8 ಬಾರಿ ಅಂಬಾರಿ ಹೊತ್ತು ದೇವರ ಆನೆ ಎಂದು ಖ್ಯಾತಿಯಾಗಿದ್ದ ಕ್ಯಾಪ್ಟನ್ ಅರ್ಜುನ ಅಕಾಲಿಕ ಸಾವಗೀಡಾದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ದಿಢೀರ್ ಸ್ಥಗಿತಗೊಂಡಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಡಿ.06): 8 ಬಾರಿ ಅಂಬಾರಿ ಹೊತ್ತು ದೇವರ ಆನೆ ಎಂದು ಖ್ಯಾತಿಯಾಗಿದ್ದ ಕ್ಯಾಪ್ಟನ್ ಅರ್ಜುನ ಅಕಾಲಿಕ ಸಾವಗೀಡಾದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ದಿಢೀರ್ ಸ್ಥಗಿತಗೊಂಡಿದೆ. ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ನಾಡಿನ ಜನರ ಗಮನ ಸೆಳೆದಿದ್ದ ಅರ್ಜುನ ಆನೆ ಸಾವಿನಿಂದ ತೀವ್ರ ದುಃಖದಲ್ಲಿರುವ ಜಿಲ್ಲೆಯ ಮಾವುತರು ಹಾಗೂ ಕಾವಡಿಗರು ಕರ್ತವ್ಯಕ್ಕೆ ಗೈರಾಗಿರುವ ಹಿನ್ನೆಲೆಯಲ್ಲಿ ಮೂಡಿಗೆರೆಯ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತವಾಗಿದೆ.
undefined
ಕಾಡಾನೆ ಕಾರ್ಯಾಚರಣೆ ಸ್ಥಗಿತ: ಕಾಡಾನೆ ಸೆರೆ ಕಾರ್ಯಚರಣೆ ವೇಳೆ ಅರ್ಜುನ ಸಾವಿನಿಂದ ಆತಂಕದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಕೆಲಸಕ್ಕೆ ತೆರಳದೆ ತೀವ್ರ ಬೇಸರದಲ್ಲಿದ್ದಾರೆ. ಇದರಿಂದಾಗಿ ಮೂಡಿಗೆರೆ ತಾಲೂಕಿನ ಬೈರಾಪುರ ಬಳಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಚರಣೆ ದಿಢೀರ್ ನಿಂತು ಹೋಗಿದೆ. ಕಾಡಾನೆ ಸೆರೆ ಕಾರ್ಯಚರಣೆಗಾಗಿ ಶಿಬಿರದಿಂದ ಬಂದಿದ್ದ 6 ಸಾಕಾನೆಗಳು ಸಹಾ ಮಾವುತರಿಲ್ಲದೆ ಇಂದು ತಮ್ಮ ಕರ್ತವ್ಯವನ್ನು ಮಾಡದಂತಾಗಿದೆ. 6 ಸಾಕಾನೆಗಳ ಬಳಸಿ ಕಾಡಾನೆ ಸೆರೆಗೆ ಚಿಕ್ಕಮಗಳೂರು ಅರಣ್ಯ ಇಲಾಖೆ ಮುಂದಾಗಿತ್ತು ಇದರಲ್ಲಿ ದಸರಾ ಗಜಪಡೆಯ ಮಹೇಂದ್ರ, ಗಜೇಂದ್ರ, ನೇತೃತ್ವ ವಹಿಸಿದ್ದವು.
Kodagu: 40 ವರ್ಷದ ಹಿಂದೆ ಜಲಾಶಯದೊಳಗೆ ಮುಳುಗಿದ್ದ ಶಿವನ ದೇವಾಲಯ ಪತ್ತೆ!
ನರಹಂತಕ ಕಾಡಾನೆ ಸೆರೆಗಾಗಿ ನಡೆಯುತ್ತಿದ್ದ ಕಾರ್ಯಚರಣೆ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ 2 ತಿಂಗಳ ಅವಧಿಯಲ್ಲಿ ಕಾಡಾನೆ ಮೂವರನ್ನ ಬಲಿ ಪಡೆದಿತ್ತು. ಸ್ಥಳಿಯರ ತೀವ್ರ ಆಕ್ರೋಶ ಹಿನ್ನೆಲೆ ಸರ್ಕಾರ ಮೂರು ಕಾಡಾನೆಗಳನ್ನ ಸೆರೆ ಹಿಡಿಯಲು ಅನುಮತಿ ನೀಡಿತ್ತು. ಸರ್ಕಾರದ ಸೂಚನೆ ಹಿನ್ನೆಲೆ ಸಾಕಾನೆ ಮಹೇಂದ್ರ ಹಾಗೂ ಗಜೇಂದ್ರ ನೇತೃತ್ವದ ಆರು ಆನೆಗಳ ತಂಡ ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಆದರೆ, ಕ್ಯಾಪ್ಟರ್ ಅರ್ಜುನ್ ಅಕಾಲಿಕ ಸಾವಿಗೆ ತುತ್ತಾದ ಹಿನ್ನೆಲೆ ಕವಾಡಿಗರು ಹಾಗೂ ಮಾವುತರು ಕಣ್ಣೀರಿಟ್ಟಿದ್ದಾರೆ.
ಪ್ರಧಾನಿ ಮೋದಿ ತುಂಬಾ ಎತ್ತರದ, ಜಗತ್ತು ಗೌರವಿಸುವ ನಾಯಕ: ಸಿ.ಟಿ.ರವಿ
ಹಾಗಾಗಿ, ಕಳೆದ ಎಂಟತ್ತು ದಿನಗಳಿಂದ ನಡೆಯುತ್ತಿದ್ದ ಕಾಡಾಣೆ ಸೆರೆ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಸಿ.ಎಫ್.) ರಮೇಶ್ ಬಾಬು ಮಾತನಾಡಿ ಮೂಡಿಗೆರೆ ಅರಣ್ಯ ವಲಯದಲ್ಲಿ ಕೈಗೊಂಡಿರುವ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದರು. ಕಾರ್ಯಾಚರಣೆ ವೇಳೆ ಕಾಡಾನೆಯೊಂದು ಸಾವನ್ನಪ್ಪಿದ್ದು ಮತ್ತು ಸಕಲೇಶಪುರ ಭಾಗದಲ್ಲಿ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಮೃತಪಟ್ಟಿರುವ ಹಿನ್ನಲೆಯಲ್ಲಿ ಸದ್ಯಕ್ಕೆ ಆನೆ ಕಾರ್ಯಾಚರಣೆ ಸ್ಥಗಿತಗೊಳಿಸಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಡಿ.ಸಿ.ಎಫ್. ಅವರು ಸ್ಪಷ್ಟನೆ ನೀಡಿದ್ದು ಈ ಘಟನೆಗಳ ಕಾರಣದಿಂದ ಎರಡು ದಿನಗಳ ಕಾಲ ಕಾರ್ಯಾಚರಣೆಗೆ ಬಿಡುವು ನೀಡಿದ್ದೆವು. ಇದೀಗ ಕಾರ್ಯಾಚರಣೆ ಎಂದಿನಂತೆ ಮುಂದುವರಿಯಲಿದೆ ಎಂದರು.