ಸಂವಿಧಾನದ ಮೌಲ್ಯ ಕಾಪಾಡಲು ಜನರ ಹೋರಾಟ ಅಗತ್ಯ ಎಂದು ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್ ತಿಳಿಸಿದರು.
ತುಮಕೂರು : ಸಂವಿಧಾನದ ಮೌಲ್ಯ ಕಾಪಾಡಲು ಜನರ ಹೋರಾಟ ಅಗತ್ಯ ಎಂದು ಸ್ವರಾಜ್ ಅಭಿಯಾನದ ಯೋಗೇಂದ್ರ ಯಾದವ್ ತಿಳಿಸಿದರು.
ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಸ್ಲಂ ಜನರ 12 ಪ್ರಮುಖ ಅಂಶಗಳನ್ನೊಳಗೊಂಡ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸ್ಲಂ ಜನಾಂದೋಲನ ಕರ್ನಾಟಕ ಎದ್ದೇಳು ಕರ್ನಾಟಕದಿಂದ ಎಲ್ಲಾ ಸಾಮಾಜಿಕ ಮತ್ತು ನಾಗರಿಕ ಸಂಘಟನೆಗಳನ್ನು ಒಗ್ಗೂಡಿಸಿ ದ್ವೇಷರಾಜಕಾರಣ ಸೋಲಿಸಿ, ಸಂವಿಧಾನವನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಬೆಲೆ ಏರಿಕೆ ಮತ್ತು ವನ್ನು ಎರಡನೇ ದರ್ಜೆ ರಾಜ್ಯವನ್ನಾಗಿಸುವ ಅಭಿಯಾನದೊಂದಿಗೆ ಸ್ಲಂ ಜನಾಂದೋಲನ ಕರ್ನಾಟಕ ಜೊತೆಯಾಗಿ ಈ ವಿಧಾನಸಭೆ ಚುನಾವಣೆಯಲ್ಲಿ ಸಂವಿಧಾನವನ್ನು ಉಳಿಸುವ ಹಾಗೂ ಸ್ಲಂ ಜನರ ಘನತೆಗಾಗಿ ಕೈಗೊಂಡಿರುವ ಸ್ಲಂಜನರ ಪ್ರಣಾಳಿಕೆ ಅಭಿಯಾನ ಕರ್ನಾಟಕದ ಸ್ಲಂ ನಿವಾಸಿಗಳಲ್ಲಿ ಸಂವಿಧಾನ ರಕ್ಷಿಸುವ ಜಾಗೃತಿಯನ್ನು ನೀಡುತ್ತಿರುವುದು ಒಂದು ಸಂಚಲನವಾಗಿದೆ ಎಂದರು.
ಮೌಲ್ಯ ಕಾಪಾಡಲು ಎರಡನೇ ಗಣತಂತ್ರಕ್ಕಾಗಿ ದೇಶ, ಪ್ರಜ್ಞಾವಂತ ನಾಗರಿಕರು, ಸಾಮಾನ್ಯ ಜನರು ಸೇರಿದಂತೆ ಸ್ಲಂಜನರು ಬಿಜೆಪಿಯನ್ನು ಸೋಲಿಸಬೇಕಿದೆ. ಏಕೆಂದರೆ ಪ್ರಜಾಪ್ರಭುತ್ವ ಮತ್ತು ನಾಗರಿಕ ಹಕ್ಕುಗಳು ಪ್ರಶ್ನಾರ್ಥಕವಾಗಿವೆ, ಸನಾತನ ಮನುಧರ್ಮವನ್ನು ಜಾರಿಗೊಳಿಸಲು ಬಿಜೆಪಿ 1970ರಲ್ಲಿ ಜರ್ಮನಿಯಲ್ಲಿ ನಿರ್ಮಾಣವಾದ ನಾಜಿ ಸಿದ್ಧಾಂತದ ಮೇಲೆ ಭಾರತದಲ್ಲಿ ಹೊರಟಿದೆ ಎಂದರು.
ಸಂವಿಧಾನ ಉಳಿಸಲು ಬಿಜೆಪಿಯನ್ನು ದೇಶದಲ್ಲಿ ಸೋಲಿಸಬೇಕು, ಇದು ನನ್ನ ಮನವಿ ಎಂದ ಅವರು ಭಾರತ್ ಜೋಡೊ ಕಾಂಗ್ರೆಸ್‌ನ ಯಾತ್ರೆಯಾದರು ಹಲವಾರು ನಾಗರಿಕ ಸಂಘಟನೆಗಳು ಭಾಗವಹಿಸಿ ಮುಂದಿನ 1 ವರ್ಷದಲ್ಲಿ ಬೀದಿಗಿಳಿದು ಜನರಿಗೆ ಜಾಗೃತಿ ನೀಡಿ ಮೈಕ್ರೋ ಸಿಗ್ಮೆಂಟ್‌ಗಳ ಮೂಲಕ ಮತಗಳನ್ನು ಪರಿವರ್ತಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದು ಪ್ರಮುಖವಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಇತರೆ ಪಕ್ಷದವರೆಂದು ಗುರುತಿಸಿಕೊಂಡಿರುವ ಜನರನ್ನು ಬಿಟ್ಟು ತಟಸ್ಥತೆಯಿಂದಿರುವ ನಿರ್ಧಾರಿತ ಮತದಾರರನ್ನು ತಲುಪಿ ಬಿಜೆಪಿ ವಿರುದ್ಧ ಮತಚಲಾಯಿಸುವಂತೆ ಮಾಡಲಾಗುತ್ತದೆ ಎಂದರು.
