ತುಮಕೂರಿನ ಜಯನಗರದ ನಿವಾಸಿ ಅರ್ಜುನ್-ರಂಜಿತಾ ದಂಪತಿ ಕಳೆದುಕೊಂಡಿದ್ದ ರುಸ್ತುಂ ಎಂಬ ಹೆಸರಿನ ಗಿಳಿ ಇಂದು ಪತ್ತೆಯಾಗಿದೆ. ಗಿಳಿ ಹುಡುಕಿ ಕೊಟ್ಟವರಿಗೆ ಸಿಕ್ತು 85,000ರೂ. ಬಹುಮಾನ!
ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು
ತುಮಕೂರು (ಜು.23} : ನನ್ನ ಮುದ್ದಿನ ಗಿಳಿ ಕಾಣೆಯಾಗಿದೆ ನೀವು ಕಂಡಿರಾ.. ನೀವು ಕಂಡಿರಾ... ಎಂದು ಬೀದಿ ಬೀದಿ ಕೆರೆ-ಕುಂಟೆ, ಗಿಡ- ಗಂಟೆಗಳನ್ನು ಹುಡುಕುತಿದ್ದರು. ಸಾರ್ವಜನಿಕ ಸ್ಥಳಗಳೆಲ್ಲ ಗಿಳಿ ಹುಡುಕಿ ಕೊಡುವಂತೆ ಬ್ಯಾನರ್ ಹಾಕಿದ್ದರು. ಇದು ರಾಜ್ಯಾದ್ಯಂತ ವೈರಲ್ ಆಗಿತ್ತು. ಪ್ರೀತಿಯ ಗಿಳಿಗಾಗಿ ಇಷ್ಟೆಲ್ಲ ಮಾಡ್ತಾರಾ? ಎಂದು ಜನ ಹುಬ್ಬೇರಿಸಿದ್ದರು. ಕೆಲವರು ಇನ್ನೇನು ಆ ಗಿಳಿ ಮರಳಿ ಬರುವುದಿಲ್ಲ. ಬೆಕ್ಕಿಗೋ ಇನ್ಯಾವುದೋ ಪ್ರಾಣಿ ಬಾಯಿಗೆ ಸಿಕ್ಕಿರಬಹುದು ಎಂದರು. ಇನ್ನು ಕೆಲವರು ಇಂಥ ಮುದ್ದಾದ ಗಿಳಿ ಸಿಕ್ಕರೆ ಯಾರಾದರೂ ಮರಳಿ ಕೊಡುತ್ತಾರೆಯೇ ಮನೆಯಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ ಹೀಗೆ ಗಿಳಿ ಹುಡುಕುವ ಪ್ರಯತ್ನ ಸಫಲವಾಗಲಿಕ್ಕಿಲ್ಲ ಎಂದರು. ಆದರೆ ಆ ದಂಪತಿ ಗಿಳಿ ಹುಡುಕಿಕೊಟ್ಟವರಿ 50 ಸಾವಿರ ರೂಪಾಯಿ ಬಹುಮಾನ ಘೋಷಿಸಿತು.
ಗಿಣಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ; ಗಿಣಿ ಹುಡುಕಲು ಹೊರಟ ಕುಟುಂಬ!
ಇದೀಗ ಆ ದಂಪತಿಯ ಪ್ರಯತ್ನ ಫಲಿಸಿದೆ. ಕೊನೆಗೂ ಅವರ ಮುದ್ದಿನ ಗಿಣಿ ಮರಳಿ ಗೂಡಿಗೆ ಬಂದಿದೆ. ತುಮಕೂರು ನಗರದ ಜಯನಗರದ ನಿವಾಸಿ ಅರ್ಜುನ್-ರಂಜಿತಾ ದಂಪತಿಯು ತಮ್ಮ ರುಸ್ತುಮಾ ಎಂಬ ಹೆಸರಿನ ಗಿಳಿಯನ್ನು ಕಳೆದುಕೊಂಡು ಹುಡುಕುತಿದ್ರು. ಆ ಗಿಳಿ ಇಂದು ಪತ್ತೆಯಾಗಿದೆ. ಬಂಡೇ ಪಾಳ್ಯದ ನಿವಾಸಿಗಳಾದ ಶ್ರೀನಿವಾಸ್ ಮತ್ತು ರಾಮಕೃಷ್ಣ ಗಿಳಿಯನ್ನು ರಕ್ಷಣೆ ಮಾಡಿ ಮನೆಯಲ್ಲಿ ಜತನದಿಂದ ಇರಿಸಿಕೊಂಡಿದ್ದರು. ಕಳೆದ ಶನಿವಾರ ಗಿಳಿ ಕಾಣೆಯಾಗಿದ್ದರೆ ಮಾರನೇ ದಿನ ಭಾನುವಾರ ಬಸವಾಪಟ್ಟಣ ಮರದ ಮೇಲೆ ಈ ಗಿಳಿ ಕಂಡಿತ್ತು ಅದನ್ನು ಶ್ರೀನಿವಾಸ್ ಮತ್ತು ರಾಮಕೃಷ್ಣ ಹಿಡಿದು ತಂದು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು. ಇಂದು ಕಾಣೆಯಾಗಿದ್ದ ಗಿಳಿಯ ಕರಪತ್ರ ನೋಡಿ ಮಾಲೀಕರಿಗೆ ಕಾಲ್ ಮಾಡಿ ಗಿಳಿಯನ್ನು ವಾಪಸ್ ತಲುಪಿಸಿದ್ದಾರೆ.
