ಹೈನುಗಾರರ ರಕ್ಷಣೆಗೆ ಒಕ್ಕೂಟ ಬದ್ಧ: ಮಹಲಿಂಗಯ್ಯ

By Kannadaprabha News  |  First Published Mar 20, 2023, 5:33 AM IST

ತುಮಕೂರು ಜಿಲ್ಲಾ ಹಾಲು ಒಕ್ಕೂಟವು ಸುಸ್ಥಿತಿಯಲ್ಲಿದೆ. ಅಲ್ಲದೇ ಅಂತರರಾಜ್ಯದಲ್ಲೂ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹೇಳಿದರು.


 ತುರುವೇಕೆರೆ :  ತುಮಕೂರು ಜಿಲ್ಲಾ ಹಾಲು ಒಕ್ಕೂಟವು ಸುಸ್ಥಿತಿಯಲ್ಲಿದೆ. ಅಲ್ಲದೇ ಅಂತರರಾಜ್ಯದಲ್ಲೂ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಹೇಳಿದರು.

ತಾಲೂಕಿನ ತಾಳಕೆರೆ ಗ್ರಾಮದಲ್ಲಿ ಮಹಿಳಾ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ಷೀರಭಾಗ್ಯ ಯೋಜನೆಯಡಿ ನೆರೆಯ ಆಂಧ್ರಪ್ರದೇಶಕ್ಕೆ ವಿಜಯವಜ್ರ ಹೆಸರಿನಲ್ಲಿ ತುಮುಲ್‌ ಹಾಲು ಸರಬರಾಜು ಮಾಡುತ್ತಿದೆ. ರಾಜ್ಯದ 5 ಜಿಲ್ಲೆಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ಹಾಲಿನ ಪೌಡರ್‌ ಸರಬರಾಜು ಮಾಡಲಾಗುತ್ತಿದೆ. ಬಾಂಬೆ ಮಾರುಕಟ್ಟೆಯಲ್ಲಿ ನಿತ್ಯ 2 ಲಕ್ಷಕ್ಕೂ ಅಧಿಕ ಲೀಟರ್‌ ಹಾಲು ಸರಬರಾಜು ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗಿರುವ ತುಮುಲ್‌ ರೈತರ ಹಾಲಿಗೆ ಸ್ಪರ್ಧಾತ್ಮಕ ದರ ನೀಡುವ ಮೂಲಕ ರೈತ ಸ್ನೇಹಿಯಾಗಿದೆ ಎಂದರು.

Latest Videos

undefined

ಹಾಲು ಉತ್ಪಾದಕರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಚಿತ ವಿದ್ಯಾರ್ಥಿ ನಿಲಯವನ್ನು ತುಮುಲ್‌ ಈಗಾಗಲೇ ಆರಂಭಿಸಿದೆ. ತುಮುಲ್‌ ಆವರಣದಲ್ಲಿ ಮುಂದಿನ ದಿನಗಳಲ್ಲಿ ಸುಮಾರು 20 ಕೋಟಿ ರು. ವೆಚ್ಚದಲ್ಲಿ ವಿದ್ಯಾರ್ಥಿನಿಲಯ ತಲೆ ಎತ್ತಲಿದೆ. ಅಪೆಕ್ಸ್‌ ಹಾಗೂ ಡಿಸಿಸಿ ಬ್ಯಾಂಕ್‌ಗಳಲ್ಲಿ 105 ಕೋಟಿ ರು. ಠೇವಣಿ ಇರಿಸುವ ಮೂಲಕ ತುಮುಲ್‌ ಸದೃಢವಾಗಿದೆ. ರೈತ ಕಲ್ಯಾಣ ಟ್ರಸ್ಟ್‌ ಸ್ಥಾಪಿಸಿ ತುಮುಲ್‌ ವ್ಯಾಪ್ತಿಯ 80 ಸಾವಿರ ಹಾಲು ಉತ್ಪಾದಕರ ಹಿತ ಕಾಯಲು ಪೂರಕ ಕಾರ್ಯಕ್ರಮ ರೂಪಿಸಿದೆ ಎಂದರು.

ಶಾಸಕ ಮಸಾಲಾ ಜಯರಾಮ್‌ ಮಾತನಾಡಿ, ಹೈನುಗಾರಿಕೆ ಗ್ರಾಮೀಣ ರೈತಾಪಿಗಳ ಆರ್ಥಿಕ ಸದೃಢತೆಗೆ ಸಹಕಾರಿಯಾಗಿದೆ. ಸರ್ಕಾರ ಹಾಗೂ ತುಮುಲ್‌ ವತಿಯಿಂದ ನೀಡಲಾಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಸು ಮರಣ ಪರಿಹಾರದ ಚೆಕ್‌ನ್ನು ಹೈನುಗಾರರಿಗೆ ವಿತರಿಸಲಾಯಿತು.

ತುಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಪಿ.ಸುರೇಶ್‌, ಉಪ ವ್ಯವಸ್ಥಾಪಕ ಚಂದ್ರಶೇಖರ್‌ ಕೇದನೂರಿ, ಸಂಘದ ಅಧ್ಯಕ್ಷರಾದ ಸುಮಿತ್ರಾ ವಸಂತಕುಮಾರ್‌, ಕಾರ್ಯದರ್ಶಿ ಅನಸೂಯಸುರೇಶ್‌, ಉಪನ್ಯಾಸಕ ಮಹಾದೇವಯ್ಯ, ವಿಸ್ತರಣಾಧಿಕಾರಿಗಳಾದ ಮಂಜುನಾಥ್‌, ಕಿರಣ್‌, ದಿವಾಕರ್‌ ಮತ್ತಿತರಿದ್ದರು.

