ಕೊರೋನಾಗೆ ಹೆದರಿ ಊರು ಬಿಟ್ಟು ಹೊಲ ಸೇರಿದ ಕುಟುಂಬ

Kannadaprabha News   | Asianet News
Published : Jun 10, 2021, 11:07 AM ISTUpdated : Jun 10, 2021, 11:15 AM IST
ಕೊರೋನಾಗೆ ಹೆದರಿ ಊರು  ಬಿಟ್ಟು ಹೊಲ ಸೇರಿದ ಕುಟುಂಬ

ಸಾರಾಂಶ

ಕೊರೋನಾಗೆ ಹೆದರಿ ಊರನ್ನೇ ಬಿಟ್ಟ ಕುಟುಂಬ ಹೊಲದಲ್ಲಿ ಶೆಡ್ ಹಾಕಿಕೊಂಡು ಬೀಡುಬಿಟ್ಟಿರುವ ಕುಟುಂಬ ಊರಿನಿಂದ 2 ಕಿ.ಮೀ ದೂರದಲ್ಲಿರುವ ಹೊಲ ಸೇರಿದ ಕುಟುಂಬ 

ಶ್ರಿರಂಗಪಟ್ಟಣ (ಜೂ.10): ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಕೊರೋನಾ ಸೋಂಕಿಗೆ ಹೆದರಿ ಕುಟುಂಬ ಒಂದು ತಮ್ಮ ಜಮೀನಿನಲ್ಲಿ ಸೆಡ್ ನಿರ್ಮಿಸಿಕೊಂಡು ವಾಸಿಸುತ್ತಿದೆ. 

ಗ್ರಾಮದ ಕುಮಾರ್ ಎಂಬುವರು ತಮ್ಮ ಪತ್ನಿ ಇಬ್ಬರು ಮಕ್ಕಳ ಜತೆ ಪಾಲಹಳ್ಳಿ ಗ್ರಾಮದಿಂದ ಸುಮಾರು ಎರಡು ಕಿ ಮೀ ದೂರದ ತಮ್ಮ ಜಮೀನಿನ ಮೂಲೆಯಲ್ಲಿ ಶೆಡ್ ಕಟ್ಟಿಕೊಂಡು ಕಳೆದ 15 ದಿನಗಳಿಂದ ವಾಸ ಮಾಡುತ್ತಿದ್ದಾರೆ. 

ಗ್ರಾಮದ ಹಳ್ಳದಕೇರಿ ಪ್ರದೇಶದಲ್ಲಿ ಕುಮಾರ್‌ ಅವರಿಗೆ ಸ್ವಂತ ಮನೆ ಇದ್ದು  ಇವರ ಮನೆಯ ಆಸುಪಾಸಿನಲ್ಲಿ ಐವರಿಗೆ ಕೊರೋನಾ ಸೋಂಕು ತಗುಲಿದೆ. ಇದರಿಂದ ಗಾಬರಿಗೊಂಡ ಕುಮಾರ್ ತಮ್ಮ ಇಬ್ಬರು ಮಕ್ಕಳು  ಮತ್ತು ಪತ್ನಿ ಸಮೇತರಾಗಿ  ಮನೆ ಖಾಲಿ ಮಾಡಿಕೊಂಡು ಜಮೀನು ಸೇರಿಕೊಂಡಿದ್ದಾರೆ. 

ಕೊರೋನಾ ಸಾವಿನ ಸಂಕೋಲೆ: ರಾಜ್ಯವೇ ಬೆಚ್ಚಿ ಬೀಳಿಸುವಂತ ಸುದ್ದಿ..! .

ನನಗೆ ಕೇವಲ ಅರ್ಧ ಎಕರೆ ಜಮೀನು ಇದೆ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದೇನೆ. ಒಂದು ವೇಳೆ ಕೊರೋನಾ ಅಂಟಿಕೊಂಡರೆ  ಜೀವ ಉಳಿಸಿಕೊಳ್ಳಲು ನನ್ನ ಬಳಿ ಹಣವಿಲ್ಲ.  ನ್ನಿಬ್ಬರು ಮಕ್ಕಳು, ಹಂಡರಿ ಮತ್ತು ನನ್ನ ಕ್ಷೇಮದ ದೃಷ್ಟಿಯಿಂದ  ಊರು ಬಿಟ್ಟು ಬಂದಿದ್ದೇನೆ.  ಕೊರೋನಾ ಹಾವಳಿ ನಿಲ್ಲುವವರೆಗೆ ಊರಿಗೆ ತೆರಳಲ್ಲ ಎಂದರು.   

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು