'ನನ್ನ ಗರ್ಲ್‌ಫ್ರೆಂಡ್‌ ನಿಂಗೆ, ನಿಂದು ನನಗೆ..' ಬೆಂಗ್ಳೂರಲ್ಲಿ ಹೊಸ ವರ್ಷಕ್ಕೆ ನಡೀತಾ ಇದೆ ಸ್ವ್ಯಾಪಿಂಗ್ ದಂಧೆ!

By Santosh Naik  |  First Published Dec 21, 2024, 9:43 AM IST

ಬೆಂಗಳೂರಿನಲ್ಲಿ 'ನನ್ನ ಗರ್ಲ್‌ಫ್ರೆಂಡ್‌ ನಿನಗೆ, ನಿನ್ನ ಗರ್ಲ್‌ಫ್ರೆಂಡ್‌ ನನಗೆ' ಎನ್ನುವ ಗರ್ಲ್‌ಫ್ರೆಂಡ್‌ ಸ್ವ್ಯಾಪಿಂಗ್‌ ದಂಧೆ ಪತ್ತೆಯಾಗಿದೆ. 'ಸ್ವಿಂಗರ್ಸ್' ಹೆಸರಿನಲ್ಲಿ ಈ ದಂಧೆ ನಡೆಯುತ್ತಿದ್ದು, ಒಪ್ಪದ ಯುವತಿಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ.


ಬೆಂಗಳೂರು (ಡಿ.21): ರಾಜಧಾನಿ ಬೆಂಗಳೂರಿನಲ್ಲಿ ದೂರದೇಶಗಳಲ್ಲಿ ಕೇಳುತ್ತಿದ್ದ ದಂಧೆಗಳೆಲ್ಲಾ ಕಾಣಿಸೋಕೆ ಶುರುವಾಗಿದೆ. ಹೊಸ ವರ್ಷಕ್ಕೆ ಸದ್ದಿಲ್ಲದೆ ಬೆಂಗಳೂರಿನಲ್ಲಿ 'ನನ್ನ ಗರ್ಲ್‌ಫ್ರೆಂಡ್‌ ನಿನಗೆ, ನಿನ್ನ ಗರ್ಲ್‌ಫ್ರೆಂಡ್‌ ನನಗೆ..' ಎನ್ನುವ ಗರ್ಲ್‌ಫ್ರೆಂಡ್‌ ಸ್ವ್ಯಾಪಿಂಗ್‌ ದಂಧೆಯನ್ನು ಪತ್ತೆಹಚ್ಚಲಾಗಿದೆ. ಪಾರ್ಟಿಗೆ ಅಂತಾ ಕರೆದು ಪರಸ್ಪರ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ಮಾಡಿಕೊಳ್ಳುವ ಅಪರಾಧ ಚಟುವಟಿಕೆಯನ್ನು ಗುರುತಿಸಲಾಗಿದೆ. 'ಸ್ವಿಂಗರ್ಸ್' ಅನ್ನೋ ಹೆಸರಿನಲ್ಲಿ ಈ ದಂಧೆ ನಡೆಯುತ್ತಿತ್ತು. ಪರಿಚಯಸ್ಥ ಯುವತಿಯನ್ನ ಸ್ನೇಹಿತನ ಜೊತೆಗೆ ಸಹಕರಿಸುವಂತೆ ಬಲವಂತ ಮಾಡಲಾಗುತ್ತಿತ್ತು ಎನ್ನಲಾಗಿದೆ. ಒಪ್ಪದೇ ಇದ್ದಲ್ಲಿ ಸ್ನೇಹಿತರ ಜೊತೆಗೆ ಸೇರಿ ಅತ್ಯಾಚಾರಕ್ಕೂ ಪ್ರಯತ್ನಿಸಲಾಗಿತ್ತು ಎಂದು ನೊಂದ ಯುವತಿಯೊಬ್ಬಳು ಸಿಸಿಬಿಗೆ ದೂರು ನೀಡಿದ್ದಾಳೆ.

ಕರಾಳ ದಂಧೆ ನಡೆಸುತ್ತಿದ್ದ ಕಾಮುಕರನ್ನು ಅರೆಸ್ಟ್‌ ಮಾಡಲಾಗಿದ್ದು, ಬಂಧಿತರನ್ನು ಹರೀಶ್ ಹಾಗೂ ಹೇಮಂತ್‌ ಎಂದು ಗುರುತಿಸಲಾಗಿದೆ. ಯುವತಿಯನ್ನ ಪರಿಚಯ ಮಾಡಿಕೊಂಡಿದ್ದ ಹರೀಶ್, ಆಕೆಯನ್ನು ಲೈಂಗಿಕವಾಗಿ ಕೂಡ ಬಳಸಿಕೊಂಡಿದ್ದ, ಜೋಡಿ ಹಕ್ಕಿಯಂತೆ ಎಲ್ಲಾ ಕಡೆ ಸುತ್ತಾಡಿದ್ದಾರೆ. ಬರುಬರುತ್ತಾ ಹರೀಶ್ ತನ್ನ ಅಸಲು ಮುಖ ತೋರಿಸಲು ಆರಂಭ ಮಾಡಿದ್ದ. ಸ್ವಿಂಗರ್ಸ್‌ ಹೆಸರಿನಲ್ಲಿ ವಾಟ್ಸ್‌ಆಪ್‌ ಗ್ರೂಪ್‌ ಕೂಡ ಮಾಡಿಕೊಂಡಿದ್ದ.

Tap to resize

Latest Videos

undefined

ಬೆಂಗಳೂರು ಹೊರ ವಲಯದಲ್ಲಿ ಆಯೋಜನೆ ಆಗುತ್ತಿದ್ದ ಪಾರ್ಟಿಗೆ ಕಪಲ್ಸ್‌ಗಳ ಜೊತೆ ಆಸಾಮಿಗಳು ಆಗಮಿಸುತ್ತಿದ್ದರು. ಪಾರ್ಟಿಯಲ್ಲಿ ಪರಸ್ಪರ ಗರ್ಲ್‌ಫ್ರೆಂಡ್‌ಗಳ ಎಕ್ಸ್ ಚೇಂಜ್ ನಡೆಯುತ್ತಿತ್ತು. ಒಬ್ಬನ ಗರ್ಲ್ ಫ್ರೆಂಡ್ ಜೊತೆಗೆ ಮತ್ತೊಬ್ಬ ಬೆಡ್ ಶೇರ್ ಮಾಡಿಕೊಳ್ಳುತ್ತಿದ್ದರು.ಇದೇ ರೀತಿ ಯುವತಿಯನ್ನ ಸ್ವ್ಯಾಪಿಂಗ್‌ ಕೂಪಕ್ಕೆ ಹರೀಶ್‌ ದೂಡಿದ್ದ.

ಒಪ್ಪದಿದ್ದಾಗ ಸ್ನೇಹಿತರ ಜೊತೆಗೆ ಸೇರಿ ಅತ್ಯಾಚಾರವನ್ನೂ ಮಾಡಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಬೇಸತ್ತು ಯುವತಿ ಸಿಸಿಬಿಗೆ ದೂರು ನೀಡಿದ್ದಳು. ಸದ್ಯ ಇಬ್ಬರು ಆರೋಪಿಗಳನ್ನು ಸಿಸಿಬಿ ಬಂಧನ ಮಾಡಿದೆ. ಮೊಬೈಲ್‌ ಪರಿಶೀಲನೆ ವೇಳೆ ಭಯಾನಕ‌ ಸತ್ಯ ಬಯಲಾಗಿದೆ. ಮೊಬೈಲ್ ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿದೆ. ಏಕಾಂತದಲ್ಲಿದ್ದ ವಿಡಿಯೋ ಮಾಡಿಟ್ಟುಕೊಂಡಿದ್ದರು. ಅದೇ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಗೊತ್ತಾಗಿದೆ.

ವರದಕ್ಷಿಣೆ ಕಿರುಕುಳ: ಊಟ ಮಾಡಲು ಕುಳಿತಿದ್ದ ಪತ್ನಿಯ ಕತ್ತು ಹಿಸುಕಿ ಕೊಂದ ಪಾಪಿ!

ಆರೋಪಿಗಳು ಬೆಂಗಳೂರಿನ ಹೊರವಲಯದಲ್ಲಿ ಖಾಸಗಿ ಪಾರ್ಟಿಗಳನ್ನು ಆಯೋಜಿಸಲು ವಾಟ್ಸಾಪ್ ಗ್ರೂಪ್‌ಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳೆಂದು ಪ್ರಚಾರ ಮಾಡಲಾದ ಈ ಕೂಟಗಳು ಅವರ ಅಕ್ರಮ ಚಟುವಟಿಕೆಗಳ ತಾಣವಾಗಿತ್ತು ಎಂದಿದ್ದಾರೆ.

ಹೆಸರೇ ತಿಳಿಯದೆ ಲೈಂಗಿಕ ಕ್ರಿಯೆ, ಸಂಗಾತಿ ಎಕ್ಸ್‌ಚೇಂಜ್‌ ಈ ದೇಶದಲ್ಲಿ ಮಾಮೂಲು

 

click me!