ಲಾಭದತ್ತ ಹಾಲು ಉತ್ಪಾದಕ ಸಂಘಗಳು

ರಾವಂದೂರು (ಡಿ.14): ತಾಲೂಕಿನಾದ್ಯಂತ ಹಾಲು ಉತ್ಪಾದಕರ ಸಹಕಾರ ಸಂಘಗಳು ಲಾಭದತ್ತ ಸಾಗುತ್ತಿದ್ದು, ಯಾವುದೇ ಪಕ್ಷ ಬೇಧವಿಲ್ಲದೇ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸರ್ಕಾರದಿಂದ ಬರುವ ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಿದ್ದೇನೆ ಎಂದು ಮೈಮುಲ… ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ  ಉತ್ಪಾದಕರ ಸಹಕಾರ ಸಂಘದ ನೂತನ ಸಭಾಂಗಣವನ್ನು ಶಾಸಕ ಕೆ. ಮಹದೇವ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಸುಮಾರ 195 ಸಂಘಗಳಿದ್ದು, ಯಾವುದೇ ರೀತಿಯ ಸಮಸ್ಯೆಗಳಿಲ್ಲದೇ ಲಾಭದಲ್ಲಿ ನಡೆಯುತ್ತಿವೆ. ಗುಣಮಟ್ಟದ ಹಾಲನ್ನು (Milk)  ಉತ್ಪಾದಕರು ಸಂಘಕ್ಕೆ ಹಾಕುವುದರ ಮೂಲಕ ಜಿಲ್ಲೆಯಲ್ಲಿಯೇ ಹೆಚ್ಚು ಹಾಲನ್ನು ಉತ್ಪಾದಿಸುವ ತಾಲೂಕಾಗಿ ಹಾಗೂ ತಾಲೂಕಿನಲ್ಲಿ ಹೆಚ್ಚು ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘದ ಏಳಿಗೆಗೆ ಪ್ರಯತ್ನಿಸಲಾಗುತ್ತಿದೆ. ಸಹಕಾರ ಸಂಘಗಳು ಹೆಚ್ಚು ಲಾಭಗಳಿಸ ಬೇಕಾದರೇ ಕಾರ್ಯದರ್ಶಿಗಳು ಸಂಘದ ಬಗೆ ಹೆಚ್ಚು ಕಾಳಜಿ ಹೊಂದಿರಬೇಕು. ಆಗ ಮಾತ್ರ ಸಂಘಗಳು ಹೆಚ್ಚು ಲಾಭಗಳಿಸಲು ಸಾಧ್ಯವಾಗುತ್ತದೆ ಎಂದರು.

ಶಾಸಕ (MLA)  ಕೆ. ಮಹದೇವ್‌ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಕುಟುಂಬದ ನಿರ್ವಹಣೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕಾರಿಯಾಗಿದ್ದು, ಮನೆಯ ಯಜಮಾನನನ್ನು ಅವಲಂಭಿಸದೆ ಕುಟುಂಬ ನಿರ್ವಹಣೆ ಮಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳು ನೆರವಾಗುತ್ತದೆ ಹಾಗೂ ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಿದ್ದು, ತಾಲೂಕಿನಲ್ಲಿ ಹೈನುಗಾರಿಕೆಗೆ ಅತೀ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಾರ್ಯಾಧ್ಯಕ್ಷ ಆರ್‌.ಎಲ… ಮಣಿ, ಮೈಮುಲ… ನಿರ್ದೇಶಕ ಎಚ್‌.ಡಿ. ರಾಜೇಂದ್ರ, ಪ್ರಭಾರ ವ್ಯವಸ್ಥಾಪಕ ಬಿ.ಎಸ್‌. ನಿಶ್ಚಿತ್‌, ವಿಸ್ತಾರಣಾಧಿಕಾರಿ ಕೆ.ಆರ್‌. ಜಯಂತ್‌ಕುಮಾರ್‌, ಇಒ ಎಚ್‌.ಪಿ. ಶಿವಮೂರ್ತಿ, ಅಧ್ಯಕ್ಷ ಎಚ್‌.ಡಿ. ರಾಮಚಂದ್ರ, ಉಪಾಧ್ಯಕ್ಷ ರೇಣುಕಾಚಾರ್ಯ, ನಿರ್ದೇಶಕರಾದ ವೆಂಕಟೇಶ್‌, ಗೋವಿಂದರಾಜು, ಪ್ರಭಾಕರ್‌, ನಾರಾಯಣ…, ಕೃಷ್ಣಶೆಟ್ಟಿ, ಬಸವಶೆಟ್ಟಿ, ಭಾಗ್ಯ, ಹಾಲು ಪರೀಕ್ಷಕ ಎಚ್‌.ಪಿ. ಕುಮಾರ್‌, ಜಗನ್ನಾಥ್‌, ಗ್ರಾಪಂ ಸದ್ಸಯ ದೀಪು, ರಾಮಚಂದ್ರ ಇದ್ದರು.

click me!