ಬೆಂಗಳೂರಲ್ಲಿ 14 ಮಂದಿ ಕೊರೋನಾಗೆ ಬಲಿ: ಈ ತಿಂಗಳಿನ ಅತೀ ಕನಿಷ್ಠ ಸಾವು

Kannadaprabha News   | Asianet News
Published : Oct 18, 2020, 07:19 AM ISTUpdated : Oct 18, 2020, 09:54 AM IST
ಬೆಂಗಳೂರಲ್ಲಿ 14 ಮಂದಿ ಕೊರೋನಾಗೆ ಬಲಿ: ಈ ತಿಂಗಳಿನ ಅತೀ ಕನಿಷ್ಠ ಸಾವು

ಸಾರಾಂಶ

ಒಟ್ಟು ಸಾವಿನ ಸಂಖ್ಯೆ 3500ಕ್ಕೆ ಏರಿಕೆ| 64 ಸಾವಿರ ಸಕ್ರಿಯ ಕೇಸ್‌| 2361 ಮಂದಿಗೆ ದಂಡ| ಸಾಮಾಜಿಕ ಅಂತರ ಹಾಗೂ ಮಾಸ್ಕ್‌ ಧರಿಸುವ ನಿಯಮ ಉಲ್ಲಂಘಿಸಿದ 2,361 ಮಂದಿಗೆ 5,90,250 ದಂಡ|   

ಬೆಂಗಳೂರು(ಅ.18): ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 14 ಮಂದಿ ಮೃತಪಟ್ಟ ವರದಿಯಾಗಿದ್ದು, ಇದು ಅಕ್ಟೋಬರ್‌ ತಿಂಗಳಲ್ಲಿ ಒಂದು ದಿನದಲ್ಲಿ ದಾಖಲಾದ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ. ನಗರದಲ್ಲಿ ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3,500 ಏರಿಕೆಯಾಗಿದೆ.

"

ಶನಿವಾರ 3,371 ಹೊಸ ಕೊರೋನಾ ಸೋಂಕಿತರು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,04,005ಕ್ಕೆ ಏರಿಕೆಯಾಗಿದೆ. ಇದೇ ವೇಳೆ 4251 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 2,35,734ಕ್ಕೆ ಏರಿಕೆಯಾಗಿದೆ. ಸದ್ಯ 64,770 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 361 ಮಂದಿ ನಗರದ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನೆರೆ ಪ್ರವಾಹದೊಂದಿಗೆ ಕೊರೋನಾ ಅಬ್ಬರ, ಮತ್ತೆ 7 ಸಾವಿರ!

2361 ಮಂದಿಗೆ ದಂಡ:

ನಗರದಲ್ಲಿ ಶನಿವಾರ ಸಾಮಾಜಿಕ ಅಂತರ ಹಾಗೂ ಮಾಸ್ಕ್‌ ಧರಿಸುವ ನಿಯಮ ಉಲ್ಲಂಘಿಸಿದ 2,361 ಮಂದಿಗೆ ಬಿಬಿಎಂಪಿ ಮಾರ್ಷಲ್‌ಗಳು 5,90,250 ದಂಡ ವಿಧಿಸಿದ್ದಾರೆ. ಈ ಪೈಕಿ ಮಾಸ್ಕ್‌ ಧರಿಸದ 2185 ಮಂದಿಯಿಂದ 5,46,250, ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ 176 ಮಂದಿಯಿಂದ 44 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

PREV
click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