ಯಲಬುರ್ಗಾ: ಕ್ಷೌರ ಮಾಡಲು ಕೇಳಿದ್ದಕ್ಕೆ ದಲಿತರ ಮೇಲೆ ಹಲ್ಲೆ

By Kannadaprabha News  |  First Published Jun 10, 2021, 11:24 AM IST

* 15 ಜನರ ವಿರುದ್ಧ ಪ್ರಕರಣ ದಾಖಲು
* ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದ ಘಟನೆ
*  ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ


ಯಲಬುರ್ಗಾ(ಜೂ.10): ಕ್ಷೌರ ಮಾಡುವ ವಿಚಾರದಲ್ಲಿ ಸವರ್ಣೀಯರು ಹಾಗೂ ದಲಿತರ ಮಧ್ಯೆ ಗಲಾಟೆ ನಡೆದ ಘಟನೆ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಖಾಲಿ ಜಾಗವೊಂದರಲ್ಲಿ ಮಾಡುತ್ತಿದ್ದಾಗ, ದಲಿತ ಯುವಕರು ನಮಗೂ ಕ್ಷೌರ ಮಾಡಿ ಎಂದು ಕೇಳಿದ್ದಾರೆ. ಆಗ ಸವರ್ಣೀಯರು, ಇಲ್ಲಿ ನಿಮಗೆ ಕ್ಷೌರ ಮಾಡುವುದಿಲ್ಲ. ನಿಮ್ಮ ಮನೆ ಹತ್ತಿರ ಮಾಡಿಸಿಕೊಳ್ಳಿ ಎಂದಾಗ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಲ್ಲಿದ್ದ ಕೆಲವರು ದಲಿತ ಸಹೋದರರಾದ ಸಣ್ಣ ಹನುಮಂತಪ್ಪ ಹಾಗೂ ಬಸವರಾಜರ ಮೇಲೆ ಹಲ್ಲೆ ನಡೆಸಿದ್ದಾರೆ.

Tap to resize

Latest Videos

ಮುಗಿಯದ ಕೊರೋನಾ ಗೋಳು: ಮೊಬೈಲಲ್ಲೇ ಪಾಠಕ್ಕೆ ಶಿಕ್ಷಣ ಇಲಾಖೆ ಅಣಿ..!

ಈ ಅವಮಾನ ತಾಳಲಾರದ ಅವರು ವಿಷ ಸೇವಿಸಿದ್ದಾರೆ. ತಕ್ಷಣ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆದಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ತಿಳಿದು ಬಂದಿದೆ. ಕ್ಷೌರ ಮಾಡುತ್ತಿದ್ದ ಮಲ್ಲಪ್ಪ ಕಳಕಪ್ಪ ಸೇರಿದಂತೆ ಒಟ್ಟು 15 ಜನರ ವಿರುದ್ಧ ಯಲಬುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಲಿತ ಸಮುದಾಯದ ದೇವಪ್ಪ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಯಲಬುರ್ಗಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಡಿವೈಎಸ್ಪಿ ಗೀತಾ ಬೇನಾಳ ತಿಳಿಸಿದ್ದಾರೆ.
 

click me!