ಬೆಂಗಳೂರಿನ ಮಾಲಿನ್ಯ ಮಟ್ಟ ಸಮೀಕ್ಷೆಗೆ ಕೇಂದ್ರ ತಂಡ

Kannadaprabha News   | Asianet News
Published : Feb 20, 2020, 11:57 AM IST
ಬೆಂಗಳೂರಿನ ಮಾಲಿನ್ಯ ಮಟ್ಟ ಸಮೀಕ್ಷೆಗೆ ಕೇಂದ್ರ ತಂಡ

ಸಾರಾಂಶ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನದ ಮೇರೆಗೆ ದೇಶದ ಶಬ್ದ ಮಾಲಿನ್ಯ ನಕ್ಷೆಯನ್ನು ಸಿದ್ಧಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಿಪಿಸಿಬಿ ಸಮೀಕ್ಷೆ ನಡೆಸುತ್ತಿದೆ.  

ಬೆಂಗಳೂರು(ಫೆ.20): ಬೆಂಗಳೂರು ಸೇರಿದಂತೆ ದೇಶದ ವಿವಿಧ 45 ನಗರಗಳಲ್ಲಿ ಶಬ್ದ ಮಾಲಿನ್ಯದ ಮಟ್ಟಮೀರಿರುವ ಸ್ಥಳಗಳನ್ನು ಗುರುತಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಸದ್ಯದಲ್ಲಿಯೇ ಸಮೀಕ್ಷೆ ಆರಂಭಿಸಲಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನದ ಮೇರೆಗೆ ದೇಶದ ಶಬ್ದ ಮಾಲಿನ್ಯ ನಕ್ಷೆಯನ್ನು ಸಿದ್ಧಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಿಪಿಸಿಬಿ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷಾ ಕಾರ್ಯ ಕೈಗೊಂಡ ಬಳಿಕ ಶಬ್ದ ಮಾಲಿನ್ಯದ ಮಟ್ಟ(ಡೆಸಿಬಲ್‌) ತಗ್ಗಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿದು ಬಂದಿದೆ.

GST ಪಾವತಿಸದೇ ವಂಚನೆ: ಕೋಟ್ಯಂತ ಮೌಲ್ಯದ ದಾಖಲೆ ವಶಕ್ಕೆ

ದೇಶಾದ್ಯಂತ ಮಾಲಿನ್ಯ ಸಮೀಕ್ಷೆ ನಡೆಸಿ ಮಾಲಿನ್ಯ ಪ್ರಮಾಣ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ಕುರಿತು ಮಾತನಾಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮುಖ್ಯ ವೈಜ್ಞಾನಿಕ ಅಧಿಕಾರಿ ಎಚ್‌.ಲೋಕೇಶ್ವರಿ, ಬೆಂಗಳೂರು ನಗರದಲ್ಲಿ ಹತ್ತು ಮೇಲ್ವಿಚಾರಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಎನ್‌ಜಿಟಿ ನಿರ್ದೇಶನದ ಮೇರೆಗೆ ಕೇಂದ್ರದ ತಂಡ ಸಮೀಕ್ಷೆ ಕೈಗೊಂಡಿದೆ. ಸಮೀಕ್ಷೆ ವೇಳೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕೇಂದ್ರ ತಂಡಕ್ಕೆ ಬೇಕಿರುವ ದತ್ತಾಂಶ ಹಾಗೂ ಸ್ಥಳೀಯವಾಗಿ ಮಾಲಿನ್ಯ ಪ್ರಮಾಣದ ಪ್ರದೇಶಗಳ ಪರಿಶೀಲನೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಸಹಕರಿಸಲಿದ್ದಾರೆ ಎಂದು ತಿಳಿಸಿದರು.

ಕೈಗಾರಿಕೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳನ್ನು ಅಬಕಾರಿ ಹಾಗೂ ಪೊಲೀಸ್‌ ಇಲಾಖೆ ನಿರ್ವಹಣೆ ಮಾಡಲಿದ್ದಾರೆ. ಇದೇ ರೀತಿ ಸ್ಥಳೀಯ ಸಂಸ್ಥೆಗಳು ಕೂಡ ಪಾತ್ರ ವಹಿಸಲಿವೆ. 2019ರ ಮಾಚ್‌ರ್‍ನಲ್ಲಿ ಶಬ್ದ ಮಾಲಿನ್ಯ ನಕ್ಷೆ ಅಭಿವೃದ್ಧಿಪಡಿಸಲು ಮತ್ತು ಪರಿಹಾರಕ್ಕಾಗಿ ಕ್ರಿಯಾ ಯೋಜನೆ ರೂಪಿಸಲು ಎನ್‌ಜಿಟಿ ನಿರ್ದೇಶನ ನೀಡಿತ್ತು. ಅದರಂತೆ ಕೇಂದ್ರ ತಂಡ ಸಮೀಕ್ಷೆ ಕೈಗೊಳ್ಳಲಿದೆ ಎಂದು ತಿಳಿಸಿದರು.CPCB to Survey pollution stage in bangalore

PREV
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!