ಮಾದಿಗ ಸಮುದಾಯದ ಜೊತೆ ಪರಂ ಉತ್ತಮ ಬಾಂಧವ್ಯ

By Kannadaprabha News  |  First Published Mar 20, 2023, 5:50 AM IST

ಮಾದಿಗ ಸಮುದಾಯದ ಗಂಗಮಾಳಮ್ಮನವರ ಎದೆಹಾಲು ಕುಡಿದು ಬೆಳೆದ ಡಾ.ಜಿ.ಪರಮೇಶ್ವರ್‌ರವರ ತಾತನಿಂದ ಹಿಡಿದು ಅವರ ಕುಟುಂಬವು ಸದಾ ಮಾದಿಗ ಸಮುದಾಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಕಳೆದ ಸಮಾರಂಭವೊಂದರಲ್ಲಿ ಜನಸಾಮಾನ್ಯರ ಆಡುಭಾಷೆಯನ್ನು ಪರಮೇಶ್ವರ್‌ರವರು ಆಡಿರುವುದನ್ನು ವಿರೋಧಿಗಳು ಉದ್ದೇಶ ಪೂರ್ವಕವಾಗಿ ತಪ್ಪು ಅರ್ಥ ಬರುವಂತೆ ಮಾತನಾಡುತ್ತಿದ್ದಾರೆ ಎಂದು ನಗರಪಾಲಿಕೆ ಮಾಜಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ವಾಲೇಚಂದ್ರಯ್ಯ ತಿಳಿಸಿದರು.


 ಕೊರಟಗೆರೆ :  ಮಾದಿಗ ಸಮುದಾಯದ ಗಂಗಮಾಳಮ್ಮನವರ ಎದೆಹಾಲು ಕುಡಿದು ಬೆಳೆದ ಡಾ.ಜಿ.ಪರಮೇಶ್ವರ್‌ರವರ ತಾತನಿಂದ ಹಿಡಿದು ಅವರ ಕುಟುಂಬವು ಸದಾ ಮಾದಿಗ ಸಮುದಾಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಕಳೆದ ಸಮಾರಂಭವೊಂದರಲ್ಲಿ ಜನಸಾಮಾನ್ಯರ ಆಡುಭಾಷೆಯನ್ನು ಪರಮೇಶ್ವರ್‌ರವರು ಆಡಿರುವುದನ್ನು ವಿರೋಧಿಗಳು ಉದ್ದೇಶ ಪೂರ್ವಕವಾಗಿ ತಪ್ಪು ಅರ್ಥ ಬರುವಂತೆ ಮಾತನಾಡುತ್ತಿದ್ದಾರೆ ಎಂದು ನಗರಪಾಲಿಕೆ ಮಾಜಿ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್‌ ಮುಖಂಡ ವಾಲೇಚಂದ್ರಯ್ಯ ತಿಳಿಸಿದರು.

ಪಟ್ಟಣದ ಕಾಂಗ್ರೆಸ್‌ ಪಕ್ಷದ ರಾಜೀವ್‌ ಭವನದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದಿಗ ಸಮುದಾಯದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Latest Videos

undefined

ಶಾಸಕರು ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಮಾದಿಗ ಸಮುದಾಯವನ್ನು ಸಮಾನ ರೀತಿಯಲ್ಲಿ ಕಾಣುತ್ತಿದ್ದು, ಎಂದೂ ತಾತ್ಸಾರ ಮನೋಭಾವದಿಂದ ನೋಡಿಲ್ಲ. ಕಾಲೋನಿಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಉನ್ನತ ಸ್ಥಾನ ಪಡೆಯುವ ದೃಷ್ಟಿಯಿಂದ ಸಮಾಜದ ಎಲ್ಲಾ ವ್ಯಕ್ತಿಗಳು ಮತ್ತೆ ಡಾ.ಜಿ.ಪರಮೇಶ್ವರ್‌ರವರನ್ನು ಆಯ್ಕೆ ಮಾಡಲು ಮುಂದೆ ಬಂದಿದ್ದು, ಕೆಲ ವಿರೋಧಿ ವ್ಯಕ್ತಿಗಳ ಮಾತಿಗೆ ಕಿವಿ ಕೊಡದೆ ಡಾ.ಜಿ.ಪರಮೇಶ್ವರ್‌ರನ್ನು ಬೆಂಬಲಿಸುತ್ತಿರುವುದಾಗಿ ತಿಳಿಸಿದರು.

ಮುಖಂಡ ಚಿಕ್ಕರಂಗಯ್ಯ ಮಾತನಾಡಿ, ಡಾ.ಜಿ.ಪರಮೇಶ್ವರ್‌ ಕಳೆದ 35 ವರ್ಷಗಳಿಂದ ಮಧುಗಿರಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿನಿಂದಲೂ ಮಾದಿಗ ಸಮುದಾಯವನ್ನು ಉತ್ತಮ ಬಾಂಧವ್ಯದೊಂದಿಗೆ ಅಣ್ಣ ತಮ್ಮಂದಿರಂತೆ ಕಾಣುತ್ತಾ ಬಂದಿದ್ದು ಎಂದೂ ಕೀಳಾಗಿ ಕಾಣುವುದು ಅಥವಾ ಮಾತನಾಡುವುದು ಮಾಡಿಲ್ಲ. ಕೇವಲ ರಾಜಕೀಯ ಲಾಭ ಪಡೆಯಲು ಹಾಗೂ ಸಮುದಾಯವನ್ನು ಒಡೆಯುವ ದೃಷ್ಟಿಯಿಂದ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಸುಳ್ಳು ಆರೋಪಕ್ಕೆ ಮಾನ್ಯತೆ ನೀಡದೆ ಹಿಂದಿನಂತೆ ಡಾ.ಜಿ.ಪರಮೇಶ್ವರ್‌ರನ್ನೇ ಬೆಂಬಲಿಸಿ ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

