ರಾಮಮಂದಿರ ಜಾಗ ಖರೀದಿ ಅವ್ಯವಹಾರ ಆರೋಪ : 2 ದಿನದಲ್ಲಿ ಮಾಹಿತಿ ಹೊರಕ್ಕೆ

By Suvarna News  |  First Published Jul 1, 2021, 4:03 PM IST
  • ಅಯೋಧ್ಯೆಯಲ್ಲಿ ಮುಂದುವರಿದ ರಾಮಮಂದಿರ ನಿರ್ಮಾಣ ಕಾರ್ಯ 
  •  ರಾಮಮಂದಿರ ಜಾಗ ಖರೀದಿಯಲ್ಲಿ ಅವ್ಯವಹಾರದ ಆರೋಪ
  •  ಈ ಸಂಬಂಧ ಟ್ರಸ್ಟ್ ನ ಕಾರ್ಯದರ್ಶಿಗಳು ,ಖಜಾಂಜಿ ಮತ್ತು  ಸದಸ್ಯರ ನಡುವೆ ಚರ್ಚೆ

 ಉಡುಪಿ (ಜು.01): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಂದುವರೆಯುತ್ತಿದೆ.  ಇದೇ ವೇಳೆ ರಾಮಮಂದಿರ ಜಾಗ ಖರೀದಿಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ ಎಂದು ರಾಮಂದಿರ ಟ್ರಸ್ಟ್ ನ ವಿಶ್ವಸ್ಥ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ತಿಳಿಸಿದ್ದಾರೆ. 

ಉಡುಪಿಯಲ್ಲಿಂದು ಮಾತನಾಡಿದ ಪೇಜಾವರ ಸ್ವಾಮೀಜಿ, ರಾಮಮಂದಿರ ಟ್ರಸ್ಟ್ ಈ ಬಗ್ಗೆ ಗಮನ ಹರಿಸಿದ್ದು, ಈ ಸಂಬಂಧ ಟ್ರಸ್ಟ್ ನ ಕಾರ್ಯದರ್ಶಿಗಳು ,ಖಜಾಂಜಿ ಮತ್ತು  ಸದಸ್ಯರ ನಡುವೆ ಚರ್ಚೆ ನಡೆದಿದೆ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದರು.

Latest Videos

undefined

ಉಪ​ಗ್ರ​ಹ ಚಿತ್ರ​ದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಸೆರೆ!

ಎರಡು ದಿನಗಳಲ್ಲಿ ಎಲ್ಲವನ್ನೂ ಸಮಾಜದ ಮುಂದೆ ಇಡಲಿದ್ದಾರೆ.  ಟ್ರಸ್ಟ್ ನಿಂದ ಯಾವುದೇ ಅವ್ಯವಹಾರವೂ ನಡೆದಿಲ್ಲ. ಈ ಬಗ್ಗೆ ಪರಿಪೂರ್ಣ ವಿವರಗಳನ್ನು‌ ಟ್ರಸ್ಟ್ ಜನರ ಮುಂದೆ ತೆರೆದಿಡಲಿದೆ ಎಂದು ಸ್ವಾಮೀಜಿ ತಿಳಿಸಿದರು.  

ಅಧ್ಯಾತ್ಮ, ಪ್ರವಾಸ ಸ್ಮಾರ್ಟ್‌ ಸಿಟಿ ಸ್ಪರ್ಶ, ಮೋದಿ ಕಲ್ಪನೆಯ ಅಯೋಧ್ಯಾ ರಾಮಮಂದಿರವಿದು..!

ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಆರೋಪದ ಬಗ್ಗೆ ಸ್ವಾಮೀಜಿ ಸ್ಪಷ್ಟನೆ ನೀಡಿದರು. 

click me!