ರಾಮಮಂದಿರ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ದೇಣಿಗೆ

By Kannadaprabha News  |  First Published Feb 20, 2020, 12:12 PM IST

ಬುಧವಾರ ದೆಹಲಿಯಲ್ಲಿ ನಡೆದ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಸಭೆಯಲ್ಲಿ ಸದಸ್ಯರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ರಾಮಮಂದಿರ ನಿರ್ಮಾಣಕ್ಕೆ ತಮ್ಮ ಮಠದ ವತಿಯಿಂದ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಹೆಸರಿನಲ್ಲಿ 5 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ.


ಉಡುಪಿ(ಫೆ.20): ಬುಧವಾರ ದೆಹಲಿಯಲ್ಲಿ ನಡೆದ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಸಭೆಯಲ್ಲಿ ಸದಸ್ಯರಾದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ರಾಮಮಂದಿರ ನಿರ್ಮಾಣಕ್ಕೆ ತಮ್ಮ ಮಠದ ವತಿಯಿಂದ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಹೆಸರಿನಲ್ಲಿ 5 ಲಕ್ಷ ರುಪಾಯಿ ದೇಣಿಗೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀಗಳು ಟ್ರಸ್ಟ್‌ನ ಎಲ್ಲ ಸದಸ್ಯರಿಗೆ ಉಡುಪಿ ಶ್ರೀಕೃಷ್ಣನ ಪ್ರಸಾದದ ರೂಪದ ಶಾಲುಗಳನ್ನು ಹೊದಿಸಿ ಸನ್ಮಾನಿಸಿದರು. ರಾಮಜನ್ಮಭೂಮಿ ನಿರ್ಮಾಣಕ್ಕೆ ಪ್ರಧಾನಮಂತ್ರಿಗಳ ಸಚಿವಾಲಯದ ವಿಶೇಷ ಅಧಿಕಾರಿ ರವೀಂದ್ರ ಮಿಶ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.

Latest Videos

undefined

ರಾಮಮಂದಿರಕ್ಕೆ ಭರ್ಜರಿ 10 ಕೋಟಿ ರು. ದೇಣಿಗೆ!

ಈ ಸಮಿತಿಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಅಯೋಧ್ಯೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾತೆ ತೆರೆಯಲು ನಿರ್ಧಿಸಲಾಗಿದ್ದು, ಭಕ್ತರು ಇದಕ್ಕೆ ಉದಾರ ದೇಣಿಗೆ ನೀಡಬೇಕು ಎಂದು ಪೇಜಾವರ ಶ್ರೀಗಳು ಮನವಿ ಮಾಡಿದ್ದಾರೆ. ಮಾತ್ರವಲ್ಲದೆ ಸಮಿತಿಗೆ ಸಾತ್ವಿಕ ಶಕ್ತಿಯ ಅಗತ್ಯವಿದೆ. ಆದ್ದರಿಂದ ದೇಶದ ಪ್ರತಿಯೊಂದು ಭಕ್ತರ ಮನೆಯಲ್ಲಿ ರಾಮನಾಮ ಪಠಣ ಮತ್ತು ರಾಮಾಯಣ ಪಾರಾಯಣ ನಡೆಯಬೇಕು ಎಂದವರು ಆಶಿಸಿದ್ದಾರೆ.

#NewsIn100Seconds ಪ್ರಮುಖ ಹೆಡ್‌ಲೈನ್ಸ್

"

click me!