13ರಲ್ಲಿ ಇಬ್ಬರಿಗೆ ಬೇಕು ಸಚಿವ ಸ್ಥಾನ : ಸಿಎಂಗೆ ಬೇಡಿಕೆ

Kannadaprabha News   | Asianet News
Published : Oct 18, 2020, 07:22 AM IST
13ರಲ್ಲಿ ಇಬ್ಬರಿಗೆ ಬೇಕು ಸಚಿವ ಸ್ಥಾನ : ಸಿಎಂಗೆ ಬೇಡಿಕೆ

ಸಾರಾಂಶ

13 ಮಂದಿ ಶಾಸಕರಲ್ಲಿ ಇಬ್ಬರಿಗಾದರೂ ಸಚಿವ ಸ್ಥಾನ ನೀಡಲೇಬೇಕು ಎನ್ನುವ ಆಗ್ರಹ ಕೇಳಿದ್ದು, ಮೀಸಲಾತಿಗಾಗಿ ಪಟ್ಟು ಹಿಡಿಯಲಾಗಿದೆ. 

ವಿಜಯಪುರ (ಅ.18): ಪಂಚಮಸಾಲಿ ಸಮಾಜಕ್ಕೆ ಮಂತ್ರಿ ಸ್ಥಾನಕ್ಕಿಂತ ಪ್ರವರ್ಗ 2ಎಗೆ ಸೇರ್ಪಡೆ ಮಾಡುವ ಮೀಸಲಾತಿ ಮುಖ್ಯ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀ ಹೇಳಿದರು.

ನಗರದಲ್ಲಿ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಪಂಚಮಸಾಲಿ ಸಮಾಜದ 13 ಜನ ಶಾಸಕರಿದ್ದಾರೆ. ಅವರಲ್ಲಿ ಮೂವರಿಗೆ ಕನಿಷ್ಠ ಪಕ್ಷ ಇಬ್ಬರಿಗಾದರೂ ಸಚಿವ ಸ್ಥಾನ ನೀಡಿ ಎಂದು ಕೇಳಿಕೊಂಡಿದ್ದೆವು. 

ರಾಜಕೀಯ ಮನ್ವಂತರದತ್ತ ಪಂಚಮಸಾಲಿ ಸಮುದಾಯ ..

ಪಂಚಮಸಾಲಿ ಸಮಾಜದವರಿಗೆ ಸಚಿವ ಸ್ಥಾನ ನೀಡಲು ಅದೇಕೋ ಮುಖ್ಯಮಂತ್ರಿಗಳು ನಿಧಾನಗತಿ ಅನುಸರಿಸುತ್ತಿದ್ದಾರೆ. ಅನೇಕ ಬಾರಿ ಈ ಕುರಿತು ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ವಿನಂತಿಸಿದ್ದೇವೆ. ಹೀಗಾಗಿ ಮಂತ್ರಿ ಸ್ಥಾನಕ್ಕಿಂತಲೂ ಪಂಚಮಸಾಲಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಪ್ರವರ್ಗ 2ಎಗೆ ಸೇರ್ಪಡೆ ಮಾಡುವ ಹೋರಾಟವೇ ನಮಗೆ ಪ್ರಮುಖ ಆದ್ಯತೆಯಾಗಿದೆ ಎಂದರು.

PREV
click me!

Recommended Stories

Karnataka News Live: ಮುಂದುವರಿದ ಸಿಎಂ ಕುರ್ಚಿ ಕದನ ಜನವರಿ 6ಕ್ಕೆ ಡಿಕೆಶಿ ಸಿಎಂ: ಮತ್ತೆ ಆಪ್ತ ಶಾಸಕರ ಬಾಂಬ್
ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!