ದಕ್ಷಿಣ ಕನ್ನಡ: ಮೂಲ್ಕಿ ಬಪ್ಪನಾಡು ಕ್ಷೇತ್ರಕ್ಕೆ ಪೇಜಾವರ ಸ್ವಾಮೀಜಿ ಭೇಟಿ

By Kannadaprabha News  |  First Published Mar 18, 2024, 11:44 PM IST

ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ೪೮ ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ಉಡುಪಿಗೆ ಮರಳಿದ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ಶ್ರೀಪಾದರನ್ನು ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗೌರವಿಸಲಾಯಿತು.


ಮೂಲ್ಕಿ (ಮಾ.18): ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ೪೮ ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ಉಡುಪಿಗೆ ಮರಳಿದ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ಶ್ರೀಪಾದರನ್ನು ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗೌರವಿಸಲಾಯಿತು.

ಕ್ಷೇತ್ರದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಶಾಸಕ ಉಮಾನಾಥ ಕೋಟ್ಯಾನ್, ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮ ನೇತೃತ್ವದಲ್ಲಿ ಪೇಜಾವರ ಶ್ರೀಗಳನ್ನು ಸ್ವಾಗತಿಸಲಾಯಿತು. ಕ್ಷೇತ್ರದ ವತಿಯಿಂದ ಪೇಜಾವರ ಶ್ರೀ ಪಾದರವರನ್ನು ಗೌರವಿಸಲಾಯಿತು. ಬಳಿಕ ವಾಹನಗಳಲ್ಲಿ ಜಾಥಾ ಮೂಲಕ ಉಡುಪಿ ಜಿಲ್ಲೆಗೆ ಬೀಳ್ಕೊಡಲಾಯಿತು. ಈ ಸಂದರ್ಭ ಧಾರವಾಡ ಕೆಲಗೇರಿ ಸಿದ್ದ ಸುಕ್ಷೇತ್ರ ಶ್ರೀ ಗುರು ಅಭಿನವ ಸಿದ್ದಲಿಂಗ ಮಹಾಸ್ವಾಮಿ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಭುವನಾಭಿರಾಮ ಉಡುಪ, ಗಿರಿ ಪ್ರಕಾಶ ತಂತ್ರಿ ಪೊಳಲಿ, ಸುನಿಲ್ ಆಳ್ವ, ಗೌತಮ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Tap to resize

Latest Videos

ಅಯೋಧ್ಯೆ ಮಂಡಲ ಪೂಜೆ ಮುಗಿಸಿ ಉಡುಪಿಗೆ ಬಂದ ಪೇಜಾವರ ಶ್ರೀಗಳು; ಆಂಜನೇಯ ಬಂದಂತಾಯ್ತು ಎಂದ ಪುತ್ತಿಗೆ ಶ್ರೀಗಳು!

ಕಟೀಲು ದೇವಳಕ್ಕೆ ಪೇಜಾವರ ಸ್ವಾಮೀಜಿ ಭೇಟಿ

ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ೪೮ ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ಉಡುಪಿಗೆ ಮರಳಿದ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದರು.ದೇವಳದ ವತಿಯಿಂದ ಶ್ರೀಪಾದರನ್ನು ಸ್ವಾಗತಿಸಲಾಯಿತು. ಕಟೀಲು ದೇವಳದ ಆಸ್ರಣ್ಣ ಬಂಧುಗಳು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ನಂತರ ಕಟೀಲಿನಿಂದ ಮೂಲ್ಕಿವರೆಗೆ ಬೈಕ್‌ ಜಾಥಾದ ಮೂಲಕ ಸ್ವಾಮೀಜಿಯವರನ್ನು ಬೀಳ್ಕೊಡಲಾಯಿತು.

click me!