ಕೋವಿಡ್‌ನಿಂದ ಅನಾಥವಾದ ಬಾಲಕಿ ದತ್ತು ಪಡೆಯಲು ರೇಣುಕಾಚಾರ್ಯ ದಂಪತಿ ನಿರ್ಧಾರ

By Suvarna NewsFirst Published Jul 1, 2021, 2:39 PM IST
Highlights

* ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಬಾಲಕಿ
* ಬಾಲಕಿಗೆ ಸಾಂತ್ವನ ಹೇಳಿದ ರೇಣುಕಾಚಾರ್ಯ ದಂಪತಿ
* ಬಾಲಕಿಯ ಸಂಬಂಧಿಕರು ಒಪ್ಪಿದರೆ ದತ್ತು ಪಡೆಯುವೆ: ರೇಣುಕಾಚಾರ್ಯ

ದಾವಣಗೆರೆ(ಜು.01): ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಬಾಲಕಿಯನ್ನು ಪಡೆಯಲು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ದಂಪತಿ ನಿರ್ಧರಿಸಿದ್ದಾರೆ. ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ದೊಡ್ಡೇರಹಳ್ಳಿ ಗ್ರಾಮದ ಬಾಲಕಿಯನ್ನು ಭೇಟಿ ಮಾಡಿದ ರೇಣುಕಾಚಾರ್ಯ ಹಾಗೂ ಪತ್ನಿ ಸುಮಿತ್ರಾ ಅವರು ಸಾಂತ್ವನ ಹೇಳಿದ್ದಾರೆ. 

ಬಾಲಕಿ ಕೆಲ ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡು ಎರಡು ತಿಂಗಳ ಹಿಂದೆ ಕೋವಿಡ್‌ನಿಂದ ತಂದೆಯನ್ನು ಕಳೆದುಕೊಂಡಿದ್ದಳು. ಹೀಗಾಗಿ ಗ್ರಾಮಕ್ಕೆ ತೆರಳಿ ಮಗುವಿಗೆ ಹೇಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಆರ್ಥಿಕ ಸಹಾಯ ಮಾಡಿದ್ದಾರೆ. 

ಸಸಿ ನೆಟ್ಟ ಸೋಂಕಿತರು, ರೇಣುಕಾಚಾರ್ಯರಿಂದ ಮತ್ತೊಂದು ಮಾದರಿ ಕೆಲಸ

ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ ಅವರು, ಬಾಲಕಿಯ ಸಂಬಂಧಿಕರು ಒಪ್ಪಿದರೆ ದತ್ತು ಪಡೆದು ತಂದೆ ತಾಯಿ ಸ್ಥಾನದಲ್ಲಿ ನಿಂತು ಮುಂದಿನ ವಿಧ್ಯಾಭ್ಯಾಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಬಾಲಕಿಯನ್ನು ಬಾಚಿ ತಪ್ಪಿಕೊಂಡು ಸಾಂತ್ವನ ಹೇಳಿದ ರೇಣು ದಂಪತಿ.

click me!