ಗಿಳಿ(Grey parrot) ಹುಡುಕಿ ಕೊಟ್ಡಿದ್ದರೆ ೫೦ ಸಾವಿರ ಬಹುಮಾನ(Prize) ಘೋಷಣೆ ಮಾಡಿದ್ರು. ಆಟೋದಲ್ಲಿ ಅನೌನ್ಸ(announce) ಕೂಡ ಮಾಡಿದ್ರು. ಆದರೂ ಗಿಳಿ ಸಿಕ್ಕಿರಲಿಲ್ಲ. ಹಾಗಾಗಿ ನೋವಿನಿಂದ ಜ್ಯೋತಿಷ್ಯದ ಮೊರೆ ಹೋದ್ರು. ಜ್ಯೋತಿಷಿಗಳು ಬಹುಮಾನದ ಮೊತ್ತವನ್ನು ೫೦ ರಿಂದ ೮೫ ಸಾವಿರಕ್ಕೇ ಏರಿಸಿದರೆ ೫-೬ ಗಂಟೆಯಲ್ಲಿ ನಿಮಗೆ ಗಿಳಿ ಸಿಗುತ್ತದೆ ಎಂದು ಭವಿಷ್ಯ ಹೇಳಿದ್ರು. ಅದರಂತೆ ಅರ್ಜುನ ದಂಪತಿ ೮೫ ಸಾವಿರಕ್ಕೆ ಏರಿಸಿ ಅನೌನ್ಸ್() ಮಾಡಿದರು. ಹೀಗೆ ಅನೌನ್ಸ್ ಮಾಡಿದ ಕೆಲವೇ ಗಂಟೆಯಲ್ಲಿ ಗಿಳಿ ಪತ್ತೆಯಾಗಿ ಪವಾಡ ಸೃಷ್ಟಿಸಿದೆ.
ಮಕ್ಕಳಂತೆ ಮಮ್ಮಿ ಟೀ ಕೊಡು ಅಂತ ಕೇಳೋ ಗಿಣಿ: ವಿಡಿಯೋ ವೈರಲ್
ತಮ್ಮ ಮನೆ ಮಗನನ್ನೇ ಕಳೆದುಕೊಂಡಷ್ಟು ದುಖದಲ್ಲಿದ್ದ ಅರ್ಜುನ(Arjun) ದಂಪತಿ ಮೊಗದಲ್ಲಿ ಈಗ ಸಂತಸ ಮೂಡಿದೆ. ಗಿಳಿಗೆ ದೃಷ್ಟಿ ತೆಗೆದು ಪುನಃ ಮನೆ ತುಂಬಿಸಿಕೊಂಡಿದ್ದಾರೆ. ಪ್ರೀತಿಯ ಗಿಳಿ ಹುಡುಕಾಡಲು ಒಂದೂವರೆ ಲಕ್ಷ ವ್ಯಯಿಸಿದ್ದಾರೆ. ಇಷ್ಟು ದಿನದ ಒಂಟಿಯಾಗಿದ್ದ ಹೆಣ್ಣು ಗಿಳಿ ರಿಸ್ತಾ(Rista) ಈಗ ಮತ್ತೇ ಜಂಟಿಯಾಗಿ ಡ್ಯುಯೆಟ್ ಹಾಡುತ್ತಿದೆ. ಏನೇ ಅಂದರೂ ಇವರ ಪಕ್ಷಿ ಪ್ರೀತಿಗೆ ತುಮಕೂರು ನಗರದ ಜನತೆ ಫಿದಾ ಆಗಿದ್ದಾರೆ.