ಪ.ಪಂ.ಸದಸ್ಯ ನಂದೀಶ್‌ ಮಾತನಾಡಿ, ಕೊರಟಗೆರೆ ಕ್ಷೇತ್ರದಲ್ಲಿ ಎಡಗೈ ಮತ್ತು ಬಲಗೈ ಸಮುದಾಯಗಳು ಒಂದಾಗಿದ್ದು ಡಾ.ಜಿ.ಪರಮೇಶ್ವರ್‌ರನ್ನು ಬೆಂಬಲಿಸುತ್ತಿದ್ದು, ಅವರ 35 ವರ್ಷಗಳ ರಾಜಕೀಯ ಜೀವನದಲ್ಲಿ ಎಂದು ಮಾದಿಗ ಸಮುದಾಯವನ್ನು ಕೀಳಾಗಿ ಕಂಡಿಲ್ಲ. ಎಲ್ಲರನ್ನು ಅಣ್ಣ ತಮ್ಮರಂತೆ ಒಟ್ಟಿಗೆ ಕರೆದೊಯುತ್ತಿದ್ದಾರೆ. ಮುಂದೆಯೂ ಎರಡೂ ಸಮುದಾಯಗಳು ಅಣ್ಣ-ತಮ್ಮಂದಿರಂತೆ ಕ್ಷೇತ್ರದಲ್ಲಿ ಅವರನ್ನು ಬೆಂಬಲಿಸಿ ಅವರ ಗೆಲುವಿಗೆ ಶ್ರಮಿಸೋಣ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡರಾದ ಕಣಿವೇ ಹನುಮಂತರಾಯ, ಜಯರಾಂ, ಸುರೇಶ್‌, ನರಸಿಂಹಮೂರ್ತಿ, ತಾಪಂ ಮಾಜಿ ಉಪಾಧ್ಯಕ್ಷೆ ನರಸಮ್ಮ, ರಾಘವೇಂದ್ರ, ಗಂಗಯ್ಯ, ಪರಿಶಿಷ್ಟಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಚ್‌.ನಾಗರಾಜು, ದೊಡ್ಡಯ್ಯ, ಏರ್‌ಟೇಲ್‌ ಗೋಪಿ, ಮಲ್ಲೇಶಯ್ಯ, ನರಸಿಂಹಯ್ಯ, ಲಕ್ಷ್ಮಿನರಸಯ್ಯ, ಹನುಮಂತರಾಜು, ಓಬಳೇಶ್‌, ರಾಮು ಸೇರಿದಂತೆ ಇನ್ನಿತರರು ಹಾಜರಿದ್ದರು. 

ಕಾಂಗ್ರೆಸ್‌ನಿಂದ ಮಾತ್ರ ಎಲ್ಲರ ಏಳಿಗೆ

ಕಾಂಗ್ರೆಸ್‌ನಿಂದ ಮಾತ್ರ ಎಲ್ಲರ ಏಳಿಗೆ

ಹುಣಸಗಿ(ಮಾ.18):  ಸರ್ವಜನಾಂಗದ ಏಳಿಗೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ತಾಲೂಕಿನ ಕುಪ್ಪಿ ಗ್ರಾಮದಲ್ಲಿ ಬಿಜೆಪಿ ತೊರೆದ ಅನೇಕ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಮಾತನಾಡಿದ ಅವರು, ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಅಧಿಕಾರದಲ್ಲಿದ್ದಾಗ, ಇಲ್ಲದಾಗಲೂ ಸದಾ ರೈತ​ರಪರ ಇದ್ದು, ರೈತರ ಬೆಳೆಗಳಿಗೆ ನೀರು ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಹೀಗಾಗಿ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ನನಗೆ ಆರ್ಶೀವದಿಸಬೇಕು ಎಂದು ಮನವಿ ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ತಾಲೂಕಾಧ್ಯಕ್ಷ ಚಂದ್ರಶೇಖರ ದಂಡಿನ್‌ ಮಾತನಾಡಿ, ಬಿಜೆಪಿ ಪಕ್ಷದವರು ಹೇಳುವ ಸುಳ್ಳು ಭರವಸೆಗಳನ್ನು ನಂಬಬೇಡಿ. ಇಲ್ಲಿಯವರಿಗೂ ಅಭಿವೃದ್ಧಿ ಮಾಡದೆ, ಚುನಾವಣೆ ಹತ್ತಿರಲಿದ್ದಾಗ ಅಭಿವೃದ್ಧಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸರಳ ಸಜ್ಜನಿಕೆಯ ರಾಜಾ ವೆಂಕಟಪ್ಪನಾಯಕ ಅವರನ್ನು ಬೆಂಬಲಿಸಬೇಕು ಎಂದರು.

ಯಾದಗಿರಿ: ಬಿಜೆಪಿಯ ಮಾಲಕರೆಡ್ಡಿ ಪುತ್ರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುತ್ತಾ?

ಸುರಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿಮಾತನಾಡಿ, ಕುರುಬ ಜನಾಂಗದ ಮೂವರನ್ನು ಜಿಪಂ ಸದಸ್ಯರನ್ನಾಗಿ ಮಾಡಿದ ಕೀರ್ತಿ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರಿಗೆ ಸಲ್ಲುತ್ತದೆ. ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ನೀರಿಕ್ಷಿಸಲು ಸಾಧ್ಯವಿಲ್ಲ. ಅದು ಏನಿದ್ದರೂ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. 2023ಕ್ಕೆ ಬಿಜೆಪಿ ಸೋಲು ಖಚಿತ ಎಂದರು.

click me!