ಚಿಂತಕ ಪ್ರೊ. ರವಿವರ್ಮಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಆಡಳಿತದಿಂದ ನಿರ್ಮಾಣವಾಗಿರುವ ದ್ವೇಷ, ಅಸೂಯೇ, ಜಾತಿ,ಧರ್ಮ, ಅಸಮಾನತೆಯೂ ಬಡವ ಮತ್ತು ಶ್ರೀಮಂತರ ಅಂತರವನ್ನು ದ್ವಿಗುಣಗೊಳಿಸುತ್ತಿದೆ. ಬಸವಣ್ಣನವರ ನೆಲದಲ್ಲಿ ಮತ್ತು ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕವನ್ನು ಬಿಜೆಪಿ ಪ್ರಯೋಗ ಶಾಲೆ ಮಾಡಲು ಹೊರಟಿದೆ. ಇದಕ್ಕಾಗಿ 700 ಜನÜ ಪ್ರಚಾರಕರನ್ನು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಮತ ಸೆಳೆಯಲು ನೇಮಕ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜೈಕಿಸಾನ್ ಆಂದೋಲನದ ದೀಪಕ್ ಲಾಂಬಾ, ಡಾ.ಎಚ್.ವಿ. ರಂಗಸ್ವಾಮಿ, ರೈತ ಸಂಘದ ನಟರಾಜಪ್ಪ, ಸ್ಲಂಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮತ್ತು ತುಮಕೂರು ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ಶಂಕ್ರಯ್ಯ, ಅರುಣ್, ಶಾಬುದ್ದೀನ್, ಕೃಷ್ಣಮೂರ್ತಿ, ಅರವಿಂದ್, ಮುಬಾರಕ್, ಮುಂತಾದವರು ಹಾಜರಿದ್ದರು.
ನಾವು ಇಲ್ಲಿನ ನೆಲದಲ್ಲಿರುವ ಸಿದ್ಧಾಂತದ ಮೇಲೆ ದೇಶ ಕಟ್ಟಬೇಕು, ಅದುವೇ ಸಂವಿಧಾನ. ಹಾಗಾಗಿ ಕರ್ನಾಟಕದ ನೆಲ ರೈತ, ದಲಿತ, ಕಾರ್ಮಿಕರ ಹೋರಾಟಕ್ಕೆ ಹೆಸರು ವಾಸಿಯಾಗಿದ್ದು ಜನಚಳವಳಿಯ ಹೊಸ ಶಕ್ತಿಯನ್ನು ರೂಪಿಸುವಲ್ಲಿ ಪ್ರೇರಕವಾಗಿದೆ. ಇತ್ತೀಚೆಗೆ ಕರ್ನಾಟಕದ ಪರಿಸ್ಥಿತಿ ಗಂಭೀರವಾಗಿದ್ದು, ಧರ್ಮ ರಾಜಕಾರಣ, ದ್ವೇಷ, ಕೋಮು ಸಂಘರ್ಷಗಳ ಮೂಲಕ ಜಾತಿ ಜಾತಿಗಳನ್ನು ಎತ್ತಿಕಟ್ಟಲಾಗುತ್ತಿದೆ. ದಕ್ಷಿಣ ಭಾರತಕ್ಕೆ ಕರ್ನಾಟಕದ ಮೂಲಕ ಬಿಜೆಪಿ ಪ್ರವೇಶ ಮಾಡಿದ್ದು ಇಲ್ಲಿಂದಲೇ ಬಿಜೆಪಿ ತೊಲಗಿಸಿದರೆ 2024ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬದಲಾವಣೆ ಕಾಣಲು ಸಾಧ್ಯ.
ಯೋಗೇಂದ್ರ ಯಾದವ್ ಸ್ವರಾಜ್ ಅಭಿಯಾನ
ಸ್ಲಂ ಜನಾಂದೋಲನದ ಪ್ರಣಾಳಿಕೆಯನ್ನು ಸಾಮಾಜಿಕ ನ್ಯಾಯದ ಪರವಾಗಿರುವ ಪಕ್ಷಗಳು ಆದ್ಯತೆ ಮೇರೆಗೆ ಸ್ವೀಕರಿಸಿ ಕೊಳಗೇರಿ ಜನರ ಬಹುದಿನದ ಬೇಡಿಕೆಯಾದ ವಸತಿ ಹಕ್ಕು ಗ್ಯಾರಂಟಿಯನ್ನು ಖಾತ್ರಿಗೊಳಿಸಿ, ಸ್ಲಂಜನರ ಅಭಿವೃದ್ಧಿ ನಿಗಮ, ಸ್ಲಂ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮತ್ತು ನಗರ ಉದ್ಯೋಗಖಾತ್ರಿ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು 2023ರ ವಿಧಾನ ಸಭಾಚುನಾವಣೆಯಲ್ಲಿ ಆದ್ಯತೆ ನೀಡಬೇಕು.
ಪ್ರೊ. ರವಿವರ್ಮಕುಮಾರ್ ಚಿಂತಕ