಕ್ಯಾರೆ ಅನ್ನುತ್ತಿಲ್ಲ, ಹೀಗಾಗಿ ಕೂಡಲೇ ಸಂಭಂದಪಟ್ಟವರು ಈ ಕುರಿತು ಸೂಕ್ತ ಕ್ರಮವಹಿಸಬೇಕು ಅಂತಾರೆ ಸ್ಥಳೀಯ ಮಹಿಳೆಯರಾದ ಲಕ್ಕಮ್ಮ.                               

ವಯೋವೃದ್ದರಿಗೆ ಬಾರದ ನಿದ್ರೆ, ಬೆಂಬಿಡದ ರೋಗ ರುಜಿನಗಳು...

ಇನ್ನು ನುಸಿ ಹುಳುಗಳ ಹಾವಳಿಯಿಂದ ಇಲ್ಲಿನ ಕುಟುಂಬಗಳ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಜ್ವರ, ತುರಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಅನಾರೋಗ್ಯಕ್ಕೀಡಾಗಿ ಪದೇ ಪದೇ ಆಸ್ಪತ್ರೆಗೆ ಅಲೆಯುವಂತಾಗಿದ್ದು, ಅನೇಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವುಗಳ ಮಧ್ಯೆ ಇಲ್ಲಿರೋ ವಯೋವೃದ್ದರಿಗಂತೂ ನಿದ್ರೆಯೇ ಇಲ್ಲದಂತಾಗಿದೆ, ವಯಸ್ಸಾದ ನಂತರ ನೆಮ್ಮದಿಯಿಂದ ಇರಬೇಕಾಗಿದ್ದ ಹಿರಿಯ ಜೀವಗಳು ತಮಗೆ ನುಸಿ ಹುಳುಗಳ ಕಾಟದಿಂದ ಬೇಸತ್ತು ನಿದ್ರೆಯೇ ಇಲ್ಲದಂತಾಗಿ ಕಣ್ಣೀರಿಟ್ಟ ಪ್ರಸಂಗಗಳು ಸಹ ನಡೆದಿವೆ. ಈ ನಡುವೆ ಇಲ್ಲಿರೋ ಚರಂಡಿಗಳ ಸುತ್ತಮುತ್ತ ಸ್ವಚ್ಚತೆಯೂ ಸಹ ಇಲ್ಲದಂತಾಗಿದೆ. ಮುಖ್ಯವಾಗಿ ಗೋಡವಾನ್​ಗಳಲ್ಲಿ ಇರೋ ಸ್ಟಾಕ್​ ಮಾಲ್​ಗಳ ಕಾರಣದಿಂದಾಗಿಯೇ ಈ ಸಮಸ್ಯೆ ಎದುರಿಸುತ್ತಿದ್ದು, ಆದಷ್ಟು ಬೇಗ ಈ ಸಂಭಂದ ಕ್ರಮಕೈಗೊಳ್ಳಲಿ ಅಂತಾರೆ ವೃದ್ದರಾದ ಮೌಲಾಸಾಬ್​ ಮತ್ತು ಮಹಿಳೆಯರಾದ ನಿರ್ಮಲಾ.                         

ಒಟ್ಟಿನಲ್ಲಿ ನುಸಿ ಹುಳುಗಳ ಹಾವಳಿಯಿಂದ ಈ ಪ್ರದೇಶದ ಕುಟುಂಬಗಳು ನಲುಗಿ ಹೋಗಿದ್ದು, ಇಷ್ಟಕ್ಕೂ ಇನ್ನಾದ್ರೂ ಜಿಲ್ಲಾಡಳಿತ ಈ ಸಮಸ್ಯೆಗೆ ಮುಕ್ತಿ ಹಾಡುತ್ತಾ ಅಂತ ಕಾದು ನೋಡಬೇಕಿದೆ.

click me!