* ಮೇ 15ರಿಂದ 30ರ ವರೆಗೆ ಹೋಂ ಕ್ವಾರಂಟೈನ್‌ನಲ್ಲಿದ್ದ ಸೋಂಕಿತರು
* ಕೋವಿಡ್ ಭಯ ತೊಲಗಿಸುವಲ್ಲಿ ನಿರರತಾದ ಕುಟುಂಬದ ಸದಸ್ಯರು
* ಹುಬ್ಬಳ್ಳಿ ತಾಲೂಕಿನ ಅಮರಗೋಳ ಗ್ರಾಮ
ಹುಬ್ಬಳ್ಳಿ(ಜೂ.10): ಇಲ್ಲಿನ ಅಮರಗೋಳದ ಒಂದೇ ಕುಟುಂಬದ 11 ಸದಸ್ಯರು ಕೋವಿಡ್ ಗೆಲ್ಲುವ ಮೂಲಕ ಮಾದರಿಯಾಗಿದ್ದಾರೆ.
ಇಲ್ಲಿನ ದಾಸನೂರ ಸಮೂಹ ಸಂಸ್ಥೆಯ ಪಾಲುದಾರ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಉಳವಪ್ಪ ದಾಸನೂರ(50) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಅವರ ಪತ್ನಿ ರೂಪಾ ದಾಸನೂರ(45), ಮಕ್ಕಳಾದ ಮೇಘಾ(18), ಸ್ಪಂದನ(13), ಸುಯೋಗ(9) ಹಾಗೂ ಕುಟುಂಬದ ಸದಸ್ಯರಾದ ಹರೀಷ ದಾಸನೂರ(24), ವರ್ಷ ದಾಸನೂರ(20), ಶ್ವೇತಾ ದಾಸನೂರ(31), ರೇಖಾ ದಾಸನೂರ(52), ವಿದ್ಯಾ ದಾಸನೂರ(28), ಚೇತನ್(25) ಅವರು ಕೊವೀಡ್ ಸೋಂಕಿಗೆ ಒಳಗಾಗಿದ್ದರು.
ಹುಬ್ಬಳ್ಳಿ: ಕಿಮ್ಸ್‌ನಲ್ಲಿ 342 ಕೊರೋನಾ ಸೋಂಕಿತೆಯರಿಗೆ ಹೆರಿಗೆ..!
ಸಂಬಂಧಿ ವೈದ್ಯ ಡಾ. ಸಂದೀಪ ವೈ.ಆರ್. ಹಾಗೂ ಹುಬ್ಬಳ್ಳಿಯ ಡಾ. ರಾಘವೇಂದ್ರ ಬೆಳಗಾಂವಕರ ಅವರು ನೀಡಿದ್ದರು. ಸೋಂಕಿತರು ಮೇ 15ರಿಂದ 30ರ ವರೆಗೆ ಹೋಂ ಕ್ವಾರಂಟೈನ್‌ನಲ್ಲಿ ಇದ್ದರು. ಮೇ 31ರಂದು ಎಲ್ಲರಿಗೂ ಮರುಪರೀಕ್ಷೆ ನಡೆಸಲಾಗಿದ್ದು, ಕೊವೀಡ್‌ನಿಂದ ಮುಕ್ತರಾಗಿದ್ದಾರೆ. ಇದೀಗ ಅಮರಗೋಳದ ಗ್ರಾಮಸ್ಥರಲ್ಲಿ ಕೋವಿಡ್ ಭಯ ನೀಗಿಸುವಲ್ಲಿ ಈ ಕುಟುಂಬದ ಸದಸ್ಯರು ತೊಡಗಿದ್ದಾರೆ.