'ಕೊರೋನಾ ಸಂದರ್ಭದಲ್ಲೂ ಸಚಿವರು, ಶಾಸಕರು ಸಿಎಂ ಆಗಲು ಹವಣಿಸುತ್ತಿದ್ದಾರೆ'

Kannadaprabha News   | Asianet News
Published : Jul 30, 2020, 07:11 AM ISTUpdated : Jul 30, 2020, 07:17 AM IST
'ಕೊರೋನಾ ಸಂದರ್ಭದಲ್ಲೂ ಸಚಿವರು, ಶಾಸಕರು ಸಿಎಂ ಆಗಲು ಹವಣಿಸುತ್ತಿದ್ದಾರೆ'

ಸಾರಾಂಶ

ಕೋವಿಡ್‌ನ ಈ ಸಂದರ್ಭದಲ್ಲಿ ಮಂತ್ರಿಯಾಗಲು ಹವಣಿಸುತ್ತಿದ್ದಾರೆ: ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ| ಸರ್ಕಾರದಲ್ಲಿ ಬ್ರಮಣಿರತ ಶಾಸಕರು, ಮಂತ್ರಿಗಳಿದ್ದಾರೆ. ಮಂತ್ರಿಯಾಗಲು ಲಕ್ಷ್ಮಣ ಸವದಿ, ಪ್ರಹ್ಲಾದ ಜೋಶಿ, ಯತ್ನಾಳ ತುದಿಗಾಲಿನ ಮೇಲಿದ್ದಾರೆ| ಯಡಿಯೂರಪ್ಪ ಅವರ ಖುರ್ಚಿ ಖಾಲಿ ಆದ ಮೇಲೆ ಇವರ ಪಾಳಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ|

ಧಾರವಾಡ(ಜು.30): ಕೊರೋನಾ ನಿಯಂತ್ರಿಸುವುದನ್ನು ಬಿಟ್ಟು ರಾಜ್ಯ ಸರ್ಕಾರದ ಸಚಿವರು, ಶಾಸಕರು ಮುಖ್ಯಮಂತ್ರಿಗಳಾಗಲು ಹವಣಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದ್ದಾರೆ. 

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ಬ್ರಮಣಿರತ ಶಾಸಕರು, ಮಂತ್ರಿಗಳಿದ್ದಾರೆ. ಮಂತ್ರಿಯಾಗಲು ಲಕ್ಷ್ಮಣ ಸವದಿ, ಪ್ರಹ್ಲಾದ ಜೋಶಿ, ಯತ್ನಾಳ ತುದಿಗಾಲಿನ ಮೇಲಿದ್ದಾರೆ. ಯಡಿಯೂರಪ್ಪ ಅವರ ಖುರ್ಚಿ ಖಾಲಿ ಆದ ಮೇಲೆ ಇವರ ಪಾಳಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ತಿಳಿಸಿದ್ದಾರೆ. 

ಕೊರೋನಾ ರಣಕೇಕೆ: ಆಸ್ಪತ್ರೆಯಲ್ಲಿ ಬೆಡ್‌ ಇಲ್ಲ... ಮನೆಯಲ್ಲಿ ಇರಿ ಅಂತಿದೆ ಧಾರವಾಡ ಜಿಲ್ಲಾಡಳಿತ..!

ಒಟ್ಟಾರೆ ಬಿಜೆಪಿಯಲ್ಲಿ ಗೊಂದಲದ ವಾತಾವರಣವಿದೆ. ಈ ಗೊಂದಲ ಬಗೆಹರಿಸಿ ಕೊರೋನಾ ನಿಯಂತ್ರಿಸಲಿ, ಸಮಸ್ಯೆಗಳಿಗೆ ಸ್ಪಂದಿಸಲಿ. ಮೈತ್ರಿ ಸರ್ಕಾರವನ್ನು ಅಸ್ತಿರಗೊಳಿಸಿದ ಬಿಜೆಪಿಯಲ್ಲಿ ಇದೀಗ ಅಸಮಧಾನ ಭುಗಿಲೆದ್ದಿದೆ ಎಂದು ಕೋನರಡ್ಡಿ ಹೇಳಿದ್ದಾರೆ. 
 

PREV
click me!

Recommended Stories

ಕೋಗಿಲು ಲೇಔಟ್‌ನಲ್ಲಿ 167 ಮನೆಗಳು ನೆಲಸಮ: ಆದ್ರೆ ಹೊಸ ಫ್ಲ್ಯಾಟ್‌ ಪಡೆಯಲು 250 ಅರ್ಜಿ ಸಲ್ಲಿಕೆ!
Ballari Banner row: ಬಿಜೆಪಿಯವರಿಂದಲೇ ಬಳ್ಳಾರಿ ಬಿಹಾರವಾಗಿದೆ! - ಜನಾರ್ದನ ರೆಡ್ಡಿ ವಿರುದ್ಧ ನಾಗೇಂದ್ರ ಕಿಡಿ