ಕಾಫಿ ತೋಟದಲ್ಲಿ ಸೆರೆಸಿಕ್ಕ 15 ಅಡಿ ಉದ್ದದ ಕಾಳಿಂಗ ಸರ್ಪ| ಚಿಕ್ಕಮಗಳೂರು ಜಿಲ್ಲೆಯ ಮಹೇಶ್ ಎಂಬುವರ ಕಾಫಿ ತೋಟದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪ| ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ಹಿಡಿದ ಸ್ನೇಕ್ ಅವರವಿಂದ್|
ಚಿಕ್ಕಮಗಳೂರು(ಫೆ.20): 15 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಫಿ ತೋಟದಲ್ಲಿ ಕಾಣಿಸಿಕೊಂಡಿದ್ದರಿಂದ ಜನರು ಕೆಲ ಕ್ಷಣ ದಂಗಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಹೇಶ್ ಎಂಬುವರ ಕಾಫಿ ತೋಟಕ್ಕೆ ಕಾಳಿಂಗ ಸರ್ಪ ಎಂಟ್ರಿ ಕೊಟ್ಟಿತ್ತು.
800ಕ್ಕೂ ಹೆಚ್ಚು ಹಾವು ಹಿಡಿದ ಸ್ನೇಕ್ ಗಗನ್‌ಗೆ 50ನೇ ಕಾಳಿಂಗ ಸೆರೆ
undefined
ಇದರಿಂದ ಕಾಫಿ ತೋಟದಲ್ಲಿ ಕಾರ್ಮಿಕರು ಭಯಭೀತರಾಗಿದ್ದರು. ತೋಟದಲ್ಲಿನ ಹುತ್ತದಲ್ಲಿ ಕಾಳಿಂಗ ಸರ್ಪ ಅವಿತುಕೊಂಡಿತ್ತು. ಈ ಸುದ್ದಿಯನ್ನ ಸ್ನೇಕ್ ಅರವಿಂದ್ ಅವರಿಗೆ ತಿಳಿಸಿದ್ದರು.
ಸುದ್ದಿ ತಿಳಿದಿ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಅರವಿಂದ್ 15 ಅಡಿ ಉದ್ದದ ಕಾಳಿಂಗ ಸರ್ಪ ಸುರಕ್ಷಿತವಾಗಿ ಹಿಡಿದು ಮರಳಿ ಅರಣಕ್ಕೆ ಬಿಟ್ಟಿದ್ದಾರೆ. ಸ್ನೇಕ್ ಅರವಿಂದ್ ಅವರು ಕಾಳಿಂಗ ಸರ್ಪವನ್ನ ಹಿಡಿಯುತ್ತಿದ್ದಂತೆ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ವೇಳೆ ಕಾರ್ಮಿಕರು ಸ್ನೇಕ್ ಅರವಿಂದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.